ರಾಜ್ಯ

ಧಾರವಾಡದ ಕೆಂಪಗೇರಿಯ ವೈದ್ಯನಿಗೂ ಕರೋನಾ ಸೋಂಕು…!

ಧಾರವಾಡ prajakiran.com :  ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಪ್ಯಾಥೊಲಾಜಿಸ್ಟ್ ಆಗಿ ಕೆಲಸ ನಿರ್ವಹಿಸುತ್ತಿರುವ ಧಾರವಾಡದ ವೈದ್ಯರೊಬ್ಬರಿಗೆ ಕರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಇದರಿಂದಾಗಿ ವಿದ್ಯಾನಗರಿ ಧಾರವಾಡದ ಜನತೆ ಬೆಚ್ಚಿಬಿದ್ದಿದೆ. ದಿನದಿಂದ ದಿನಕ್ಕೆ ಆತಂಕ ಹೆಚ್ಚಿಸುತ್ತಿದೆ. ಅವರು ತೀವ್ರ ಜ್ವರ, ನೆಗಡಿಯಿಂದಾಗಿ ಆಸ್ಪತ್ರೆಗೆ ದಾಖಲು ಆಗಿದ್ದರು. ಈ ವೇಳೆ ಅವರಿಗೆ ಕರೋನಾ ತಪಾಸಣೆ ನಡೆಸಿದಾಗ ಸೊಂಕು ಇರುವುದು ದೃಢಪಟ್ಟಿದೆ. ಸೋಂಕಿತ ವೈದ್ಯರನ್ನು ಪಿ-8286ನ 52 ವರ್ಷದ ವ್ಯಕ್ತಿ ಎಂದು ಜಿಲ್ಲಾಡಳಿತ ಗುರುತಿಸಿದೆ. ಭಾನುವಾರ ವೈದ್ಯನಿಗೆ ಸೋಂಕು ದೃಢಪಟ್ಟ ಬೆನ್ನಲ್ಲೇ […]

ರಾಜ್ಯ

ಗದಗನಲ್ಲಿ ವೈದ್ಯ ಸೇರಿ ನಾಲ್ವರಿಗೆ ಸೋಂಕು …!

ಗದಗ prajakiran.com : ಗದಗ ಜಿಲ್ಲೆಯ ವೈದ್ಯರೊಬ್ಬರಿಗೆ ಕರೋನಾ ಸೋಂಕು ಶನಿವಾರ ವಕ್ಕರಿಸಿದ್ದು, ಇವತ್ತು ವೈದ್ಯ ಸೇರಿ ಮತ್ತೇ ನಾಲ್ವರಿಗೆ ಸೋಂಕು ತಗುಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆಗೊಳಿಸಿರುವ ಹೆಲ್ತ್ ಬುಲೇಟಿನ್ ತಿಳಿಸಿದೆ. ಸೋಂಕಿತರನ್ನು ಜಿಡಿಜಿ38 ಪಿ-5014 ನೇ ಸೋಂಕಿತ 29 ವರ್ಷದ ಯುವಕನಾಗಿದ್ದು ಇವರಿಗೆ ಯಾರಿಂದ ಸೋಂಕು ಹರಡಿದೆ ಎಂಬುದು ಪತ್ತೆ ಹಚ್ಚಲಾಗುತ್ತಿದೆ. ಅದೇ ರೀತಿ ಜಿಡಿಜಿ39 ಪಿ-5015 ನೇ ಸೋಂಕಿತ 28 ವರ್ಷದ ಯುವಕನಾಗಿದ್ದು, ಇವರಿಗೆ ಪಿ 4079 ಸೋಂಕಿತನ […]