ರಾಜ್ಯ

ಧಾರವಾಡ ಪೊಲೀಸ್ ತರಬೇತಿ ಶಾಲೆಗೆ ಬೆಂಬಿಡದ ಕರೊನಾ ಭೂತ ..!

ಧಾರವಾಡ prajakiran.com : ಧಾರವಾಡದ ಪೊಲೀಸ್ ತರಬೇತಿ ಶಾಲೆಗೆ ಕಳೆದ ಒಂದು ವಾರದಿಂದ ಕರೋನಾ ಬೆಂಬಿಡದೆ ಕಾಡುತ್ತಿದೆ.

ಅಲ್ಲಿ ಪ್ರತಿನಿತ್ಯ  ಕರೊನಾ ಮಹಾಸ್ಪೋಟ ವಾಗುತ್ತಿದ್ದು,  ಪೊಲೀಸ ಪ್ರಶಿಕ್ಷಣಾರ್ಥಿಗಳು, ಅಲ್ಲಿಯ ಸಿಬ್ಬಂದಿ ಬೆಚ್ಚಿಬಿದ್ದಿದ್ದಾರೆ.

ಶನಿವಾರ ಒಂದೇ‌ ದಿನ ತರಬೇತಿ ಶಾಲೆಯ 46 ಜನರಿಗೆ ‌ಕರೊನಾ ಪಾಸಿಟಿವ್ ಬಂದಿರುವುದು ಮತ್ತಷ್ಟು ಆತಂಕ ಮೂಡಿಸಿದೆ.

ಅಲ್ಲದೆ, ಪೊಲೀಸ್ ತರಬೇತಿ ಶಾಲೆಯ ವಸತಿ ಗೃಹಗಳಲ್ಲಿಯೂ ಕರೊನಾ ಅಟ್ಟಹಾಸ ಮೆರೆದಿದ್ದು, ಕ್ವಾರ್ಟರ್ಸ್‌ನಲ್ಲಿನ 17 ಜನರಿಗೆ ಒಂದೇ ದಿನ ಪಾಸಿಟಿವ್ ಬಂದಿದೆ.

ಹೀಗಾಗಿ ಕಳೆದ ಎರಡ್ಮೂರು ದಿನಗಳಿಂದ ಒಟ್ಟು 100ಕ್ಕೂ ಹೆಚ್ಚು ಜನರಲ್ಲಿ ಕರೋನಾ ರಣಕೇಕೆ ಕಂಡು ಬಂದಿರೋವ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿದೆ.

ಈ ಪೊಲೀಸ್ ತರಬೇತಿ ಶಾಲೆಯಲ್ಲಿ ಒಟ್ಟು 380 ಪ್ರಶಿಕ್ಷಣಾರ್ಥಿಗಳಿದ್ದು, ರಾಜ್ಯದ ನಾನಾ ಭಾಗಗಳಿಂದ ಪೊಲೀಸ್ ಇಲಾಖೆಗೆ ನೇಮಕಗೊಂಡು ಇಲ್ಲಿ ತರಬೇತಿಗಾಗಿ ಆಗಮಿಸಿರುವುದು ಇಲ್ಲಿ ಸ್ಮರಿಸಬಹುದು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *