ರಾಜ್ಯ

ನಿಗಮ-ಮಂಡಳಿ ಹಂಚಿಕೆ ಬೆನ್ನಲ್ಲೇ ಬಿಜೆಪಿಯಲ್ಲಿ ಭುಗಿಲೆದ್ದ ಶಾಸಕರ ಅಸಮಾಧಾನ….!

ಬೆಂಗಳೂರು : ರಾಜ್ಯದ ಬಿಜೆಪಿ ಸರಕಾರ ಒಂದು ವರ್ಷ ಯಶಸ್ಸಿನ ಸಂಭ್ರಮದಲ್ಲಿರುವಾಗಲೇ ಸಚಿವ ಸ್ಥಾನದ ಮೇಲೆ ಕಣ್ಣೀಟ್ಟಿದ್ದಅನೇಕರು ತಮಗೆ ಸಚಿವ ಸ್ಥಾನ ಸಿಗದೆ ಕೇವಲ ನಿಗಮ ಮಂಡಳಿಗೆ ತೃಪ್ತಿಪಟ್ಟುಕೊಳ್ಳುವಂತೆ ಮಾಡಿದ ಹಿನ್ನಲೆಯಲ್ಲಿ ಅಸಮಾಧಾನ ಹೊರ ಹಾಕಿದ್ದಾರೆ.

ಅದಕ್ಕೆ ಕಾರಣ ನಿನ್ನೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಅವರು ಪ್ರಕಟಿಸಿದ್ದ 20 ಶಾಸಕರ ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ಪಟ್ಟಿ.

ಮೊದಲು 24 ಶಾಸಕರನ್ನು ನೇಮಿಸಲಾಗಿತ್ತು. ಆನಂತರ ನಾಲ್ವರು ಶಾಸಕರ ಹೆಸರನ್ನು ತಾಂತ್ರಿಕ ಬೆಳವಣಿಗೆಯಿಂದ ಕೈ ಬಿಡಲಾಗಿತ್ತು.

ಹೀಗಾಗಿ ಆರು ಬಾರಿ, ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾದರೂ ತಮಗೆ ಸಚಿವ ಸ್ಥಾನ ಸಿಗದಿರುವುದು ಎಷ್ಟರಮಟ್ಟಿಗೆ ಸರಿ ಎಂದು ಬಹಿರಂಗವಾಗಿಯೇ ಗುಡುಗಲು ಶುರು ಮಾಡಿದ್ದಾರೆ.

ಅಲ್ಲದೆ, ಕೆಲವರು ಶಾಸಕರು ಒಂದು ಹೆಜ್ಜೆ ಮುಂದೆ ಹೋಗಿ ತಮಗೆ ನೀಡಿರುವ ನಿಗಮ ಮಂಡಳಿ ಅಧ್ಯಕ್ಷಗಾದೆ ನಿರಾಕರಿಸುವ ಮಟ್ಟಿಗೆ ಬಂದು ನಿಂತಿದ್ದಾರೆ.

ಕೆಲ ಶಾಸಕರು ಅದರಲ್ಲೂ ಮಾಜಿ ಸಚಿವರು ಹಾಗೂ ಹಿರಿಯ ಶಾಸಕರು ಪಕ್ಷ ನಮ್ಮ ಮೇಲೆ ಭರವಸೆ ಇಟ್ಟು ನೀಡಿದ ನಿಗಮ ಮಂಡಳಿಯನ್ನು ಸಮರ್ಥವಾಗಿ ನಿರ್ವಹಿಸಲಾಗುವುದು ಎಂದು ಹೇಳಿಕೊಂಡಿದ್ದಾರೆ.

ಇನ್ನೂ ಕೆಲವರು ರಾಜಕೀಯದಲ್ಲಿ ಅದೃಷ್ಟ ಏನೆಲ್ಲಾ ಕೆಲಸ ಮಾಡಲಿದೆ. ಇದು ಕೊನೆಯಲ್ಲ. ಆರಂಭವಷ್ಟೇ ಎಂದು ಸಚಿವ ಸ್ಥಾನ ಸಿಗದಿರುವವರು ಹೇಳಿಕೊಂಡಿದ್ದಾರೆ.

ಇದು ಬಿಜೆಪಿ ನಾಯಕರಿಗೆ ಸಾಕಷ್ಟು ಮುಜುಗರ ಹಾಗೂ ಪಕ್ಷದಲ್ಲಿ ಎಲ್ಲವೂ ಸರಿಯಲ್ಲ ಎಂಬಅಭಿಪ್ರಾಯ ಕೇಳಿಬರುತ್ತಿದೆ.

ಇದನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಅವರು ಯಾವ ರೀತಿ ನಿಭಾಯಿಸುತ್ತಾರೆ. ಅತೃಪ್ತಗೊಂಡ ಹಿರಿಯ ಶಾಸಕರನ್ನು ಯಾವ ರೀತಿ ಮನವೊಲಿಸುತ್ತಾರೆ ಎಂಬುದು ಕಾದು ನೋಡಬೇಕಿದೆ.  

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *