ರಾಜ್ಯ

ಧಾರವಾಡದಲ್ಲಿ ಮತ್ತೇ ಇಬ್ಬರಿಗೆ ಕರೋನಾ ಪಾಸಿಟಿವ್ : ಸೋಂಕಿತರಿಗೆ ಹೇಗೆ ಹರಡಿದೆ ಗೊತ್ತಿಲ್ಲ…!

ಧಾರವಾಡ prajakiran.com  : ಧಾರವಾಡದ ಜಿಲ್ಲೆಯಲ್ಲಿ ಗುರುವಾರ  ಎರಡು  ಕೋವಿಡ್ ಪಾಸಿಟಿವ್ ಪ್ರಕರಣಗಳು  ಪತ್ತೆಯಾಗಿವೆ  ಎಂದು ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್ ತಿಳಿಸಿದ್ದಾರೆ.

ಸೋಂಕಿತರನ್ನು DWD 71 –  ಪಿ-  6222 (59 ವರ್ಷ , ಪುರುಷ)  ಇವರು ನವಲಗುಂದ ತಾಲ್ಲೂಕಿನ ಮೊರಬ ಗ್ರಾಮದ ನಿವಾಸಿಯಾಗಿದ್ದಾರೆ. ಇವರಿಗೆ ಹೇಗೆ ಸೋಂಕು ಹರಡಿದೆ ಗೋತ್ತಿಲ್ಲ. ಹೀಗಾಗಿ ಸೋಂಕಿನ ಸಂಪರ್ಕ  ಪತ್ತೆ ಮಾಡಲಾಗುತ್ತಿದೆ.

ಅದೇ ರೀತಿ DWD – 72 ಪಿ- 6245  ( 34  ವರ್ಷ ,ಪುರುಷ) ಇವರು ಬೆಂಗಳೂರಿನಿಂದ ಆಗಮಿಸಿದ ವ್ಯಕ್ತಿಯಾಗಿದ್ದಾರೆ. ಇವರಿಗೆ ಕೂಡ ಸೋಂಕು ಹೇಗೆ ಬಂದಿದೆ ಎಂಬುದು ತಿಳಿದಿಲ್ಲ. ಹೀಗಾಗಿ ಇವರ ಸಂಪರ್ಕ ಪತ್ತೆ ಮಾಡಲಾಗುತ್ತಿದೆ.



ಒಬ್ಬ ಗುಣಮುಖ ಬಿಡುಗಡೆ :

ಕೋವಿಡ್ ನಿಂದ ಗುಣಮುಖವಾಗಿರುವ ಪಿ -3913 ( 54 ವರ್ಷ,ಪುರುಷ) ನಿನ್ನೆ ಜೂನ್ 10 ರಂದು ಹುಬ್ಬಳ್ಳಿ ಕಿಮ್ಸ್ ನಿಂದ ಬಿಡುಗಡೆಯಾಗಿದ್ದಾರೆ.

ಆ ಮೂಲಕ ಧಾರವಾಡ  ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ  72 ಕ್ಕೆ ಏರಿಕೆಯಾಗಿದೆ. ಈಗಾಗಲೇ  46 ಜನ ಗುಣಮುಖರಾಗಿ ಆಸ್ಪತ್ರೆಯಿಂದ  ಬಿಡುಗಡೆಯಾಗಿದ್ದಾರೆ .

ಉಳಿದವರು  ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ವಿವರಿಸಿದ್ದಾರೆ.



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *