save tree
ರಾಜ್ಯ

ಗಿಡ, ಮರಗಳಿಗೆ ರಾಖಿ ಕಟ್ಟಿದ ಜನತೆ…!

ಧಾರವಾಡ prajakiran.com : ಸಸ್ಯ ಸಂರಕ್ಷಣೆಯ ಮಹತ್ವವನ್ನು ಮನಗಾಣಿಸಲು ಧಾರವಾಡ ಅರಣ್ಯ ವಿಭಾಗದ ವತಿಯಿಂದ ವೃಕ್ಷಾ ಬಂಧನ ಎಂಬ ವಿನೂತನ ಕಾರ್ಯಕ್ರಮ ಆಚರಿಸಲಾಯಿತು.

ಪ್ರತಿ ವರ್ಷ ವಿಶ್ವ ಪರಿಸರ ದಿನದ ಸಂದರ್ಭದಲ್ಲಿ ಸಹಸ್ರಾರು ಸಸಿಗಳನ್ನು ನೆಡಲಾಗುತ್ತದೆ. ನಂತರದ ದಿನಗಳಲ್ಲಿ ಅವುಗಳ ರಕ್ಷಣೆ,ಪೋಷಣೆಗೆ ಜನರ ಪಾಲ್ಗೊಳ್ಳುವಿಕೆ ಉತ್ತೇಜಿಸಲು ಧಾರವಾಡ ಅರಣ್ಯ ವಿಭಾಗದ ಅಧಿಕಾರಿಗಳು ಟ್ವಿಟರ್, ಫೇಸ್ ಬುಕ್, ಇನ್ಸ್ಟಾ ಗ್ರಾಂ , ರೇಡಿಯೋ ಮತ್ತಿತರ ಮಾಧ್ಯಮಗಳ ಮೂಲಕ ರಕ್ಷಾ ಬಂಧನದ ದಿನದಂದು ವೃಕ್ಷಾ ಬಂಧನ ಆಚರಿಸಲು ಮನವಿ ಮಾಡಿಕೊಂಡಿದ್ದರು.

ಈ ಮನವಿಗೆ ಸ್ಪಂದಿಸಿದ ಅನೇಕರು ಜಿಲ್ಲೆಯ ಹಲವೆಡೆ ವೃಕ್ಷಾ ಬಂಧನ ಆಚರಿಸಿ ಈ ಕಾರ್ಯಕ್ರಮಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ.

ಕಳೆದ ಜೂನ್ 5 ರಂದು ವಿಶ್ವ ಪರಿಸರ ದಿನದ ಸಂದರ್ಭದಲ್ಲಿ ಸಸಿಗಳೊಂದಿಗೆ ಸೆಲ್ಫಿ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಸಸಿ ನೆಡುವದಷ್ಟೇ ಅಲ್ಲ ಅದರ ರಕ್ಷಣೆ ,ಪೋಷಣೆ ಅದಕ್ಕಿಂತ ಮುಖ್ಯ ಎಂಬುದನ್ನು ಪ್ರಚುರಪಡಿಸಲು ವೃಕ್ಷಾ ಬಂಧನ ಸಹಕಾರಿಯಾಗಿದೆ ಎಂದು ಧಾರವಾಡ ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ ಹೇಳಿದರು.

ಸಾರ್ವಜನಿಕರಲ್ಲಿ ಗಿಡ ಮರಗಳೊಂದಿಗೆ ,ಪರಿಸರದೊಂದಿಗೆ ಭಾವನಾತ್ಮಕ ಸಂಬಂಧ ಬೆಸೆಯಲು ವೃಕ್ಷಾ ಬಂಧನ ಒಂದು ವಿನೂತನ ಮಾರ್ಗವೆನಿಸಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *