ರಾಜ್ಯ

ಪೊಲೀಸ್ ಸಬ್‌ಇನ್ಸ್ಪೆಕ್ಟರ್ ನೇರ ನೇಮಕಾತಿ : ಅರ್ಜಿಸಲ್ಲಿಕೆ ಅವಧಿ ವಿಸ್ತರಣೆ

ಧಾರವಾಡ prajakiran.com : ೨೦೨೦-೨೧ ನೇ ಸಾಲಿನಲ್ಲಿ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಸಬ್‌ಇನ್ಸ್ಪೆಕ್ಟರ್ ವೃಂದದ ವಿವಿಧ ಹುದ್ದೆಗಳ ನೇರ ನೇಮಕಾತಿ ಕೈಗೊಳ್ಳಲಾಗಿದೆ.

ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಪ್ರಸ್ತುತ ರಾಜ್ಯದಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ ಈ ಹಿಂದೆ ನಿಗದಿಪಡಿಸಲಾಗಿದ್ದ ಅರ್ಜಿ ಆಹ್ವಾನದ ದಿನಾಂಕವನ್ನು ವಿಸ್ತರಿಸಲಾಗಿರುತ್ತದೆ.



ಅರ್ಹತಾ ಷರತ್ತುಗಳಲ್ಲಿ (ವಯೋಮಿತಿ ಸೇರಿದಂತೆ)  ಯಾವುದೇ ಬದಲಾವಣೆಗಳಿರುವುದಿಲ್ಲ.ಆರ್.ಎಸ್.ಐ  (ಸಿಎಆರ್/ ಡಿಎಆರ್) ೪೫ ಹುದ್ದೆಗಳು ೧೬-ಜುಲೈ ೨೦೨೦ ರವರೆಗೆ, ವಿಶೇಷ ಆರ್.ಎಸ್.ಐ (ಕೆ.ಎಸ್.ಆರ್.ಪಿ)

೪೦ ಹುದ್ದೆಗಳು,ಎಸ್.ಐ (ಕೆ.ಎಸ್.ಐ.ಎಸ್.ಎಫ್)೫೧ ಹುದ್ದೆಗಳು ಹಾಗೂ ಪಿ.ಎಸ್.ಐ.(ವೈರ್‌ಲೆಸ್) ೨೬ ಹುದ್ದೆಗಳಿಗೆ ೧೮ ಜುಲೈ ೨೦೨೦ ರವರೆಗೆ ವಿಸ್ತರಿಸಲಾಗಿದೆ ಎಂದು ಧಾರವಾಡ ಪೊಲೀಸ್ ಅಧೀಕ್ಷಕರು   ತಿಳಿಸಿದ್ದಾರೆ.



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *