ರಾಜ್ಯ

ಪ್ರತಿ ಉಪಕರಣದಖರೀದಿಯಲ್ಲೂ ಅಕ್ರಮ, ಅವ್ಯವಹಾರ ಬಯಲು ಮಾಡಿದ ಸಿದ್ದರಾಮಯ್ಯ

ಬೆಂಗಳೂರು prajakiran.com : ರಾಜ್ಯದ ಬಿಜೆಪಿ ಸರಕಾರ ಕೋವಿಡ್ 19 ಪ್ರತಿ ಉಪಕರಣದಖರೀದಿಯಲ್ಲೂ ಅಕ್ರಮ, ಅವ್ಯವಹಾರ ನಡೆಸಿದೆ ಎಂದು ದಾಖಲೆ ಸಮೇತ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಯಲು ಮಾಡಿದರು.

ಅವರು ಗುರುವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಬಿಜೆಪಿ ಸರಕಾರ ಪ್ರತಿಯೊಂದು ವಸ್ತುವನ್ನು ಖರೀದಿಸಿರುವುದರಲ್ಲಿ ಅಕ್ರಮ, ಅವ್ಯವಹಾರ ನಡೆಸಿರುವ ಕುರಿತು ಎಳೇ ಎಳೆಯಾಗಿ ವಿವರಿಸಿದರು.

ಕೇಂದ್ರ ಸರಕಾರ ಪಿಎಂ ಕೇರ್  ಫಂಡ್ 50 ಸಾವಿರ ವೆಂಟಿಲೇಟರ್ ಅನ್ನು 2 ಸಾವಿರ ಕೋಟಿಯಲ್ಲಿ ಖರೀದಿ ಮಾಡಿದೆ. ಅದರ ಬೆಲೆ ಪ್ರತಿಯೊಂದಕ್ಕೆ 4 ಲಕ್ಷ ರೂಪಾಯಿ ಇದೆ. ಅದೇ  ವೆಂಟಿಲೇಟರ್ ಅನ್ನು ತಮಿಳುನಾಡು ನವರು 100 ವೆಂಟಿಲೇಟರ್ ಖರೀದಿಸಿದ್ದಾರೆ. ಪ್ರತಿ ಯೂನಿಟ್ ಬೆಲೆ 4.78 ಲಕ್ಷ ಗೆ ಖರೀದಿಸಿದ್ದಾರೆ.

ಅದನ್ನೇ ವೆಂಟಿಲೇಟರ್ ಖರೀದಿಯಲ್ಲಿ ಕರ್ನಾಟಕದವರು 22 ಮಾ. ರಂದು ಖರೀದಿ ಮಾಡಿದ  ಬೆಲೆ  5.60 ಲಕ್ಷ ಒಂದಕ್ಕೆ, ಮತ್ತೊಂದು 12.32 ಲಕ್ಷ, ಮಾ. 24 ರಂದು 18.20 ಲಕ್ಷ ಹೀಗೆ ಮೂರು ವಿಭಿನ್ನ ದರಗಳಲ್ಲಿ ಖರೀದಿಸಿದ್ದಾರೆ.

ಒಂದೇ ಸರಕಾರ ವಿಭಿನ್ನ ಮೂರು ದರಗಳಲ್ಲಿ ಖರೀದಿಸಲಾಗಿದೆ. ಇದನ್ನ ಭ್ರಷ್ಟಾಚಾರ, ವಾಸನೆ ಕರೆಯದೆ ಸುವಾಸನೆ ಅಂತ ಕರೆಯಬೇಕಾ ಎಂದು ಕುಟುಕಿದರು.

ಅದೇ ರೀತಿ ಪಿಪಿ ಇ ಕಿಟ್ 9.65 ಲಕ್ಷ ಖರೀದಿ ಮಾಡಿದೆ. ಅದರ ಬೆಲೆ ಮಾರುಕಟ್ಟೆಯಲ್ಲಿ 330 ರೂಪಾಯಿಗೆ ಒಂದು ಪಿಪಿಇ ಕಿಟ್ ಇದೆ. ಮಹಾರಾಷ್ಟ್ರದ ಒಂದು ಕಂಪನಿಯಿಂದ 3.5 ಲಕ್ಷ ಖರೀದಿಸಿದ್ದಾರೆ. ಅದರಲ್ಲಿ ಕಳಪೆ ಎಂದು ಗಲಾಟೆ ಮಾಡಿದ್ದಾರೆ.

ವೈದ್ಯರು ಕೂಡ ಪ್ರತಿಭಟನೆ ಮಾಡಿದ್ದರು. ಇದರಿಂದಾಗಿ ಒಂದು ಲಕ್ಷ ಪಿಪಿ ಇ ಕಿಟ್ ವಾಪಾಸ್ಸು ಕೊಟ್ಟರು. ಉಳಿದವಗಳನ್ನು ಉಪಯೋಗಿಸಿದರು ಅದಕ್ಕೆ ಒಂದು ಕಿಟ್ ಗೆ 2117 ರೂಪಾಯಿ ಕೊಟ್ಟಿದ್ದಾರೆ. 3 ಲಕ್ಷ ಕಿಟ್ ಗೆ 94.22 ಕೋಟಿ ಗೆ ಖರೀದಿಸಿದ್ದಾರೆ.

ಚೀನಾದಿಂದ ಮೂರು ಲಕ್ಷ ಪಿಪಿಇ ಕಿಟ್ ಆಮದು ಮಾಡಿಕೊಳ್ಳಲಾಗಿದೆ ಎಂದು ದಾಖಲೆ ನೀಡಿದ್ದಾರೆ ಎಂದು ಮಾಹಿತಿ ಬಿಡುಗಡೆಗೊಳಿಸಿದರು.

ಕೇಂದ್ರ ಸರ್ಕಾರ ಚೀನಾ ವಸ್ತುಗಳನ್ನು ಬಹಿಷ್ಕರಿಸಿ ಎಂದು ಹೇಳ್ತಾರೆ.ಇವರು ಅಲ್ಲಿಂದಲೇ ಖರೀದಿಸುತ್ತಾರೆ ಇದು ಇವರ ದೇಶಭಕ್ತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎನ್ 95 ಮಾಸ್ಕ ಇವರು ಖರೀದಿಸಿರುವುದು 125ರಿಂದ 150ರೂಪಾಯಿ 10 ಲಕ್ಷಖರೀದಿಸಿರುವುದಾಗಿ ಹೇಳಿದ್ದಾರೆ. ಅದೇ ರೀತಿ ಥರ್ಮಲ್ ಸ್ಕ್ಯಾನರ್ ಮಾರುಕಟ್ಟೆ ಬೆಲೆ 1500 ರಿಂದ 2000ಸಾವಿರ ರೂಪಾಯಿ ಇದೆ.

10ಸಾವಿರಕ್ಕಿಂತ ಹೆಚ್ಚು ಖರೀದಿಸಿ  ಒಂದಕ್ಕೆ 5945ರೂಪಾಯಿ ನೀಡಿದ್ದಾರೆ. ಸರಕಾರ ಮೂರು ಪಟ್ಟು ದರ ನೀಡಿ ಖರೀದಿಸಿದೆ.

ಸ್ಯಾನಿಟೇಶರ್ 500 ಎಂ ಎಲ್ ಬೆಲೆ 80ರಿಂದ 100 ರೂಪಾಯಿ ಮಾರುಕಟ್ಟೆ ಬೆಲೆ ಇದೆ. ಇವರು 250 ರೂಪಾಯಿ ನೀಡಿ ಖರೀದಿಸಿದ್ದಾರೆ. ಸಮಾಜ ಕಲ್ಯಾಣ ಇಲಾಖೆ 600 ರೂಪಾಯಿ ನೀಡಿ ಖರೀದಿಸಿದೆ.

ಆಕ್ಸಿಜನ್ (ಆಕ್ಸಲಿಟರ್) ಥೆರಪಿ 300 ಡಿವೈಸ್ ಖರೀದಿಸಿದ್ದಾರೆ. ಇದರಲ್ಲಿ ಒಂದು ಯೂನಿಟ್ ಗೆ 4 ಲಕ್ಷಕ್ಕೆ ಖರೀದಿಸಿದ್ದಾರೆ. ಒಟ್ಟು 1300 ಕೋಟಿ ನೀಡಿದ್ದಾರೆ. ಕೇರಳದವರು ಪ್ರತಿ ಯೂನಿಟ್ ಗೆ 2.69 ಲಕ್ಷ ನೀಡಿದ್ದಾರೆ.

ಇವರಿಗೂ ಅವರಿಗೆ ವ್ಯತ್ಯಾಸ ಯಾಕೆ. ಪ್ರತಿ ಒಂದಕ್ಕೆ 2ಲಕ್ಷ ವ್ಯತ್ಯಾಸ ಯಾಕೆ ಎಂದು ಪ್ರಶ್ನಿಸಿದರು.ಕರ್ನಾಟಕಕ್ಕೆ ಮಾತ್ರ ಉತ್ಪಾದನೆ ಆಗಲಿಲ್ಲವಾ ಎಂದು ತಿರುಗೇಟು ನಿಡಿದರು.

ರಾಮನಗರ, ಕಲಬುರಗಿಗೆ ಹಾನಿಕಾರಕ ಸ್ಯಾನಿಟೇಶರ್ ನೀಡಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರಕಾರ ಬೆಂಕಿ ಬಿದ್ದ ಮನೆಗೆ ಗಳ ಇಟ್ಟುಕೊಂಡಿದ್ದಾರೆ.

ಜನರ ಬರಗಾಲ ಬಂದಾಗ ಇವರಿಗೆ ಸುಖ ಬಂದಿದೆ. ಜನ ಬೀದಿ ಬೀದಿಯಲ್ಲಿ ಹೆಣ ಹೊತ್ತಗೊಂಡು ತಿರುಗಾಡುತ್ತಿದ್ದಾರೆ. ನಮಗೆ ನಾಚಿಕೆಯಾಗಿ ತಲೆ ತಗ್ಗಿಸುವಂತಾಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು.

ಈ ಪ್ರಕರಣದ ಸಂಪೂರ್ಣ ತನಿಖೆಯನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು. ಹೈಕೋರ್ಟ್ ಜಡ್ಜ್ ಮೂಲಕ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಪಕ್ಷ ಹಾಗೂ ರಾಜ್ಯದ ಜನತೆ ವತಿಯಿಂದ ಒತ್ತಾಯಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *