ರಾಜ್ಯ

ಕಿಡಿಗೇಡಿಗಳು ಯಾವುದೇ ಜಾತಿ, ಧರ್ಮ, ಪಕ್ಷದವರೇ ಆಗಿರಲಿ ಪೊಲೀಸರು ಬಂಧಿಸಲಿ

ಧಾರವಾಡ prajakiran.com : ಹುಬ್ಬಳ್ಳಿಯಲ್ಲಿ ನಡೆದಿರುವ ಘಟನೆಗಳು ಅತ್ಯಂತ ಖಂಡನೀಯ. ಘಟನೆಗೆ ಸಂಬಂಧಿಸಿದಂತೆ ಕರ್ನಾಟಕ ಥಿಂಕರ್ಸ್ ಫೋರಂ ಅಧ್ಯಕ್ಷ ಪಿ.ಎಚ್.ನೀರಲಕೇರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.

ಅವರ ಪತ್ರದ ಸಾರಾಂಶ ಹೀಗಿದೆ. 

ಮಾನ್ಯ ಮುಖ್ಯಮಂತ್ರಿಯವರೆ,

ಹುಬ್ಬಳ್ಳಿಯಲ್ಲಿ ನಡೆದಿರುವ ಘಟನೆಗಳು ಅತ್ಯಂತ ಖಂಡನೀಯ.ಇದಕ್ಕೆ ಹೊಣೆಗಾರರಾಗಿರುವ ಕಿಡಿಗೇಡಿಗಳು ಯಾವುದೇ ಜಾತಿ, ಧರ್ಮ ಇಲ್ಲವೇ ಪಕ್ಷದವರೇ ಆಗಿರಲಿ ಪೊಲೀಸರು ಅವರನ್ನು ಬಂಧಿಸಿ ಅಲ್ಲಿನ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಬೇಕು.

ಪೊಲೀಸರು ನಿಷ್ಪಕ್ಷಪಾತತನದಿಂದ ಕಾರ್ಯನಿರ್ವಹಿಸಲು ಕರ್ನಾಟಕ ಸರ್ಕಾರ ಅವಕಾಶ ನೀಡಬೇಕು. ಕೋಮುದ್ವೇಷವನ್ನು ಹುಟ್ಟುಹಾಕಿ, ಹರಡುವ ಮೂಲಕ ರಾಜ್ಯದ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕೆಡಿಸುವ ಹುನ್ನಾರವನ್ನು ಸಮಾಜವಿರೋಧಿ ಶಕ್ತಿಗಳು ಸತತವಾಗಿ ನಡೆಸುತ್ತಾ ಬಂದಿರುವುದನ್ನು ಕಾಣಬಹುದು.

ಇದು ಕೇವಲ ಆಕಸ್ಮಿಕವಾದ ಘಟನೆಗಳಾಗಿರದೆ ಇದರ ಹಿಂದೆ ಯೋಜಿತ ಕಾರ್ಯಸೂಚಿ ಇದ್ದ ಹಾಗೆ ಕಾಣುತ್ತಿದೆ.

ರಾಜ್ಯದ ಕಾನೂನು ವ್ಯವಸ್ಥೆಯಲ್ಲಿ ಹಿಂದೆಂದೂ ಈ ರೀತಿಯ ಅರಾಜಕತೆ ಕಂಡಿರಲಿಲ್ಲ. ಇದಕ್ಕೆ ಅಸಮರ್ಥ ಮತ್ತು ದುರ್ಬಲ ಗೃಹಸಚಿವರೇ ಮುಖ್ಯ ಕಾರಣ ಎನ್ನುವುದು ನಿರ್ವಿವಾದ.

ಈ ಅವಕಾಶವನ್ನು ದುರ್ಬಳಕೆ ಮಾಡಿಕೊಂಡು ಸಮಾಜವಿರೋಧಿ ಶಕ್ತಿಗಳು ಬೀದಿಗಳಿಯುತ್ತಿರುವಂತೆ ಕಾಣುತ್ತಿದೆ.

ರಾಜ್ಯದ ಕೆಲವು ಸಚಿವರು ಮತ್ತು ಆಡಳಿತಾರೂಢ ಪಕ್ಷದ ನಾಯಕರು ಪೊಲೀಸರ ಕಾರ್ಯನಿರ್ವಹಣೆಯಲ್ಲಿ ಮತ್ತೆ ಮತ್ತೆ ಮಧ್ಯಪ್ರವೇಶಿಸಿ, ತಮಗೆ ಅನುಕೂಲವಾಗುವಂತೆ ಕೆಲಸ ಮಾಡುವಂತೆ ಒತ್ತಡ ಹೇರುವ ಪ್ರಯತ್ನ ನಡೆಸುತ್ತಿದ್ದಾರೆ.

ಇದರಿಂದ ಪೊಲೀಸರು ನೈತಿಕವಾಗಿ ಕುಸಿದುಹೋಗಿದ್ದಾರೆ. ಇದು ಅತ್ಯಂತ ಕಳವಳಕಾರಿ ಬೆಳವಣಿಗೆ.

ರಾಜಕೀಯದ ಒತ್ತಡಕ್ಕೆ ಮಣಿದು ಪೊಲೀಸರು ಅಮಾಯಕರನ್ನು ಬಂಧಿಸುವ ಮತ್ತು ತನಿಖೆಯನ್ನೇ ನಡೆಸದೆ ಅಪರಾಧಿಗಳ ಹೆಸರನ್ನು ಮಾಧ್ಯಮಕ್ಕೆ ತಿಳಿಸುವ ಕೆಲಸವನ್ನು ಮಾಡಬಾರದು.

ಇದರಿಂದ ಪರಿಸ್ಥಿತಿ ಉಲ್ಭಣಗೊಂಡರೆ ಅದರ ನಿಯಂತ್ರಣದ ಭಾರ ತಮ್ಮ ಮೇಲೆಯೇ ಬೀಳಲಿದೆ ಎಂಬ ಎಚ್ಚರ ಪೊಲೀಸರಿಗೂ ಇರಬೇಕಾಗುತ್ತದೆ.

ಅಪರಾಧಿಗಳು ಕೇವಲ ಅಪರಾಧಿಗಳು, ಅವರಿಗೆ ಜಾತಿ, ಧರ್ಮಗಳಿರುವುದಿಲ್ಲ. ಇದನ್ನು ಸರ್ಕಾರ, ರಾಜಕೀಯ ಪಕ್ಷಗಳು ಮತ್ತು ಸಾರ್ವಜನಿಕರು ಮೊದಲು ತಿಳಿದುಕೊಳ್ಳಬೇಕು.

ಯಾರದೋ ಪ್ರಚೋದನೆಯಿಂದ ವಿವೇಚನೆಯನ್ನು ಕಳೆದುಕೊಂಡು ಸಿಟ್ಟಿನ ಕೈಗೆ ವಿವೇಕವನ್ನು ಕೊಡಬಾರದು, ಇಂತಹ ಸಂದರ್ಭಗಳನ್ನು ಸಹನೆ, ಸಂಯಮಗಳ ಮೂಲಕ ಎದುರಿಸಬೇಕು.

ಅಪರಾಧದ ಪ್ರಶ್ನೆ ಎದುರಾದಾಗ ಯಾರೂ ಯಾವುದೇ ಜಾತಿ, ಧರ್ಮದ ಪರವಾಗಿ ಇರುವುದು ಸರಿಯಲ್ಲ. ನಾವು ಸತ್ಯ, ನ್ಯಾಯ ಮತ್ತು ನೆಲದ ಕಾನೂನಿಗೆ ಬದ್ಧರಾಗಿ. ಪೊಲೀಸರು ನೆಲದ ಕಾನೂನಿಗೆ ನಿಷ್ಠರಾಗಿ ಕೈಗೊಳ್ಳುವ ಕ್ರಮಗಳಿಗೆ ನಮ್ಮ ಬೆಂಬಲ ಇದೆ.

ರಾಜಕೀಯ ಪೂರ್ವಗ್ರಹಪೀಡಿತರಾಗಿ ಕೈಗೊಳ್ಳುವ ನಿರ್ಧಾರಗಳಿಗಷ್ಟೇ ನಮ್ಮ ವಿರೋಧವಿದೆ.ಇದನ್ನೆಲ್ಲವನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಿಗಳು, ಮತ್ತು ಸರಕಾರ ನಡೆಸುವರೆಲ್ಲರೂ ಸಮ್ಮಾಜಿಕ ಸ್ವಾಸ್ತ್ಯ ಕಾಪಾಡುವಲ್ಲಿ ನಿಷ್ಪಕ್ಷಪಾತ ಧೋರಣೆ ಆಡಳಿತ ನಡೆಸಬೇಕು

ಇಲ್ಲದೆ ಹೋದರೆ ಅಪಾಯ ತಪ್ಪಿದ್ದಲ್ಲ ಅದರ ಸಂಪೂರ್ಣ ಹೊಣೆಗಾರಿಕೆ ಸರಕಾರದ್ದಾಗಿದೆ.
ದಯವಿಟ್ಟು ಸೂಕ್ಷ್ಮತೆಯನ್ನು ಅರಿತು ಗೌರವಾನ್ವಿತ ಮುಖ್ಯಮಂತ್ರಿ ಯವರು ಸೂಕ್ತ ನಿರ್ದಾರ ತೆಗೆದುಕೊಂಡು ಮಾನ್ಯ #ಪೊಲೀಸ್ಆಯುಕ್ತರುಹುಬ್ಬಳ್ಳಿಧಾರವಾಡ ಇವರಿಗೆ ನಿರ್ದೇಶನ ನೀಡಬೇಕೆಂದು ನಮ್ರವಿನಂತಿ.

ಪಿ. ಎಚ್ ನೀರಲಕೇರಿ.
ಅಧ್ಯಕ್ಷರು
ಕರ್ನಾಟಕ ಥಿಂಕರ್ಸ್ ಫೋರಂ
ಕಿಲ್ಲಾ ಧಾರವಾಡ 580008.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *