ರಾಜ್ಯ

ರಾಜ್ಯದ ಯಾವುದೇ ಭಾಗದಲ್ಲೂ ಲಾಕ್ ಡೌನ್ ವಿಸ್ತರಣೆ ಇಲ್ಲ ಎಂದ ಮುಖ್ಯಮಂತ್ರಿ

ಬೆಂಗಳೂರು prajakiran.com : ಕರೋನಾ ನಿಯಂತ್ರಣಕ್ಕೆ ರಾಜ್ಯದ ರಾಜಧಾನಿ ಬೆಂಗಳೂರು ಸೇರಿ ಯಾವುದೇ ಜಿಲ್ಲೆಯಲ್ಲಿ ಲಾಕ್ ಡೌನ್ ವಿಸ್ತರಣೆ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ಅವರು ಮಂಗಳವಾರ ಸಂಜೆ ರಾಜ್ಯದ ಜನತೆಯನ್ನು ಉದ್ದೇಶಿಸಿ ಮಾತನಾಡಿ, ರಾಜ್ಯ ಸರಕಾರ ಆರ್ಥಿಕ ಸಂಪನ್ಮೂಲ ಕ್ರೂಢಿಕರಣ ಮಾಡಿಕೊಳ್ಳಬೇಕು. ಸೋಂಕಿತರ ರಕ್ಷಣೆಗೆ ಒತ್ತು ನೀಡಬೇಕಿದೆ.

ಹೀಗಾಗಿ  ಜನತೆಗೆ ಕೈ ಜೋಡಿಸಿ ಪ್ರಾರ್ಥಿಸುತ್ತೇನೆ. ಹಿರಿಯ ನಾಗರಿಕರು  ಹಾಗೂ ಮಕ್ಕಳು ಮನೆ ಬಿಟ್ಟು ಹೊರಗೆ ಬರಬೇಡಿ. ಸೋಂಕಿತರೊಂದಿಗೆ ಸೌಜನ್ಯದೊಂದಿಗೆ ವರ್ತಿಸಿ ಎಂದು ಕೇಳಿಕೊಂಡರು.

ಕೋವಿಡ್ ತಡೆಯಲು ಲಾಕ್ ಡೌನ್ ಪರಿಹಾರ ಅಲ್ಲ. ರಾಜ್ಯದ ಯಾವುದೇ ಭಾಗದಲ್ಲೂ ಲಾಕ್ ಡೌನ್ ವಿಸ್ತರಣೆ ಅಲ್ಲ. ಕಂಟೋನ್ ಮೆಂಟ್ ಜೋನ್ ನಲ್ಲಿ ಮಾತ್ರ ಬಿಗಿಯಾದ ಕ್ರಮ.

ಒಂದು ಮನೆಯಿಂದ ಮತ್ತೊಂದು ಮನೆಗೆ, ಒಂದು ರಸ್ತೆಯಿಂದ ಇನ್ನೊಂದು ರಸ್ತೆಗೆ ಹೋಗಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.

ಕರೋನಾ ನಿಯಂತ್ರಣ ಆರಂಭದಲ್ಲಿ ಯಶಸ್ವಿಯಾಗಿದ್ದೇವು. ಆದರೆ ಇತ್ತೀಚೆಗೆ ಬೆಂಗಳೂರು ನಗರದಲ್ಲಿ ಗಣನೀಯವಾಗಿ ಹೆಚ್ಚಿದೆ. ಆದರೂ ಅದಕ್ಕೆ ಲಾಕ್ ಡೌನ್ ಪರಿಹಾರ ಅಲ್ಲ. ಮಾಸ್ಕ್ ಧರಿಸಬೇಕು. ಅಂತರ ಕಾಪಾಡಬೇಕು. ಕಟ್ಟು ನಿಟ್ಟಿನಲ್ಲಿ ಪಾಲಿಸಬೇಕು. ಅಂದಾಗ ಮಾತ್ರ ಅದನ್ನು ತಡೆಯಬಹುದು.

ನಮ್ಮೆಲ್ಲ ಸಚಿವರು, ಶಾಸಕರು, ವೈದ್ಯರು, ನರ್ಸ್, ಆಶಾಕಾರ್ಯಕರ್ತರು ಪ್ರಾಣದ ಹಂಗು ತೊರೆದು ಜೀವವನ್ನು ಮುಡಿಪಿಟ್ಟು ಕೆಲಸ ಮಾಡುತ್ತಿದ್ದಾರೆ. ಈ ರೀತಿ ಜೀವನವನ್ನ ಪಣವನ್ನಾಗಿಟ್ಟಿರುವ ಜನ ನಾವು ಉಳಿದುಬದುಕಬೇಕು ಎಂದರೆ ದೂರವಿರುವುದು, ಮಾಸ್ಕ್ ಧರಿಸುವುದು ಪ್ರತಿಯೊಬ್ಬರು ಪಾಲಿಸಬೇಕು.

ಎಲ್ಲೆ ಹೋದರೂ ಮಾಸ್ಕ ಧರಿಸಿ ಓಡಾಡಿ ಆಗ ಅದನ್ನು ತಡೆಯಬಹುದು. ತಜ್ಞರ ಸಲಹೆ ಐದು ತಂತ್ರಗಳು ಇವೆ. ಟ್ರೇಸ್, ಟ್ಯಾಕ್, ಟ್ರೀಟ್ ಹಾಗೂ ಟೆಕ್ನಾಲೋಜಿ ಬಳಕೆ ಮಾಡಿಕೊಳ್ಳಲಾಗುವುದು. ಒಬ್ಬರಿಂದ 47 ಜನರಿಗೆ ತಪಾಸಣೆ ಮಾಡಲಾಗುತ್ತಿದೆ. ಕೋವಿಡ್ ಹಾಗೂ ಕೋವಿಡ್ ಯೇತರ ಚಿಕಿತ್ಸೆ ಗೊಂದಲ ಸರಿಪಡಿಸಲಾಗಿದೆ.

 ಶೇ 80 ಸೋಂಕಿತರಿಗೆ ಯಾವುದೇ ರೋಗ ಲಕ್ಷಣಗಳಿಲ್ಲ. ರೋಗ ಲಕ್ಷಣಗಳಿಲ್ಲದ ಲಘು ರೋಗ ಸೋಂಕಿತರಿಗೆ ಆಸ್ಪತ್ರೆ ಅಗತ್ಯವಿಲ್ಲ. ಕೋವಿಡ್ ಕೇರ್ ಸೆಂಟರ್ ನಲ್ಲಿ ಇರಿಸಲಾಗುವುದು ಇಲ್ಲವೇ ಮನೆಯಲ್ಲಿಯೇ ಚಿಕಿತ್ಸೆ ಪಡೆಯಬೇಕು.

ಈ ಪೈಕಿ ಶೇ 5ರಷ್ಟು ಜನರಿಗೆ ಮಾತ್ರ ವೆಂಟಿಲೇಟರ್ ಅಗತ್ಯ. ಬೆಂಗಳೂರಿನಲ್ಲಿ ಕೋವಿಡ್ ಚಿಕಿತ್ಸೆಗೆ 11 ಸಾವಿರ ಹಾಸಿಗೆ ಮೀಸಲಿದೆ. ಕೋವಿಡ ಕೇರ್ ಸೆಂಟರ್, ಖಾಸಗಿ, ಸರಕಾರಿ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜ್ ನಲ್ಲಿ ಲಭ್ಯವಿದೆ. ಜನ ಆತಂಕಪಡುವ ಅಗತ್ಯವಿಲ್ಲ.

ಅದಕ್ಕೆ ಹೆದರಿ ಆತ್ಮಹತ್ಯೆ ಪ್ರಯತ್ನ ಬೇಡ ಕೋವಿಡ್ ನಿಂದ ಜನ ಹೆಚ್ಚಿನಸಂಖ್ಯೆಯಲ್ಲಿ  ಗುಣಮುಖರಾಗುತ್ತಿದ್ದಾರೆ. ಅದಕ್ಕೆ ಹೆದರಿ ಆತ್ಮಹತ್ಯೆ ಯಾವ ಕಾರಣಕ್ಕೂ ಸರಿಯಲ್ಲ ಎಂದು ಅಭಯ ನೀಡಿದರು.

ನಮ್ಮಲ್ಲಿ ಲಾಕ್ ಡೌನ್ ತೆರವುಗೊಳಿಸಿ, ಜನ ಜೀವನ ಸಹಜ ಸ್ಥಿತಿಗೆ ಬಂದ ತಕ್ಷಣ ನೆರೆಯ ಮಹಾರಾಷ್ಟ್ರ, ತಮಿಳುನಾಡು ಸೇರಿ ಬೇರೆ ರಾಜ್ಯಗಳಿಂದ ಜನ ಬಂದ ಪರಿಣಾಮ ಕೋವಿಡ್ ಹೆಚ್ಚಿದೆ. ಟೆಸ್ಟ್ ವರದಿ ವಿಳಂಬವಾಗಿತ್ತು. ಇಗ ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ ಎಂದರು.

ನಿಯಂತ್ರಣಕ್ಕೆ  ಲಾಕ್ ಡೌನ್ ಪರಿಹಾರ ಅಲ್ಲ. ಬೆಂಗಳೂರಿನ ಎಂಟು ವಲಯಗಳಿಗೆ ಸಚಿವರ, ಅಧಿಕಾರಿಗಳ ನಿಯೋಜನೆ ಮಾಡಲಾಗಿದೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ವೈರಸ್ ಹೆಚ್ಚಿದೆ. ಜಿಲ್ಲೆಯ ಜಿಲ್ಲಾಧಿಕಾರಿಗಳ ಜೊತೆಗೆ ನಿಕಟ ಸಂಪರ್ಕ ಹೊಂದಲಾಗಿದೆ.

ಬೆಂಗಳೂರು ಸೇರಿ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಸಂಕಷ್ಟದ ಸಂದರ್ಭದಲ್ಲಿ ಟೀಕೆ ಟಿಪ್ಪಣೆ ಬದಲು ರಚನಾತ್ಮಕ ಸಲಹೆ ನೀಡಬೇಕು ಸಿದ್ದರಾಮಯ್ಯ, ಡಿಕೆಶಿ ಸೇರಿ ಎಲ್ಲಾ ಮುಖಂಡರಿಗೆ ಮನವಿ ಮಾಡ್ತಿನಿ ಸಲಹೆ ಕೊಡಿ ಎಂದರು.

 ಹಾಸಿಗೆ ಮರುಬಳಕೆ ಮಾಡಲ್ಲ. ಅದನ್ನು ಸುಟ್ಟು ಹಾಕುತ್ತಿದ್ದೇವೆ. ಮಂಚಗಳನ್ನು ಮಾತ್ರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸುತ್ತೇವೆ.  ಏನೆ ಮಾಹಿತಿ ಕೇಳಿದರೂ ಕೊಡುತ್ತೇವೆ. 24 ಗಂಟೆಗಳಲ್ಲಿ ಒದಗಿಸುತ್ತೇವೆ.

ಆದರೆ, ಒಂದು ರೂಪಾಯಿ ದುರುಪಯೋಗಕ್ಕೆ ಅವಕಾಶ ಮಾಡಿಕೊಟ್ಟಿಲ್ಲ. ದಾಖಲೆ ಪರಿಶೀಲನೆ ಮಾಡಿ, ನೀವೇ ಏನೇ ಕೇಳಿದರೂ ಮಾಹಿತಿ ಕೊಡ್ತಿವಿ. ಪ್ರತಿಪಕ್ಷ ಆಡಳಿತ ಪಕ್ಷಗಳ ಮಧ್ಯೆ ಗೊಂದಲ ಬೇಡ ಜನರು ಗೊಂದಲಕ್ಕೆ ಸಿಲುಕುತ್ತಾರೆ ಎಂದರು.

ನಿಮಗೆ ಯಾವ ಮಾಹಿತಿ ಬೇಕು ಹೇಳಿ ಕೊಡ್ತಿವಿ. ಕೋವಿಡ್ ಖರೀದಿಯಲ್ಲಿ ಒಂದು ರೂಪಾಯಿ ದುರುಪಯೋಗವಾಗಿಲ್ಲ.

ಕೋವಿಡ್ ಸಂದರ್ಭದಲ್ಲಿ ಪಕ್ಷ ಭೇದ ಮರೆತು ಒಂದಾಗಿ ಎದುರಿಸಬೇಕು. ಹೇಳಿಕೆಗಳು ತಡೆಗಟ್ಟಲು ಪೂರಕವಾಗಿರಬೇಕು ಹೊರತು ಗೊಂದಲ ಸೃಷ್ಟಿಸಬೇಡಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮನವಿ ಮಾಡಿದರು.  

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *