ರಾಜ್ಯ

ರಾಜ್ಯದಲ್ಲಿ ಬುಧವಾರ ಕರೋನಾಕ್ಕೆ 54 ಸಾವು, 2062  ಪ್ರಕರಣ ಪತ್ತೆ




ಬೆಂಗಳೂರು prajakiran.com : ರಾಜ್ಯದಲ್ಲಿ ಬುಧವಾರವೂ ಮಹಾಮಾರಿ ಕರೋನಾ ಅಟ್ಟಹಾಸ ಮುಂದುವರೆದಿದ್ದು, ಇಂದು ಕೂಡ ವಿವಿಧ ಜಿಲ್ಲೆಗಳಲ್ಲಿ 54  ಜನ ಸಾವನ್ನಪ್ಪಿದ್ದಾರೆ.

ಮತ್ತೆ ಹೊಸದಾಗಿ 2062 ಜನರಿಗೆ ಸೋಂಕು ಹರಡಿದ್ದರಿಂದ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ  28877 ಕ್ಕೆ ಏರಿಕೆಯಾಗಿದೆ.



 ಇಂದು ರಾಜ್ಯದಲ್ಲಿ  778 ಜನ ಬಿಡುಗಡೆಗೊಂಡಿದ್ದು, ಈವರೆಗೆ ಒಟ್ಟು  11876   ಜನ ಗುಣಮುಖರಾಗಿದ್ದು,    16527  ಸಕ್ರಿಯ ಪ್ರಕರಣಗಳಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 452   ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೋವಿಡ್ -19 ಸೋಂಕಿನಿಂದ ರಾಜ್ಯದಲ್ಲಿ ಬುಧವಾರ  54 ಜನ ಮೃತಪಟ್ಟಿದ್ದು, ಈವರೆಗೆ ಸಾವನ್ನಪ್ಪಿದ್ದವರ ಸಂಖ್ಯೆ   470ಕ್ಕೆ ಏರಿಕೆಯಾದಂತಾಗಿದೆ.

ಬುಧವಾರ ಪತ್ತೆಯಾದ ಪ್ರಕರಣಗಳಲ್ಲಿ ರಾಜ್ಯದ ರಾಜಧಾನಿ ಬೆಂಗಳೂರು ನಗರ ದಲ್ಲಿಯೇ ಅತಿ ಹೆಚ್ಚು ಸೋಂಕಿತರು ಕಂಡು ಬಂದಿದ್ದಾರೆ. ಬೆಂಗಳೂರಿನಲ್ಲಿ ನಿನ್ನೇ  800 ಜನ ಸೋಂಕಿತರಿದ್ದರೆ ಇಂದು ಬರೋಬ್ಬರಿ  1148 ಜನ ಸೋಂಕಿತರು ಕಂಡು ಬಂದಿರುವುದು ಬೆಂಗಳೂರಿಗರನ್ನು ಮತ್ತೆ ಬೆಚ್ಚಿಬೀಳಿಸುವಂತೆ ಮಾಡಿದೆ.



 ಇನ್ನೂಳಿದಂತೆ  ದಕ್ಷಿಣ ಕನ್ನಡ 183, ಧಾರವಾಡ 89, ಕಲಬುರಗಿ 66, ಮೈಸೂರು ಹಾಗೂ  ಬಳ್ಳಾರಿ 59, ಬೆಂಗಳೂರು ಗ್ರಾಮಾಂತರ 37, ರಾಮನಗರ 34, ಚಿಕ್ಕಬಳ್ಳಾಪುರ 32, ಉಡುಪಿ ಹಾಗೂ ಹಾವೇರಿ ತಲಾ 31, ಬೀದರ 29, ಬೆಳಗಾವಿ 27, ಹಾಸನ 26, ಬಾಗಲಕೋಟೆ ಹಾಗೂ ತುಮಕೂರು ತಲಾ 24, ಚಿಕ್ಕಮಗಳೂರು 23, ಮಂಡ್ಯ 20, ಉತ್ತರ ಕನ್ನಡ 19, ದಾವಣಗೆರೆ 18, ರಾಯಚೂರು ಹಾಗೂ ಶಿವಮೊಗ್ಗ ತಲಾ 17, ಕೋಲಾರ 16, ಯಾದಗಿರಿ ಹಾಗೂ ಕೊಪ್ಪಳ ತಲಾ 11, ಗದಗ 5, ವಿಜಯಪುರ 4, ಚಿತ್ರದುರ್ಗ 2 ಹೀಗೆ ಒಟ್ಟು 28 ಜಿಲ್ಲೆಗಳಲ್ಲಿ ಕರೋನಾ ವೈರಸ್ ತನ್ನ ಅಟ್ಟಹಾಸ ಮೆರೆದಿದೆ  ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.



ಸಾವಿನ ರಣಕೇಕೆ ರಾಜ್ಯದಲ್ಲಿ ಬುಧವಾರವೂ ಮುಂದುವರೆದಿದ್ದುರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ 24, ಧಾರವಾಡದಲ್ಲಿ  7, ಬಳ್ಳಾರಿ 4, ,  ಚಿಕ್ಕಬಳ್ಳಾಪುರ, ಹಾಸನ  ಹಾಗೂ ರಾಯಚೂರು 3, ವಿಜಯಪುರ, ತುಮಕೂರು ಹಾಗೂ ಮೈಸೂರು ತಲಾ 2, ಕಲಬುರಗಿ ಹಾಗೂ ದಕ್ಷಿಣ ಕನ್ನಡ, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ ತಲಾಒಬ್ಬರು ಸಾವನ್ನಪ್ಪಿದ್ದಾರೆ.  



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *