ರಾಜ್ಯ

ರಾಯಚೂರಿನ ಕರಕಲ್ ಗಡ್ಡಿ ಯಲ್ಲಿ ಸಿಲುಕಿಕೊಂಡ 9 ಜನ …!

ರಾಯಚೂರು prajakiran.com : ಭಾರೀ ಮಳೆಯಿಂದ ನಡುಗಡ್ಡೆಯಲ್ಲಿ ಸಿಲುಕಿಕೊಂಡಿರುವ 9 ಜನರನ್ನು ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಬರುವ ಪ್ರಯತ್ನ ಹಾಗೂ ಗ್ರಾಮಸ್ಥರ ಮನವೊಲಿಕೆ ವಿಫಲವಾದ ಘಟನೆ ರಾಯಚೂರಿನ ಕರಕಲ್ ಗಡ್ಡಿಯಲ್ಲಿ ಗುರುವಾರ ನಡೆದಿದೆ.

ರಾಯಚೂರಿನ ಕರಕಲ್ ಗಡ್ಡಿ ಜನ ಶಾಶ್ವತ ಪರಿಹಾರಕ್ಕೆ ಪಟ್ಟು ಹಿಡಿದಿದ್ದರ ಪರಿಣಾಮಅವರನ್ನು ಕರೆದುಕೊಂಡು ಬರಲು ತೆರಳಿದ್ದ ಬೋಟ್ ಬರಿಗೈಯಲ್ಲಿ ವಾಪಾಸ್ ಆಯಿತು.

ರಾಯಚೂರು ಜಿಲ್ಲಾಡಳಿತ ಕಳೆದ ವರ್ಷವೂ ಈ ರೀತಿಯ ಭರವಸೆ ನೀಡಿ ಕೈ ಕೊಟ್ಟಿತ್ತು. ಮತ್ತೇ ಈ ವರ್ಷ ಪ್ರವಾಹ ಬಂದಾಗ ಮಾತ್ರ ಇತ್ತ ಕಡೆ ಬರುವಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಇದರಿಂದಾಗಿ 9 ಜನರು ಕರಕಲ್ ಗಡ್ಡಿ ನಡುಗಡ್ಡೆಯಲ್ಲಿಯೇ ಉಳಿದುಕೊಂಡಿದ್ದಾರೆ.  ಪ್ರವಾಹ ಪರಿಸ್ಥಿತಿ ಇನ್ನೂ ಮುಂದುವರೆದಿದೆ.

ಜೀವ ಹೋದರೂ ಸರಿ ನಾವು ಬರಲ್ಲ ಎಂದ ಜನರು ಮಾತು ಕೇಳಿ ಅವರ ರಕ್ಷಣೆಗೆ ತೆರಳಿದ್ದ  ಬೋಟ್ ಹಾಗೂ ರಕ್ಷಣಾ ಸಿಬ್ಬಂದಿಯೇ ಕೆಲಕಾಲ ದಂಗಾದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *