ರಾಜ್ಯ

ಬೆಳಗಾವಿ, ಬಾಗಲಕೋಟೆಯ ಪ್ರವಾಹ ಪ್ರೀಡಿತ ಪ್ರದೇಶಗಳ ವೈವಾನಿಕ ಸಮೀಕ್ಷೆ

ಬೆಳಗಾವಿ/ ಬಾಗಲಕೋಟೆ prajakiran.com : ಉತ್ತರಕರ್ನಾಟಕ ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದ ಸಂಭವಿಸಿದ ಅಪಾರ ಹಾನಿಯ ವೈಮಾನಿಕ ಸಮೀಕ್ಷೆಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಂಗಳವಾರ ನಡೆಸಿದರು. ಬೆಳಗಾವಿಹಾಗೂ ಬಾಗಲಕೋಟೆ ಜಿಲ್ಲೆಯ ಹಲವು ಪ್ರದೇಶಗಳ ವಸ್ತುಸ್ಥಿತಿಯನ್ನು ಕಣ್ಣಾರೆ ಕಂಡರು. ಜನರಿಗೆ ಆದಅಪಾರ ಹಾನಿ ಕುರಿತು ಕಂದಾಯ ಸಚಿವ ಆರ್. ಅಶೋಕ್, ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ, ಡಿಸಿಎಂ ಲಕ್ಷ್ಮಣ ಸವದಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಂದ ಪಡೆದುಕೊಂಡರು. ಇದಕ್ಕು ಮುನ್ನ ಬೆಳಗಾವಿಯಲ್ಲಿಧಾರವಾಡ, ಬೆಳಗಾವಿ ಹಾಗೂ ಇತರ ಜಿಲ್ಲೆಗಳ ಅಧಿಕಾರಿಗಳ […]

ರಾಜ್ಯ

ಸಿಎಂ ಬಿ ಎಸ್ ವೈ ಭೇಟಿ ಮಾಡಿದ ಬಿ.ಎಲ್. ಸಂತೋಷ

ಬೆಂಗಳೂರು prajakiran.com : ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ ಶನಿವಾರ ಬೆಳಗ್ಗೆ ಸಿಎಂ ಬಿ ಎಸ್ ವೈ ಅವರ ಕಾವೇರಿ ನಿವಾಸಕ್ಕೆ ಭೇಟಿ ಮಾಡಿ 45 ನಿಮಿಷಗಳ ಕಾಲ ಮಾತುಕತೆ ನಡೆಸಿದರು. ಗಣೇಶ ಚತುರ್ಥಿ ಸಂದರ್ಭದಲ್ಲಿಯೇ ಬಿ.ಎಲ್. ಸಂತೋಷ ಹಾಗೂ ಸಿಎಂ ಯಡಿಯೂರಪ್ಪ ಭೇಟಿ ಮಾಡಿರುವುದು ರಾಜ್ಯ ರಾಜಕೀಯವಾಗಿ ತೀವ್ರ ಕುತೂಹಲ ಕೆರಳಿಸಿದೆ. ಬಿ.ಎಲ್. ಸಂತೋಷ ಅವರ ಈ ಭೇಟಿ ಹಿಂದೆ ರಾಜಕೀಯ ಕಾರಣಗಳಿವೆಯಾ, ಅಥವಾ ಕೇವಲ ಹಬ್ಬದ ಶುಭಾಶಯಕ್ಕಷ್ಟೇ ಸಿಮೀತವಾಗಿದೆಯಾ ಎಂಬ ಗುಸು […]

ರಾಜ್ಯ

ತಾರಕಕ್ಕೇರಿದ ಸಿದ್ದರಾಮಯ್ಯ-ನಳೀನಕುಮಾರ್ ಕಟೀಲ್ ಟ್ವೀಟ್ ವಾರ್…!?

ಬೆಂಗಳೂರು prajakiran.com : ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲ್ ಅವರ ಟ್ವೀಟ್ ವಾರ ತಾರಕಕ್ಕೇರಿದೆ. ಪರಸ್ಪರ ಒಬ್ಬರಿಗೊಬ್ಬರು ಟ್ವೀಟರ್ ನಲ್ಲಿಯೇ ಕಾಲೆಳೆದುಕೊಂಡಿದ್ದು, ಅವರಅಭಿಮಾನಿಗಳು ಕೂಡ ಪರಸ್ಪರ ಟ್ವೀಟ್, ರಿಟ್ವೀಟ್ ಮಾಡಿ ತಿರುಗೇಟು ಕೊಟ್ಟಿದ್ದಾರೆ. ಅವರ ಟ್ವೀಟ್ ಗಳ ವಿವರ ಹೀಗಿದೆ ನೋಡಿ… ನಳೀನಕುಮಾರ್ ಕಟೀಲ್ ಅವರು, ಅಯ್ಯೊ @siddaramaiahನವರೆ, ಹಿಂದುಗಳಿಗೆ ನಿಮ್ಮ ನಿಜ ಬಣ್ಣದ ಅರಿವಿದೆ. ಎಸ್ ಡಿಪಿಐ ಕಾರ್ಯಕರ್ತರ ವಿರುದ್ಧದ ಪ್ರಕರಣಗಳನ್ನು ಹಿಂಪಡೆದವರು ಯಾರು ಎಂಬುದು ಹಿಂದುಗಳು ಮರೆತಿಲ್ಲ. ನೀವು […]

ಅಂತಾರಾಷ್ಟ್ರೀಯ

ಸಂತೋಷಜಿ ಭೇಟಿ ಮಾಡಿದ ಇಬ್ಬರು ಸಚಿವರು…!

ಬೆಂಗಳೂರು prajakiran.com : ಬಿಜೆಪಿ ಹೈಕಮಾಂಡ್ ನಾಯಕರಲ್ಲಿ ಒಬ್ಬರಾಗಿರುವ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಶುಕ್ರವಾರ ರಾಜ್ಯದ ಇಬ್ಬರು ಸಚಿವರು ಪ್ರತ್ಯೇಕವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದರು. ಅದರಲ್ಲೂ ಎರಡು ಪ್ರಮುಖ ವಿಚಾರಗಳ ಕುರಿತು ಇಬ್ಬರು ಸಚಿವರಿಂದ ಮಾಹಿತಿ ಸಂಗ್ರಹಿಸಿದ್ದಾರೆ ಎನ್ನಲಾಗಿದೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಬಳಿ ಬೆಂಗಳೂರು ಡಿ.ಜೆ. ಹಳ್ಳಿ ಗಲಾಟೆ ಕುರಿತು ಸಂಪೂರ್ಣ ವರದಿ ಪಡೆದಿದ್ದಾರೆ. ಅಲ್ಲದೆ, ಮುಂದೆ ಕೈ ಗೊಳ್ಳಬೇಕಾದ ಕ್ರಮಗಳು ಕುರಿತು ಸಮಾಲೋಚನೆ ನಡೆಸಿದ್ದಾರೆ ಎಂದು […]

ರಾಜ್ಯ

ರಾಜ್ಯದ ಬಿಜೆಪಿ ಸರ್ಕಾರ 33 ಪರ್ಸೆಂಟೇಜ್ ಸರ್ಕಾರ ಎಂದ ಹೊರಟ್ಟಿ

ಧಾರವಾಡ prajakiran.com : ಭೂ ಸುಧಾರಣೆ ಕಾಯ್ದೆ ತಿದ್ದುಪಡಿ, ರಾಜ್ಯದ ಬಿಜೆಪಿ ಸರಕಾರದ ಆಡಳಿತ ವೈಫಲ್ಯ ವಿರೋಧಿಸಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಜಿಲ್ಲೆಯ ಜೆಡಿಎಸ್ ಮುಖಂಡರು ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು. ಈ ವೇಳೆ ಮಾತನಾಡಿದ ಮಾಜಿ ಸಚಿವ ಬಸವರಾಜ ಹೊರಟ್ಟಿ, ಬಿಜೆಪಿ ಸರ್ಕಾರದ ಮಾನ ಹರಾಜು ಹಾಕಿದರು. ಮಾತಿನುದ್ದಕ್ಕು ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದರು. ಸಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರನ್ನು ರಬ್ಬರಸ್ಟ್ಯಾಂಪ್  ಮತ್ತು ಹೆಬ್ಬಟ್ಟು ರಾಜ್ಯಪಾಲ ಎಂದು ಜರಿದರು.  ಸರ್ಕಾರ […]

ರಾಜ್ಯ

ಧಾರವಾಡ ಜಿಲ್ಲೆಯ ನೆರೆ ನಿರ್ವಹಣೆಯಲ್ಲಿ ಸರಕಾರ ವಿಫಲ

ಧಾರವಾಡ prajakiran.com : ಜಿಲ್ಲೆಯಲ್ಲಿನ ಮಳೆ ಮತ್ತು ನೆರೆ ನಿರ್ವಹಣೆಯಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ ಆರೋಪಿಸಿದರು. ಅವರು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಮಳೆ ಮತ್ತು ಕೆಲವು ಭಾಗಗಳಲ್ಲಿನ ನೆರೆ ಹಾವಳಿಯಿಂದ ಜನ ಜೀವನ ಸಂಕಷ್ಟಕ್ಕೆ ಸಿಲುಕಿದೆ. ವಿಶೇಷವಾಗಿ ರೈತರ ಹೊಲದಲ್ಲಿನ ಬೆಳೆಗಳು ನಾಶವಾಗಿದ್ದು, ರೈತರನ್ನು ಮತ್ತಷ್ಟು ಸಂಕಷ್ಟದ ಜಾಲಕ್ಕೆ ನೂಕಿದೆ. ಧಾರವಾಡ ಜಿಲ್ಲೆಯಲ್ಲಿ ಹರಿಯುವ ಬೆಣ್ಣಿ ಹಳ್ಳ ಮತ್ತು ತುಪ್ಪರಿ ಹಳ್ಳಗಳ ಇಕ್ಕೆಲೆಗಳಲ್ಲಿನ […]

ರಾಜ್ಯ

ಬಿಜೆಪಿ ಮಾಜಿ ಶಾಸಕ ಸಿ. ಗುರುಸ್ವಾಮಿ ನಿಧನ

ಚಾಮರಾಜನಗರ prajakiran.com : ಚಾಮರಾಜನಗರದ ಮೊದಲ ಬಿಜೆಪಿ ಶಾಸಕರಾಗಿದ್ದ ಸಿ.ಗುರುಸ್ವಾಮಿ ಬುಧವಾರ ಬೆಳಗ್ಗೆ ಮೈಸೂರಿನ ಜೆ.ಎಸ್.ಎಸ್ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅವರಿಗೆ ಆ. 5ರಂದು ಕೋವಿಡ್ ಪಾಸಿಟಿವ್ ದೃಢಪಟ್ಟಿತ್ತು. ಈ ಹಿನ್ನಲೆಯಲ್ಲಿ ಅವರು ಕೆಲವು ದಿನಗಳಿಂದ ಕೊರೊನಾ ಪಾಸಿಟಿವ್ ಗೆ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಬುಧವಾರ ಬೆಳಗ್ಗೆ ಹೃದಯಾಘಾತದಿಂದ ವಿಧಿವಶರಾದರು.   ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ವಾಟಾಳ್ ನಾಗರಾಜ್ ಅವರನ್ನು 1999ರಲ್ಲಿಸೋಲಿಸಿ ವಿಧಾನಸಭೆ ಪ್ರವೇಶಿಸಿದ್ದರು. ವೃತ್ತಿಯಿಂದ ವಕೀಲರಾಗಿದ್ದಅವರು ಜನತಾ ಪಕ್ಷ, ಜನತಾದಳದಿಂದ ರಾಜಕೀಯ ಆರಂಭಿಸಿದ್ದರು. ಕೇಂದ್ರದ ಮಾಜಿ […]

ರಾಜ್ಯ

ಮುಧೋಳದ ರನ್ನ ಸಕ್ಕರೆ ಕಾರ್ಖಾನೆ ಖಾಸಗಿಕರಣಕ್ಕೆ ವಿರೋಧ

ಧಾರವಾಡ prajakiran.com : ಮುಧೋಳದ ರನ್ನ ಸಕ್ಕರೆ ಕಾರ್ಖಾನೆಯನ್ನು ಖಾಸಗಿಯವರಿಗೆ ವಹಿಸುವ ರಾಜ್ಯದ ಬಿಜೆಪಿ ಸರಕಾರದ ಪ್ರಯತ್ನವನ್ನು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ ಖಂಡಿಸಿದ್ದಾರೆ. ರನ್ನ ಸಹಕಾರಿ ಸಕ್ಕರೆ ಕಾರ್ಖಾನೆಯ ಖಾಸಗೀಕರಣ ಕಾರ್ಯ ಆಘಾತಕಾರಿ ವಿಷಯವಾಗಿದೆ. ಹಲವಾರು ವರ್ಷಗಳಿಂದ ಸಾವಿರಾರು ರೈತರು ಶ್ರಮವಹಿಸಿದ ಫಲವಾಗಿರುವ ರನ್ನ ಸಕ್ಕರೆ ಕಾರ್ಖಾನೆಯನ್ನು, ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಏಕಸ್ವಾಮ್ಯದ ಮಾಲೀಕರಿಗೆ ವಹಿಸಲು ಹೊರಟಿರುವ ನಡೆ ಸರಿಯಲ್ಲ. ಸಹಕಾರಿ ವಲಯದ ಆಸ್ತಿಯನ್ನು ಬಂಡವಾಳಶಾಹಿಗಳಿಗೆ ಮಾರಲು ತರಾತುರಿ ನಡೆಸಿರುವ ಸರಕಾರದ ನಿರ್ಣಯ ಖಂಡನೀಯ. […]

ರಾಜ್ಯ

ಧಾರವಾಡದಲ್ಲಿ ಯೂರಿಯಾ ಗೊಬ್ಬರ ಪಡೆಯಲು ರೈತರ ಹರಸಾಹಸ….!

ಧಾರವಾಡ prajakiran.com :  ಧಾರವಾಡ ಜಿಲ್ಲೆಯಾದ್ಯಂತ  ಕಳೆದ ಹಲವು ದಿನಗಳಿಂದ ಯೂರಿಯಾ ಗೊಬ್ಬರ ಪಡೆಯಲು ರೈತರು ಪರದಾಡುತ್ತಿರುವ ಹಾಗೂ ಹರ ಸಾಹಸಪಡುತ್ತಿರುವ  ಘಟನೆಗಳು ಪದೇ ಪದೇ ಮರುಕಳುಸುತ್ತಿವೆ. ಅದರಲ್ಲೂ ನಿನ್ನೇ ಧಾರವಾಡ ತಾಲೂಕಿನ ಮರೇವಾಡ ಹಾಗೂ ಮಾಧನಭಾವಿ ಗ್ರಾಮಗಳಲ್ಲಿ ಲಾರಿ ಬಳಿಯೇ ರೈತರು ಮುಗಿಬಿದ್ದು ಖರೀದಿಸುತ್ತಿರುವುದು ನೋಡಿದರೆ ರೈತರ ಆತಂಕ ಸ್ಪಷ್ಟವಾಗುತ್ತದೆ. ಗೊಬ್ಬರ ಲೋಡ್ ಇಳಿಸಲು ಬಂದ ಲಾರಿಗೇ ಮುಗಿ ಬಿದ್ದ ನೂರಾರು ರೈತರು, ಅಲ್ಲೇ ಆಧಾರ್ ಕಾರ್ಡ ಹಾಗೂ ಹಣ ಕೊಟ್ಟು ಗೊಬ್ಬರದ ಚೀಲ ಪಡೆದುಕೊಂಡರು. ಗೋಬ್ಬರ […]

ಅಂತಾರಾಷ್ಟ್ರೀಯ

ದೆಹಲಿಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಭೇಟಿಯಾದ ಸಚಿವೆ ಶಶಿಕಲಾ ಜೊಲ್ಲೆ ….!

ನವದೆಹಲಿ prajakiran.com : ಸಚಿವ ಶಶಿಕಲಾ ಜೊಲ್ಲೆ ತಮ್ಮ ಪತಿ ಹಾಗು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಜೊತೆಗೆ ದಿಢೀರ ಆಗಿ ದೆಹಲಿ ದೌಡಾಯಿಸಿದ್ದಾರೆ. ಇದೇ ಸಂದರ್ಭದಲ್ಲಿ ದೆಹಲಿಯ ಕರ್ನಾಟಕ ಭವನದಲ್ಲಿ ಬೀಡು ಬಿಟ್ಟಿರುವ ಡಿಸಿಎಂ ಲಕ್ಷ್ಮಣ ಸವದಿಅವರನ್ನು ಭೇಟಿಮಾಡಿ ಮಾತುಕತೆ ನಡೆಸಿರುವುದು ತೀವ್ರ ಕುತೂಹಲ ಕೆರಳಿಸಿದೆ. ಇದರಿಂದಾಗಿ ರಾಜ್ಯ ಬಿಜೆಪಿಯಲ್ಲಿ ಪಕ್ಷದ ಆಂತರಿಕ ಚಟುವಟಿಕೆಗಳು ಇನ್ನಷ್ಟು ಗರಿ ಗೆದರುವಂತೆ ಮಾಡಿವೆ. ಹಾಗಿದ್ದರೆ ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ, ಸಚಿವ ಸಂಪುಟ ಪುನರ್ ರಚನೆ ಕುರಿತು ಬೆಳವಣಗೆಗಳು […]