ರಾಜ್ಯ

ಧಾರವಾಡದ ಮೊರಬ ಗ್ರಾಮ ಬಫರ್ ಜೋನ್    

ಧಾರವಾಡ : ಧಾರವಾಡದ DWD 71 –  ಪಿ-  6222 (59 ವರ್ಷ , ಪುರುಷ)  ಇವರು ನವಲಗುಂದ ತಾಲ್ಲೂಕಿನ ಮೊರಬ  ಗ್ರಾಮದ ನಿವಾಸಿಯಾಗಿದ್ದಾರೆ.

ಇವರಿಗೆ ಕರೋನಾ ಸೋಂಕು  ದೃಢಪಟ್ಟ ಬೆನ್ನಲ್ಲೇ  ಧಾರವಾಡದ ಮೊರಬ ಗ್ರಾಮದ ಸೋಂಕಿತನ ಮನೆಯ ಸುತ್ತ 100 ಮೀಟರ್ ಸಂಪೂರ್ಣ ನಿಯಂತ್ರಿತ ವಲಯವೆಂದು ಘೋಷಿಸಿ  ಸಂಪೂರ್ಣ ಪ್ರದೇಶವನ್ನು ಸೀಲ್ ಡೌನ್ ಮಾಡಿ ಧಾರವಾಡ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಸಂಪೂರ್ಣ ಮೊರಬ ಗ್ರಾಮವನ್ನು ಬಫರ್ ಜೋನ್ ಎಂದು ಘೋಷಿಸಿ ಕೋವಿಡ್ 19 ಸೋಂಕು ಹರಡದಂತೆ ತಡೆಯಲು ಬಫರ್ ಜೋನ್ ನಲ್ಲಿ ಕಣ್ಗಾವಲು ಇಡಲು ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಆದೇಶ ಹೊರಡಿಸಿದ್ದಾರೆ.

ಅಲ್ಲದೆ, 100 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ವ್ಯಕ್ತಿ ಹಾಗೂ ಸಂಸ್ಥೆಯವರು ಆಹಾರ ಮತ್ತು ಇತರೆ ಸೇವೆಗಳನ್ನು ಜನರಿಗೆ ವಿತರಿಸವುದನ್ನು ನಿಷೇಧಿಸಲಾಗಿದೆ.



ಹೀಗಾಗಿ ಆದೇಶವನ್ನು ಎಲ್ಲರೂ ಚಾಚುತಪ್ಪದೆ  ಪಾಲಿಸಬೇಕು.  ಮುಂದಿನ ಆದೇಶದವರೆಗೆ ಅಲ್ಲಿಯ ನಿವಾಸಿಗಳು ಸಾಮಾಜಿಕಅಂತರ ಕಾಪಾಡಿಕೊಂಡು ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.

 ಮೊರಬ ಗ್ರಾಮದಲ್ಲಿ ಶುಚಿತ್ವವನ್ನು ತಪ್ಪದೇ ಕಾಪಾಡಿಕೊಳ್ಳಬೇಕು.  ಶವ ಸಂಸ್ಕಾರಕ್ಕೆ ಈ ಆದೇಶಅನ್ವಯಿಸುವುದಿಲ್ಲ.  ಆದರೆ ಶವ ಸಂಸ್ಕಾರದಲ್ಲಿ 20 ಜನರು ಮಾತ್ರ ಭಾಗವಹಿಸಲು ಅವಕಾಶವಿದೆ.

ಈ ಆದೇಶವನ್ನು ಉಲ್ಲಂಘಿಸಿದರೆ ಸಾಂಕ್ರಾಮಿಕ ರೋಗ ಹರಡುವಿಕೆ ಕಾಯ್ದೆ ಅನ್ವಯ ಕಾನೂನು ಪ್ರಕಾರ ಕ್ರಮ ಜರುಗಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಎಚ್ಚರಿಸಿದ್ದಾರೆ.

ಮೊರಬ ಗ್ರಾಮ ಪಂಚಾಯತ್, ಆರೋಗ್ಯ ಹಾಗೂ ಪೊಲೀಸ್ ಇಲಾಖೆ ಸಹಯೋಗದೊಂದಿಗೆ 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸಬೇಕು ಎಂದು ಆದೇಶಿಸಿದ್ದಾರೆ.

ಈ ಹಿಂದೆ ವಿದ್ಯಾನಗರಿ ಧಾರವಾಡದ ನವಲೂರಿನ ಪಠಾಣ ಗಲ್ಲಿ, ಹೊಸಯಲ್ಲಾಪುರ ನವಲೂರು ಅಗಸಿ, ಕೋಳಿಕೆರೆ, ದೊಡ್ಡನಾಯಕನಕೊಪ್ಪ, ಅಣ್ಣಿಗೇರಿಯ ಅಮೃತೇಶ್ವರ ನಗರ, ಮೊರಬ ಗ್ರಾಮದಲ್ಲಿ  ಕೂಡ ನಿಯಂತ್ರಿತ ಪ್ರದೇಶವೆಂದು ಘೋಷಿಸಿರುವುದು ಇಲ್ಲಿ ಸ್ಮರಿಸಬಹುದು.  



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *