ರಾಜ್ಯ

ಧಾರವಾಡದಲ್ಲಿ ಎರಡು ವರ್ಷದ ಮಗು ಸೇರಿ ಮತ್ತೇ ಮೂವರಿಗೆ ಕೋವಿಡ್ ಪಾಸಿಟಿವ್

ಧಾರವಾಡ prajakiran.com : ವಿದ್ಯಾನಗರಿ ಧಾರವಾಡ ಜಿಲ್ಲೆಯಲ್ಲಿ ಶನಿವಾರ ಮತ್ತೇ  ಮೂರು   ಕೋವಿಡ್ ಪಾಸಿಟಿವ್ ಪ್ರಕರಣಗಳು  ಪತ್ತೆಯಾಗಿದೆ  ಎಂದು ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್ ತಿಳಿಸಿದ್ದಾರೆ.

ಸೋಂಕಿತರನ್ನು DWD 55-  ಪಿ-  5005 (54 ವರ್ಷದ ಮಹಿಳೆ)  , DWD 56 ಪಿ- 5006 ( 36 ವರ್ಷದ ಪುರುಷ) , DWD 57 – ಪಿ-5007( 2  ವರ್ಷದ ಹೆಣ್ಣು ಮಗು ) ಎಂದು ಗುರುತಿಸಲಾಗಿದೆ.

ಇವರೆಲ್ಲರೂ  ಮಹಾರಾಷ್ಟ್ರ ರಾಜ್ಯದಿಂದ ಧಾರವಾಡ ಜಿಲ್ಲೆಗೆ ಮರಳಿ ಹಿಂದಿರುಗಿರುವ ಹಿನ್ನೆಲೆ ಹೊಂದಿದ್ದಾರೆ.  ಎಲ್ಲಾ ಮೂವರು  ಸಾಂಸ್ಥಿಕ ಕ್ವಾರಂಟೈನ್ ನಲ್ಲಿದ್ದರು.



ಇವರಿಗೆ ಸೋಂಕು ದೃಢಪಟ್ಟಿರುವ ಹಿನ್ನಲೆಯಲ್ಲಿ  ಧಾರವಾಡ ಜಿಲ್ಲೆಯ ನಿಯೋಜಿತ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಹೀಗಾಗಿ ವಿದ್ಯಾನಗರಿ ಧಾರವಾಡ ಜಿಲ್ಲೆಯ ಒಟ್ಟು ಕರೋನಾ ಸೋಂಕಿತರ ಸಂಖ್ಯೆ 57 ಕ್ಕೇರಿದಂತಾಗಿದೆ.  

ಈ ಪೈಕಿ ಈಗಾಗಲೇ  34  ಜನ ಗುಣಮುಖರಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಿಂದ  ಬಿಡುಗಡೆಯಾಗಿ ಮನೆಗೆ ತೆರಳಿದ್ದಾರೆ.

ಇನ್ನುಳಿದವರು  ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ವಿವರಿಸಿದ್ದಾರೆ.



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *