ರಾಜ್ಯ

ಗದಗನಲ್ಲಿ ವೈದ್ಯ ಸೇರಿ ನಾಲ್ವರಿಗೆ ಸೋಂಕು …!

ಗದಗ prajakiran.com : ಗದಗ ಜಿಲ್ಲೆಯ ವೈದ್ಯರೊಬ್ಬರಿಗೆ ಕರೋನಾ ಸೋಂಕು ಶನಿವಾರ ವಕ್ಕರಿಸಿದ್ದು, ಇವತ್ತು ವೈದ್ಯ ಸೇರಿ ಮತ್ತೇ ನಾಲ್ವರಿಗೆ ಸೋಂಕು ತಗುಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆಗೊಳಿಸಿರುವ ಹೆಲ್ತ್ ಬುಲೇಟಿನ್ ತಿಳಿಸಿದೆ.

ಸೋಂಕಿತರನ್ನು ಜಿಡಿಜಿ38 ಪಿ-5014 ನೇ ಸೋಂಕಿತ 29 ವರ್ಷದ ಯುವಕನಾಗಿದ್ದು ಇವರಿಗೆ ಯಾರಿಂದ ಸೋಂಕು ಹರಡಿದೆ ಎಂಬುದು ಪತ್ತೆ ಹಚ್ಚಲಾಗುತ್ತಿದೆ.

ಅದೇ ರೀತಿ ಜಿಡಿಜಿ39 ಪಿ-5015 ನೇ ಸೋಂಕಿತ 28 ವರ್ಷದ ಯುವಕನಾಗಿದ್ದು, ಇವರಿಗೆ ಪಿ 4079 ಸೋಂಕಿತನ ಸಂಪರ್ಕದಿಂದಲೇ ಹರಡಿದೆ.

ಇನ್ನುಳಿದಂತೆ ಜಿಡಿಜಿ40 ಪಿ-5016 ನೇ ಸೋಂಕಿತ 32 ವರ್ಷದ ಯುವಕನಿಗೆ ಪಿ 4079 ಸೋಂಕಿತನ ಸಂಪರ್ಕದಿಂದ ತಗುಲಿದೆ.

ಆದರೆ ಜಿಡಿಜಿ41 ಪಿ-5017 ನೇ ಸೋಂಕಿತ 29 ವರ್ಷದ ಯುವಕನಾಗಿದ್ದು, ಇವರಿಗೆ ಯಾರಿಂದ ಸೋಂಕು ಹರಡಿದೆ ಎಂಬುದು ಪತ್ತೆ ಹಚ್ಚಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಆ ಮೂಲಕ ಗದಗ ಜಿಲ್ಲೆಯ ಸೋಂಕಿತರ ಸಂಖ್ಯೆ ಈವರೆಗೆ 41ಕ್ಕೆ ಏರಿಕೆಯಾಗಿದ್ದು, ಈ ಪೈಕಿ 26 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಇನ್ನೂ 13 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ ಗದಗ ಜಿಲ್ಲೆಯಲ್ಲಿ ಇಬ್ಬರು ಸಾವನ್ನಪ್ಪಿರುವುದು ಜಿಲ್ಲೆಯ ಜನತೆಯನ್ನು ಬೆಚ್ಚಿ ಬೀಳಿಸಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *