ರಾಜ್ಯ

ರಾಜ್ಯಾದ್ಯಂತ ಅ. 12 ರಿಂದ 30 ರವರೆಗೆ ಶಾಲೆಗಳಿಗೆ ಮಧ್ಯಂತರ ರಜೆ

ಬೆಂಗಳೂರು prajakiran.com : ರಾಜ್ಯದಲ್ಲಿ ಕೋವಿಡ್ ಸೋಂಕು ಹಿನ್ನೆಲೆಯಲ್ಲಿ ಸದ್ಯಕ್ಕೆ ಶಾಲೆಗಳನ್ನು ಮತ್ತು ವಿದ್ಯಾಗಮ ಸ್ಥಗಿತಗೊಳಿಸಲು ಈಗಾಗಲೇ ಆದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ಅವರು ಈ ಕುರಿತು ಭಾನುವಾರ ಟ್ವೀಟ್ ಮಾಡಿದ್ದು, ಹಲವಾರು ಶಿಕ್ಷಕರು ಕೋವಿಡ್ ಸೋಂಕಿಗೆ ಒಳಗಾಗಿರುವುದರಿಂದ ಮತ್ತು ಮಕ್ಕಳ ಆರೋಗ್ಯ ಹಿತದೃಷ್ಟಿಯಿಂದ ದಿನಾಂಕ 12-10-2020 ರಿಂದ 30-10-2020 ರವರೆಗೆ ಶಾಲೆಗಳಿಗೆ ಮಧ್ಯಂತರ ರಜೆ ಘೋಷಿಸಲು ಮುಖ್ಯಮಂತ್ರಿ ಯಡಿಯೂರಪ್ಪ @BSYBJP ಆದೇಶಿಸಿದ್ದಾರೆ. ಇದು ರಾಜ್ಯದ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಶಿಕ್ಷಕರಿಗೆ […]

ರಾಜ್ಯ

ಶಿರಾ, ಆರ್.ಆರ್.ನಗರ ಅಭ್ಯರ್ಥಿ ಹೆಸರು ಎರಡು ದಿನಗಳಲ್ಲಿ ಹೈಕಮಾಂಡನಿಂದ ಪ್ರಕಟ

ಧಾರವಾಡ prajakiran.com : ರಾಜ್ಯದ ಶಿರಾ ಮತ್ತು ಆರ್.ಆರ್. ನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳನ್ನು ಎರಡು ದಿನಗಳಲ್ಲಿ ಹೈಕಮಾಂಡ್ ಪ್ರಕಟಿಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ ಹೇಳಿದರು. ಅವರು ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಬಿಜೆಪಿ ಕೋರ್ ಕಮೀಟಿಯಲ್ಲಿ ಚರ್ಚಿಸಿ ಈಗಾಗಲೇ ಕೇಂದ್ರಕ್ಕೆ ಅಭ್ಯರ್ಥಿಗಳ ಹೆಸರು ಕಳುಹಿಸಿದ್ದೇವೆ. ಆದ್ದರಿಂದ ಇನ್ನೆರಡು ದಿನಗಳಲ್ಲಿ ವರಿಷ್ಠರು ಅಭ್ಯರ್ಥಿಗಳನ್ನು ಅಂತಿಮಗೊಳಿಸಲಿದ್ದಾರೆ ಎಂದರು. ವಿಧಾಪರಿಷತ್ ಚುನಾವಣೆಗೆ ನಾವು ಪೂರ್ಣ ತಯಾರಿ ಮಾಡಿಕೊಂಡಿದ್ದೇವೆ. ಶಿರಾದಲ್ಲಿ ಕಾಂಗ್ರೆಸ್, ಜೆಡಿಎಸ್ ಮತದಾರರು […]

ರಾಜ್ಯ

ನಾಯಕತ್ವ ಬದಲಾವಣೆಯ ಊಹಾಪೋಹಗಳಿಗೆ ತೆರೆಎಳೆದ ಬಿ ಎಸ್ ವೈ

ಬೆಂಗಳೂರು prajakiran.com : ಆತಂಕ, ಅಳಲಿನಲ್ಲಿಯೇ ನವದೆಹಲಿಗೆ ಆಗಮಿಸಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಿಜೆಪಿ ರಾಷ್ಟ್ರೀಯ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿ ನಾಯಕತ್ವ ಬದಲಾವಣೆಯ ಊಹಾಪೋಹಗಳಿಗೆ ತೆರೆಎಳೆದಿದ್ದಾರೆ. ಆ  ಮೂಲಕ ಪಕ್ಷದಲ್ಲಿನ ಯಡಿಯೂರಪ್ಪ ವಿರೋಧಿ ಗುಂಪು, ಹಿತಶತ್ರುಗಳ ವಿರುದ್ದ ಗೆಲುವು ಸಾಧಿಸಿ ಮರಳುವಾಗ ಎದೆ ಉಬ್ಬಿಸಿ ಹೊರ ಬಂದ್ದಿದ್ದಾರೆ. ಕೆಲವರು ಅವರ ನಾಯಕತ್ವ ವಿರೋಧ, ವಯಸ್ಸಿನ ಕಾರಣ ಮುಂದಿಟ್ಟು ಮುಖ್ಯಮಂತ್ರಿ ಗಾದಿಯಲ್ಲಿ ಮುಂದುವರೆಸುವುದು ಕಷ್ಟ ಸಾಧ್ಯ  ಎಂದೆ ಬಿಂಬಿಸಲಾಗಿತ್ತು. ಆದರೆ ಈ ಬಗೆ ಬಿ ಎಸ್ ವೈ […]

ರಾಜ್ಯ

ನಿಗಮ-ಮಂಡಳಿ ಹಂಚಿಕೆ ಬೆನ್ನಲ್ಲೇ ಬಿಜೆಪಿಯಲ್ಲಿ ಭುಗಿಲೆದ್ದ ಶಾಸಕರ ಅಸಮಾಧಾನ….!

ಬೆಂಗಳೂರು : ರಾಜ್ಯದ ಬಿಜೆಪಿ ಸರಕಾರ ಒಂದು ವರ್ಷ ಯಶಸ್ಸಿನ ಸಂಭ್ರಮದಲ್ಲಿರುವಾಗಲೇ ಸಚಿವ ಸ್ಥಾನದ ಮೇಲೆ ಕಣ್ಣೀಟ್ಟಿದ್ದಅನೇಕರು ತಮಗೆ ಸಚಿವ ಸ್ಥಾನ ಸಿಗದೆ ಕೇವಲ ನಿಗಮ ಮಂಡಳಿಗೆ ತೃಪ್ತಿಪಟ್ಟುಕೊಳ್ಳುವಂತೆ ಮಾಡಿದ ಹಿನ್ನಲೆಯಲ್ಲಿ ಅಸಮಾಧಾನ ಹೊರ ಹಾಕಿದ್ದಾರೆ. ಅದಕ್ಕೆ ಕಾರಣ ನಿನ್ನೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಅವರು ಪ್ರಕಟಿಸಿದ್ದ 20 ಶಾಸಕರ ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ಪಟ್ಟಿ. ಮೊದಲು 24 ಶಾಸಕರನ್ನು ನೇಮಿಸಲಾಗಿತ್ತು. ಆನಂತರ ನಾಲ್ವರು ಶಾಸಕರ ಹೆಸರನ್ನು ತಾಂತ್ರಿಕ ಬೆಳವಣಿಗೆಯಿಂದ ಕೈ ಬಿಡಲಾಗಿತ್ತು. ಹೀಗಾಗಿ ಆರು ಬಾರಿ, […]

ರಾಜ್ಯ

ಮುಖ್ಯಮಂತ್ರಿ ಜೊತೆಗೆ ನೇರ ಸಂವಾದ ನಡೆಸಿದ ಧಾರವಾಡದ ಕಟ್ಟಡ ಕಾರ್ಮಿಕ

ಧಾರವಾಡ prajakiran.com : ರಾಜ್ಯ ಸರ್ಕಾರ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ   ಮುಖ್ಯಮಂತ್ರಿಗಳ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಸೋಮವಾರ ನಡೆದ “ಸಮಸ್ಯೆ-ಸವಾಲುಗಳ ವರ್ಷ; ಪರಿಹಾರದ ಸ್ಪರ್ಶ” ಕಾರ್ಯಕ್ರಮವು ವರ್ಚುವಲ್ ತಂತ್ರಜ್ಞಾನದ ಮೂಲಕ ನೇರ ಪ್ರಸಾರವಾಯಿತು.  ರಾಜ್ಯದ ಎಲ್ಲಾ ೩೦ ಜಿಲ್ಲೆಗಳಿಂದ ಏಕಕಾಲಕ್ಕೆ ಕಾರ್ಯಕ್ರಮ ಸಂಯೋಜಿಸಿ ಮುಖ್ಯಮಂತ್ರಿಗಳೊಂದಿಗೆ ನೇರ ಸಂವಹನ ಏರ್ಪಡಿಸಿದ್ದು ಈ ಕಾರ್ಯಕ್ರಮದ ವಿಶೇಷವಾಗಿತ್ತು. ಧಾರವಾಡದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನೇರ ಪ್ರಸಾರದ ವೀಕ್ಷಣೆಯ ಏರ್ಪಾಡು ಮಾಡಲಾಗಿತ್ತು.  ಬೃಹತ್, ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ […]

ರಾಜ್ಯ

ಪ್ರತಿ ಉಪಕರಣದಖರೀದಿಯಲ್ಲೂ ಅಕ್ರಮ, ಅವ್ಯವಹಾರ ಬಯಲು ಮಾಡಿದ ಸಿದ್ದರಾಮಯ್ಯ

ಬೆಂಗಳೂರು prajakiran.com : ರಾಜ್ಯದ ಬಿಜೆಪಿ ಸರಕಾರ ಕೋವಿಡ್ 19 ಪ್ರತಿ ಉಪಕರಣದಖರೀದಿಯಲ್ಲೂ ಅಕ್ರಮ, ಅವ್ಯವಹಾರ ನಡೆಸಿದೆ ಎಂದು ದಾಖಲೆ ಸಮೇತ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಯಲು ಮಾಡಿದರು. ಅವರು ಗುರುವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಬಿಜೆಪಿ ಸರಕಾರ ಪ್ರತಿಯೊಂದು ವಸ್ತುವನ್ನು ಖರೀದಿಸಿರುವುದರಲ್ಲಿ ಅಕ್ರಮ, ಅವ್ಯವಹಾರ ನಡೆಸಿರುವ ಕುರಿತು ಎಳೇ ಎಳೆಯಾಗಿ ವಿವರಿಸಿದರು. ಕೇಂದ್ರ ಸರಕಾರ ಪಿಎಂ ಕೇರ್  ಫಂಡ್ 50 ಸಾವಿರ ವೆಂಟಿಲೇಟರ್ ಅನ್ನು 2 ಸಾವಿರ ಕೋಟಿಯಲ್ಲಿ ಖರೀದಿ ಮಾಡಿದೆ. ಅದರ […]

ರಾಜ್ಯ

ಹಳ್ಳಿಹಕ್ಕಿ ಹೆಚ್. ವಿಶ್ವನಾಥ, ಸಿ.ಪಿ. ಯೋಗೇಶ್ವರ ಸೇರಿ ಐವರು ಮೇಲ್ಮನೆ ಪ್ರವೇಶ

ಬೆಂಗಳೂರು prajakiran.com : ಹುಣಸೂರು ವಿಧಾನ ಸಭಾ ಉಪಚುನಾವಣೆಯಲ್ಲಿ ಸೋತಿದ್ದ ಮಾಜಿ ಸಚಿವ ಹಳ್ಳಿ ಹಕ್ಕಿ ಹೆಚ್. ವಿಶ್ವನಾಥ ಹಾಗೂ ಚೆನ್ನಪಟ್ಟಣದಲ್ಲಿ ಸೋಲು ಅನುಭವಿಸಿದ್ದ ಸಿ.ಪಿ. ಯೋಗೀಶ್ವರ, ಮಾಜಿ ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಉತ್ತರ ಕನ್ನಡ ಜಿಲ್ಲೆಯ ಶಾಂತಾರಾಮ್ ಸಿದ್ದಿ, ತಳವಾರ ಸಾಬಣ್ಣ ಅವರನ್ನು ವಿಧಾನ ಪರಿಷತ್ ಸದಸ್ಯರಾಗಿ ನಾಮನಿರ್ದೇಶನ ಮಾಡಲಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಅವರು ಶಿಫಾರಸ್ಸು ಮಾಡಿದ ಎಲ್ಲರ ಹೆಸರುಗಳಿಗೆ ರಾಜ್ಯಪಾಲ ವಜುಬಾಯಿ ರೂಢೂಬಾಯಿ ವಾಲಾ ಅಂತಿಮ ಮುದ್ರೆ ಒತ್ತಿದ್ದಾರೆ. ಆ ಮೂಲಕ […]

ರಾಜ್ಯ

ರಾಜ್ಯದ ಯಾವುದೇ ಭಾಗದಲ್ಲೂ ಲಾಕ್ ಡೌನ್ ವಿಸ್ತರಣೆ ಇಲ್ಲ ಎಂದ ಮುಖ್ಯಮಂತ್ರಿ

ಬೆಂಗಳೂರು prajakiran.com : ಕರೋನಾ ನಿಯಂತ್ರಣಕ್ಕೆ ರಾಜ್ಯದ ರಾಜಧಾನಿ ಬೆಂಗಳೂರು ಸೇರಿ ಯಾವುದೇ ಜಿಲ್ಲೆಯಲ್ಲಿ ಲಾಕ್ ಡೌನ್ ವಿಸ್ತರಣೆ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಅವರು ಮಂಗಳವಾರ ಸಂಜೆ ರಾಜ್ಯದ ಜನತೆಯನ್ನು ಉದ್ದೇಶಿಸಿ ಮಾತನಾಡಿ, ರಾಜ್ಯ ಸರಕಾರ ಆರ್ಥಿಕ ಸಂಪನ್ಮೂಲ ಕ್ರೂಢಿಕರಣ ಮಾಡಿಕೊಳ್ಳಬೇಕು. ಸೋಂಕಿತರ ರಕ್ಷಣೆಗೆ ಒತ್ತು ನೀಡಬೇಕಿದೆ. ಹೀಗಾಗಿ  ಜನತೆಗೆ ಕೈ ಜೋಡಿಸಿ ಪ್ರಾರ್ಥಿಸುತ್ತೇನೆ. ಹಿರಿಯ ನಾಗರಿಕರು  ಹಾಗೂ ಮಕ್ಕಳು ಮನೆ ಬಿಟ್ಟು ಹೊರಗೆ ಬರಬೇಡಿ. ಸೋಂಕಿತರೊಂದಿಗೆ ಸೌಜನ್ಯದೊಂದಿಗೆ ವರ್ತಿಸಿ ಎಂದು ಕೇಳಿಕೊಂಡರು. […]

ರಾಜ್ಯ

ಬಿಜೆಪಿ ಸರಕಾರದ ವಿರುದ್ದ ಹರಿಹಾಯ್ದ ಸಿದ್ದರಾಮಯ್ಯ

ಬೆಂಗಳೂರು prajakiran.com : ಕಾಗೋಡು ಹೋರಾಟದ ಸಂದರ್ಭದಲ್ಲಿ ನಡೆದ ರೈತರ ಹಕ್ಕೋತ್ತಾಯದ ಪ್ರತಿಫಲವಾಗಿ ಉಳುವವನೇ ಭೂಮಿ ಒಡೆಯ ಎಂಬ ಕಾನೂನು ಕರ್ನಾಟಕದಲ್ಲಿ ಅಂದಿನ ಮುಖ್ಯಮಂತ್ರಿ ದೇವರಾಜ ಅರಸ್ ಅವರು ಜಾರಿಗೆ ತಂದಿದ್ದರು. ಅವರು ಅಂದು ತಂದ ತಿದ್ದುಪಡಿ ಇಡೀ ದೇಶಕ್ಕೆ ಮಾದರಿಯಾದ ಕಾಯ್ದೆಯಾಗಿತ್ತು. ಆದರೆ ಇಂದಿನ ರೈತರ ಹೆಸರಿನಲ್ಲಿ ಮೊಸಳೆ ಕಣ್ಣೀರು ಸುರಿಸುವ ಬಿಜೆಪಿಯ ರೈತ ವಿರೋಧಿ ಸರಕಾರ ಭೂ ಸುಧಾರಣೆ ಕಾಯ್ದೆಯ 79 ಎ ಅನ್ನು ರದ್ದು ಮಾಡುವ ಮೂಲಕ ಕೃಷಿಯೇತರ ಬಾಬ್ ನಿಂದ ಭೂಮಿ ಖರೀದಿಸಲು […]

ರಾಜ್ಯ

ಬಿಜೆಪಿ ಸರ್ಕಾರದ ವಿರುದ್ಧ ವಿಡಿಯೋ ಅಭಿಯಾನ ಶುರು ಮಾಡಿದ ಕಾಂಗ್ರೆಸ್

ಬೆಂಗಳೂರು prajakiran.com : ರಾಜ್ಯದಲ್ಲಿ ಕೊರೊನಾ ನಿಯಂತ್ರಣದ ಹೆಸರಿನಲ್ಲಿ‌ ನಡೆದಿರುವ ಭ್ರಷ್ಟಾಚಾರದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್  #LekkaKodi ಎಂಬ ಹ್ಯಾಷ್ ಟ್ಯಾಗ್‌ನೊಂದಿಗೆ ರಾಜ್ಯ ಸರ್ಕಾರದ ವಿರುದ್ಧ ವಿಡಿಯೋ ಅಭಿಯಾನ ಶುರು ಮಾಡಿದೆ. ಕಾಂಗ್ರೆಸ್ ಪಕ್ಷದ ಎಲ್ಲ ಶಾಸಕರು, ಸಂಸದರು, ಕಾರ್ಯಕರ್ತರು ವಿಡಿಯೊ ಮಾಡಿ, ಶೇರ್ ಮಾಡುವ ಮೂಲಕ ಇದರಲ್ಲಿ ಭಾಗವಹಿಸಬೇಕೆಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ‌ ವಿನಂತಿ ಮಾಡಿದ್ದಾರೆ. #LekkaKodi ರಾಜ್ಯ ಸರಕಾರ ಕೋವಿಡ್ ಸೋಂಕಿತರ ಆರೈಕೆಗೆ ಈವರೆಗೆ ಎಷ್ಟು ಖರ್ಚು ಮಾಡಿದೆ ಕೇಂದ್ರ ಸರಕಾರ  […]