ರಾಜ್ಯ

ಧಾರವಾಡ ರೈತರಿಗೆ ಸಕಾಲಕ್ಕೆ ಗೊಬ್ಬರ ಒದಗಿಸಲು ಒತ್ತಾಯಿಸಿ ಬಸವರಾಜ ಕೊರವರ ನೇತೃತ್ವದಲ್ಲಿ ನೂರಾರು ರೈತರಿಂದ ಧರಣಿ ಸತ್ಯಾಗ್ರಹ

ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ತೀವ್ರ ತರಾಟೆ ಹಾಗೂ ಆಕ್ರೋಶ

ಧಾರವಾಡ prajakiran.com : ಧಾರವಾಡ ತಾಲೂಕಿನ ಹಲವಾರು ಹಳ್ಳಿಗಳ ನೂರಾರು ರೈತರು ಪ್ರತಿದಿನ ಬೆಳಗಿನ ಜಾವ ಹಳ್ಳಿಗಳಿಂದ ಧಾರವಾಡ ನಗರದ ಹಳೆ ಎಪಿಎಂಸಿ ಆವರಣದಲ್ಲಿ ಇರುವ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘಗಳ ಮುಂದೆ ಸರದಿ ಪ್ರಕಾರ ಪಾಳೇಯದಲ್ಲಿ ನಿಂತರೂ ಸಕಾಲಕ್ಕೆ ಗೊಬ್ಬರ ಸಿಗುತ್ತಿಲ್ಲ.

ಅದು ಸಿಕ್ಕರೂ ಒಬ್ಬ ರೈತನಿಗೆ ಕೇವಲ ಐದು ಚೀಲದಂತೆ ಗೊಬ್ಬರ ವಿತರಿಸಲಾಗುತ್ತಿದೆ.
ಕಳೆದ ಎರಡು ದಿನಗಳ ಕಾಲ ಕಚೇರಿಯಿಂದ ಕಚೇರಿಗೆ ಅಲೆದಾಡಿದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ
ಇದರಿಂದಾಗಿ ರೊಚ್ಚಿಗೆದ್ದ ನೂರಾರು ರೈತರೊಂದಿಗೆ ಧಾರವಾಡದ ಹಳೆ ಎಪಿಎಂಸಿ ಆವರಣದಲ್ಲಿರುವ
ಧಾರವಾಡ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ ನಿಯಮಿತದ ಎದುರು
ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ನೇತೃತ್ವದಲ್ಲಿ ನೂರಾರು ರೈತರೊಂದಿಗೆ ಧರಣಿ ಸತ್ಯಾಗ್ರಹ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಲಾಯಿತು.

ಅಲ್ಲದೆ, ಘಟನಾ ಸ್ಥಳದಲ್ಲಿ ಇದ್ದ ಅಧಿಕಾರಿಗಳನ್ನು ರೈತರು ತೀವ್ರ ತರಾಟೆಗೆ ತೆಗೆದುಕೊಂಡರು.

ರೈತರಿಗೆ ಒಂದು ಎಕರೆಗೆ ಒಂದು ಚೀಲ ಡಿಎಪಿ ಗೊಬ್ಬರ ಬೇಕು. ಆದರೆ ಅಧಿಕಾರಿಗಳು ಒಬ್ಬ ರೈತನಿಗೆ ಕೇವಲ ಐದು ಚೀಲ ಗೊಬ್ಬರ ನೀಡುತ್ತಿದ್ದಾರೆ. ಇದು ಸರಿಯಲ್ಲ ಎಂದು ದೂರಿದರು.

ಅಲ್ಲದೆ, ರೈತರಿಗೆ ಸೊಸೈಟಿಯವರು ಗೊಬ್ಬರದ ಜೊತೆಗೆ ಎಣ್ಣೆ ತೆಗೆದುಕೊಳ್ಳಲು ಒತ್ತಾಯಿಸುತ್ತಿರುವುದಕ್ಕೆ ರೈತರು ಅಸಮಾಧಾನ ವ್ಯಕ್ತಪಡಿಸಿದರು.

ರೈತರಿಗೆ ಹೊಲದ ಪಹಣಿಗೆ ತಕ್ಕಂತೆ ಗೊಬ್ಬರ ವಿತರಣೆ ಮಾಡಬೇಕು ಎಂದು ಆಗ್ರಹಿಸಿದರು.

ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ಮಾತನಾಡಿ,
ಮುಂಗಾರು ಹಂಗಾಮಿನ ಬಿತ್ತನೆ ಗಾಗಿ ರೈತರು ಈಗಾಗಲೇ ಸಿದ್ದತೆ ಮಾಡಿಕೊಂಡಿದ್ದು, ಅದಕ್ಕಾಗಿ ಡಿಎ ಪಿ ಹಾಗೂ ಯೂರಿಯಾ ರಸಗೊಬ್ಬರಗಳ ಸಂಗ್ರಹಕ್ಕೆ ಮುಂದಾಗಿದ್ದಾರೆ.

ಆದರೆ ರೈತರಿಗೆ ಸಕಾಲಕ್ಕೆ ಗೊಬ್ಬರ ದೊರೆಯುತ್ತಿಲ್ಲ. ಸೂಸೈಟಿ ಮುಂದೆ ಬೆಳಗಿನ ಜಾವ ಬಂದು ರೈತರು ಪಾಳಿಯ ಪ್ರಕಾರ ನಿಂತರೂ ಅವರಿಗೆ ಗೊಬ್ಬರ ದೊರೆಯುತ್ತಿಲ್ಲ.

ಡಿಡಿ ನಂಬರ್ ಬಂದಿಲ್ಲ ಎಂದು ಆಧಾರ್ ಕಾರ್ಡ್ ತೆಗೆದುಕೊಂಡು ಗೊಬ್ಬರ ನೀಡುತ್ತಿದ್ದಾರೆ. ಅದರ ಬದಲಿಗೆ ಆಧಾರ ನಂಬರ್ ಇಲ್ಲವೇ ಅದರ ಜಿರಾಕ್ಸ್ ಪ್ರತಿ ಪಡೆದು ಬೇಕಿದ್ದರೆ ಗೊಬ್ಬರ ನೀಡಲಿ ಆಧಾರ್ ಕಾರ್ಡ್ ತೆಗೆದುಕೊಂಡು ನೀಡುವುದು ಬೇಡ.

ಇಲ್ಲದಿದ್ದರೆ ರೈತರು ಮತ್ತು ಅದರ ಪ್ರತಿ ಪಡೆಯಲು ರೈತಾಕಿ ಕೆಲಸ ಬಿಟ್ಟು ಧಾರವಾಡ ಅಲೆದಾಡಬೇಕಾಗುತ್ತದೆ ಎಂದು ಹೇಳಿದರು.

ಅಲ್ಲದೆ, ಪ್ರತಿಯೊಬ್ಬ ರೈತರಿಗೆ ಕೇವಲ ಐದು ಚೀಲ ಗೊಬ್ಬರ ನೀಡುವುದನ್ನು ತಕ್ಷಣ ಕೈಬಿಟ್ಟು ಹೆಚ್ಚಿನ ಜಮೀನು ಇರುವ ರೈತರಿಗೆ ಇದು ಸಾಕಾಗಲ್ಲ.

ಹೀಗಾಗಿ ಹೆಚ್ಚಿನ ಗೊಬ್ಬರ ನೀಡಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಗೆ ಮನವಿ ಮಾಡಲಾಯಿತು.

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಧಾರವಾಡ ಜಿಲ್ಲೆಯ ಜಿಲ್ಲಾಧಿಕಾರಿಗಳು ಖುದ್ದು ಭೇಟಿಯಾಗಿ ವಸ್ತು ಸ್ಥಿತಿಯನ್ನು ಆಧರಿಸಿ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುವುದಾಗಿ ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ಅವರಿಗೆ ಹಾಗೂ ಪ್ರತಿಭಟನಾ ನಿರತ ರೈತರಿಗೆ ಭರವಸೆ ನೀಡಿದರು.

ಅಲ್ಲದೆ, ಜಿಲ್ಲೆಯಲ್ಲಿ
ಗೊಬ್ಬರ ಕೊರತೆ ಇಲ್ಲ. ಆದರೆ, ರೈತರಿಗೆ ಕಿರುಕುಳ ಆಗುತ್ತಿರುವುದು ಹಾಗೂ ಸಕಾಲಕ್ಕೆ ದೊರೆಯುವಂತೆ ವ್ಯವಸ್ಥೆ ಮಾಡುವುದು ಜಿಲ್ಲಾಡಳಿತದ ಜವಾಬ್ದಾರಿಯಾಗಿದೆ.

ತಕ್ಷಣ ಸಂಬಂಧಿಸಿದ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸುವುದಾಗಿ ದೂರವಾಣಿಯ ಮೂಲಕ ತಿಳಿಸಿದರು.

ಮಾಹಿತಿಯನ್ನು ಅರಿತು ಧರಣಿ ಸ್ಥಳಕ್ಕೆ ಆಗಮಿಸಿದ ಧಾರವಾಡ ಜಿಲ್ಲೆಯ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರಾಜಶೇಖರ ವಿಜಯಪುರ ಅವರು ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ನೇತೃತ್ವದಲ್ಲಿ ಧರಣಿ ನಿರತ ರೈತರಿಗೆ ಸಮಜಾಯಿಷಿ ನೀಡಿ ಪ್ರತಿಭಟನಾನಿರತ ರೈತರ ಮನವೊಲಿಸಿದರು.

ಈ ಸಂದರ್ಭದಲ್ಲಿ ಜನಜಾಗೃತಿ ಸಂಘದ ಉಪಾಧ್ಯಕ್ಷರಾದ ನಾಗರಾಜ ಕಿರಣಗಿ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ,
ಸದಸ್ಯರಾದ ಕುಮಾರ ಅಗಸಿಮನಿ, ನವೀನ ಪ್ಯಾಟಿ, ಆನಂದ ಪಾಟೀಲ,
ರೈತರಾದ ಮಂಜುನಾಥ ಸುಂಕದ, ಉಮೇಶ ಸಾಲಿ, ನಾಗರಾಜ ಗಾಣಿಗೇರ ಮತ್ತು ಯಾದವಾಡ, ಗರಗ, ಹೆಬ್ಬಳ್ಳಿ, ಶಿವಳ್ಳಿ, ಮಂಗಳಗಟ್ಟಿ ಸೇರಿದಂತೆ ವಿವಿಧ ಹಳ್ಳಿಗಳ ನೂರಾರು ರೈತರು ಉಪಸ್ಥಿತರಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *