ರಾಜ್ಯ

ಧಾರವಾಡ ಜಿಲ್ಲೆಯ ೨೨ ಖಾಸಗಿ ಆಸ್ಪತ್ರೆ ಕರೊನಾ ಚಿಕಿತ್ಸೆಗೆ ಆಯ್ಕೆ

ಧಾರವಾಡ prajakiran.com : ಜಿಲ್ಲೆಯ ೨೨ ಖಾಸಗಿ  ಆಸ್ಪತ್ರೆಗಳನ್ನು ಕರೊನಾ ಚಿಕಿತ್ಸೆಗೆ ಆಯ್ಕೆ ಮಾಡಿ, ಚಿಕಿತ್ಸೆಗೆ ದರ ನಿಗದಿಗೊಳಿಸಿದೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಯೋಜನೆಯಡಿ ಜಿಲ್ಲೆಯಲ್ಲಿ ನೋಂದಾಯಿತಗೊಂಡ ಖಾಸಗಿ ಆಸ್ಪತ್ರೆಗಳ ವೈದ್ಯರ ಮತ್ತು  ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ದೀಪಾ ಚೋಳನ್  ಮಾತನಾಡಿದರು.

ಜಿಲ್ಲಾಡಳಿತವು ಕೊರೊನಾ ಚಿಕಿತ್ಸೆಗೆ ಜಿಲ್ಲೆಯ ಸರಕಾರಿ ಆಸ್ಪತ್ರೆ, ಕೋವಿಡ್ ಕೇರ್ ಸೆಂಟರಗಳಿಗೆ ಆದ್ಯತೆ ನೀಡಿ, ಅಲ್ಲಿಯೇ ಅಗತ್ಯ ಚಿಕಿತ್ಸೆ ನೀಡಲಿದೆ.

ಆದರೆ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾದಲ್ಲಿ ಮತ್ತು ಅಗತ್ಯವೆನಿಸಿದಲ್ಲಿ ಖಾಸಗಿ ಆಸ್ಪತ್ರೆಗಳನ್ನು ಬಳಸಿಕೊಳ್ಳಲಿದೆ.

ಆ ನಿಟ್ಟಿನಲ್ಲಿ ಖಾಸಗಿ ಆಸ್ಪತ್ರೆಗಳು ತಮ್ಮ ಆಸ್ಪತ್ರೆಯಲ್ಲಿ ಲಭ್ಯವಿರುವ ಹಾಸಿಗೆ, ವೆಂಟಿಲೇಟರ್, ಆರೋಗ್ಯ ಸಿಬ್ಬಂದಿ ಸೇರಿದಂತೆ ಎಲ್ಲ ಮೂಲಸೌಕರ್ಯಗಳಲ್ಲಿ ಶೇ. ೫೦ ರಷ್ಟು ಸೌಲಭ್ಯಗಳನ್ನು  ಜಿಲ್ಲಾಡಳಿತ ಶಿಫಾರಸ್ಸು ಮಾಡುವ ಸೋಂಕಿತರಿಗೆ ಬಳಸಬೇಕು.



ಇದಕ್ಕೆ ತಗಲುವ  ವೆಚ್ಚವನ್ನು  ಸರಕಾರವು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ನೇರವಾಗಿ ಆಸ್ಪತ್ರೆಗೆ ಬಿಡುಗಡೆ ಮಾಡಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಕೋವಿಡ್-೧೯ ರೋಗಿಗಳಿಗೆ ಒಂದು ದಿನಕ್ಕೆ ಪ್ಯಾಕೇಜ್ ಆಗಿ ಸರಕಾರ ದರ ನಿಗದಿಗೊಳಿಸಿದೆ. ಸಾರ್ವಜನಿಕ ಆರೋಗ್ಯ ಸಂಸ್ಥೆಗಳಿಂದ ಶಿಫಾರಸ್ಸು ಮಾಡುವ ಕೋವಿಡ್-೧೯ ರೋಗಿಗಳ ವೆಚ್ಚವಾಗಿ ಜನರಲ್ ವಾರ್ಡ- ರೂ. ೫೨೦೦, ಹೆಚ್.ಡಿ.ಯು –ರೂ. ೭೦೦೦, ಐಸೊಲೇಷನ್ ಐಸಿಯು ವೆಂಟಿಲೇಟರ ರಹಿತ ರೂ.೮೫೦೦ ಮತ್ತು ವೆಂಟಿಲೇಟರ ಸಹಿತ ರೂ. ೧೦.೦೦೦ ನಿಗದಿಗೊಳಿಸಿದೆ.

 ನಗದು ಪಾವತಿ ಮಾಡುವ ಪಿ.ಎಚ್.ಪಿ ಗಳಿಂದ ನೇರವಾಗಿ ಪ್ರವೇಶ ಪಡೆದ ಖಾಸಗಿ ಕೋವಿಡ್-೧೯ ರೋಗಿಗಳಿಗೆ ಒಂದು ದಿನದ ಪ್ಯಾಕೇಜ್ ಆಗಿ ಜನರಲ್ ವಾರ್ಡ ರೂ.೧೦.೦೦೦, ಹಚ್.ಡಿ.ಯು ರೂ.೧೨.೦೦೦, ಐಸೊಲೇಷನ್ ಐಸಿಯು ವೆಂಟಿಲೇಟರ ರಹಿತ ರೂ.೧೫.೦೦೦ ಮತ್ತು ವೆಂಟಿಲೇಟರ ಸಹಿತ ರೂ .೨೫.೦೦೦ ಗಳಾಗಿ ಸರಕಾರವು ದರ ನಿಗದಿಗೊಳಿಸಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.



 ಸಾರ್ವಜನಿಕ ಆರೋಗ್ಯ ಸಂಸ್ಥೆಗಳಿಂದ ಶಿಫಾರಸ್ಸು ಮಾಡುವ ಕೋವಿಡ್-೧೯ ರೋಗಿಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುವದರಿಂದ ರೋಗಿಗಳ ಕಡೆಯಿಂದ ಯಾವುದೇ ರೀತಿಯ ಶುಲ್ಕ, ವೆಚ್ಚ ವಸೂಲು ಮಾಡುವಂತಿಲ್ಲ 

ಖಾಸಗಿ ಕೋವಿಡ್-೧೯ ರೋಗಿಗಳಿಂದ ಸರಕಾರ ನಿಗದಿಪಡಿಸಿದ ದರಗಳಿಗಿಂತ ಹೆಚ್ಚು ಹಣ ವಸೂಲು ಮಾಡುವಂತಿಲ್ಲ ಎಂದು ಅವರು ನಿರ್ದೇಶಿಸಿದರು.

ಸರಕಾರದ ಆದೇಶ ಮತ್ತು ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ನೋಂದಾಯಿತ ಎಲ್ಲ ಖಾಸಗಿ ಆಸ್ಪತ್ರೆಗಳು ಜಿಲ್ಲಾಡಳಿತಕ್ಕೆ ಸಹಕಾರ ನೀಡಬೇಕು  ಮತ್ತು ಖಾಸಗಿ ಆಸ್ಪತ್ರೆಗಳು ತಮ್ಮ ವೈದ್ಯರ, ಸಿಬ್ಬಂದಿಗಳ ಅರೋಗ್ಯ ಸುರಕ್ಷತೆಗಾಗಿ ವಿಮೆ ಸೇರಿದಂತೆ ಅಗತ್ಯ ಸೌಲಭ್ಯಗಳ ಕುರಿತು ಮನವಿ ಸಲ್ಲಿಸಿದಲ್ಲಿ ಸರಕಾರಕ್ಕೆ ಈ ಕುರಿತು ಪತ್ರ ಬರೆಯುವದಾಗಿ ಜಿಲ್ಲಾಧಿಕಾರಿ ದೀಪಾ ಚೋಳನ್ ಸಭೆಯಲ್ಲಿ ತಿಳಿಸಿದರು.

ಕೋವಿಡ್-೧೯ ಚಿಕಿತ್ಸೆ ನೀಡಲಿರುವ ಖಾಸಗಿ ಆಸ್ಪತ್ರೆಗಳು:





 ಕ್ಯಾನ್ಸರ್ ಚಿಕಿತ್ಸೆ ಮತ್ತು ಸಂಶೋಧನಾ ಸಂಸ್ಥೆ,ನವನಗರ,ಎಚ್‌ಸಿಜಿ ಎನ್‌ಎಂಆರ್ ಕ್ಯೂರಿ ಸೆಂಟರ್ ಓಂಕೊಲಾಜಿ, ದೇಶಪಾಂಡೆ ನಗರ ಹುಬ್ಬಳ್ಳಿ, ಎಸ್ ಡಿ ಎಮ್ ನಾರಾಯಣ ಹೃದಯಾಲಯ ಸತ್ತೂರ,

ಶಕುಂತಲಾ ಸ್ಮಾರಕ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ,ಹೊಸೂರ,ಫೋರ್ಟಿಸ್ ಸುಚಿರಾಯು ಆಸ್ಪತ್ರೆ,ಗೋಕುಲ ರಸ್ತೆ, ಅಶೋಕ ಆಸ್ಪತ್ರೆ, ವಿದ್ಯಾನಗರ,

ಜಯಪ್ರಿಯ ಆಸ್ಪತ್ರೆ, ಬೈಲಪ್ಪನವರ ನಗರ, ವಿವೇಕಾನಂದ ಜನರಲ್ ಆಸ್ಪತ್ರೆ,ದೇಶಪಾಂಡೆ ನಗರ, ಶಿವಕೃಪಾ ಆಸ್ಪತ್ರೆ ಹಾಗೂ ತೀವ್ರ ನಿಗಾ ಘಟಕ ಲ್ಯಾಮಿಂಗ್ಟನ್ ರಸ್ತೆ ಹುಬ್ಬಳ್ಳಿ,  ಶ್ರೀ ಬಾಲಾಜಿ ಇನ್ಸ್ಟಿಟ್ಯೂಟ್ ಆಫ್ ನ್ಯೂರೋ ಸೈನ್ಸಸ್ ವಿದ್ಯಾನಗರ, ವಿಠ್ಠಲ ಮಕ್ಕಳ ಆಸ್ಪತ್ರೆ ಜುಬ್ಲಿ ವೃತ್ತ, ಹುಬ್ಬಳ್ಳಿ

ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ವಿದ್ಯಾನಗರ, ಸಂಜೀವಿನ ಸ್ಪೆಷಾಲಿಟಿ ಆಸ್ಪತ್ರೆ ವಿದ್ಯಾನಗರ,ನಾಲ್ವಾಡ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ  ಮತ್ತು ಸಂಶೋಧನಾ ಕೇಂದ್ರ, ವಿಕಾಸನಗರ ಹೊಸೂರ,

ಎಸ್ ಡಿ ಎಮ್ ವೈದ್ಯಕೀಯ ವಿಜ್ಞಾನ ಆಸ್ಪತ್ರೆಯ ಕಾಲೇಜು ಸತ್ತೂರ, ತತ್ವದರ್ಶ ಆಸ್ಪತ್ರೆ ಹುಬ್ಬಳ್ಳಿ, ವಾತ್ಸಲ್ಯ ಆಸ್ಪತ್ರೆ ಗೋಕುಲ ರಸ್ತೆ ಹುಬ್ಬಳ್ಳಿ, ಸೆಕ್ಯೂರ್ ಆಸ್ಪತ್ರೆ ಗೋಕುಲ ರಸ್ತೆ ಹುಬ್ಬಳ್ಳಿ, ವಿಹಾನ ಹೃದಯ ಕೇರ್ ಪ್ರೈವೇಟ್ ಲಿಮಿಟೆಡ್, ದೇಶಪಾಂಡೆನಗರ ಹುಬ್ಬಳ್ಳಿ



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *