ರಾಜ್ಯ

ಧಾರವಾಡ ಜಿಲ್ಲೆಯಲ್ಲಿ ಬುಧವಾರ ಬರೋಬ್ಬರಿ 7 ಸಾವು, 89 ಜನರಿಗೆ ಕರೋನಾ

ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ಬುಧವಾರ ಸಂಜೆ ಮತ್ತೆ ಹೊಸದಾಗಿ 89 ಜನರಿಗೆ ಕೋವಿಡ್ ಪಾಸಿಟಿವ್ ಇರುವುದು ದೃಢವಾಗಿದೆ.

ಆ ಮೂಲಕ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 757ಕ್ಕೆ ಏರಿಕೆಯಾದಂತಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಲ್ತ್ ಬುಲೇಟಿನ್ ತಿಳಿಸಿದೆ. 

ಧಾರವಾಡ ಜಿಲ್ಲೆಯಲ್ಲಿ ಬುಧವಾರ  ಬರೋಬ್ಬರಿ 7 ಜನ ಸಾವನ್ನಪ್ಪಿದ್ದರೆ, 21 ಜನ ಸೋಂಕಿತರು ಕೋವಿಡ್ ನಿಯೋಜಿತ ಆಸ್ಪತ್ರೆಗಳ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವಿವರಿಸಿದೆ.

ಧಾರವಾಡ ಜಿಲ್ಲೆಯಲ್ಲಿ ಜು. 5ರಂದು 18 ಜನರಿಗೆ ಹೇಗೆ ಕರೋನಾ ಬಂತು ಎಂಬ ಮಾಹಿತಿ ಇರದಿದ್ದರೆ ಜು 6ರಂದು 11 ಜನರ ಕರೋನಾ ಸಂಪರ್ಕ  ಪತ್ತೆಯಾಗದಿದ್ದರೆ ಜು 7ರಂದು 16 ಜನರಿಗೆ ಜು. 8ರಂದು 19 ಜನರಿಗೆ ಕರೋನಾ ಹೇಗೆ ಹರಡಿದೆ ಎಂಬುದರ ಸಂಪರ್ಕ ಪತ್ತೆಯಾಗದಿರುವುದು ಆರೋಗ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ. 

(ಐಎಲ್ ಐ) ತೀವ್ರ ಜ್ವರ, ನೆಗಡಿ, ಕೆಮ್ಮಿನಿಂದ ಬಳಲುತ್ತಿದ್ದ ಜು. 6ರಂದು 24 ಜನರು ಬಳಲುತ್ತಿದ್ದರು. ಮತ್ತೇ ಜು. 7ರಂದು ಕೂಡ ಜಿಲ್ಲೆಯ ವಿವಿಧ  ನಿಯೋಜಿತ ಕೋವಿಡ್ ಆಸ್ಪತ್ರೆಗಳಲ್ಲಿ 24ಜನರಿಗೆ ಜು. 8 ರಂದು 52 ಜನರಿಗೆ ಗಂಟಲು ದ್ರವ ತಪಾಸಣೆ ನಡೆಸಿದಾಗ  ಕರೋನಾ ಪಾಸಿಟಿವ್ ಇರುವುದು ದೃಢಪಟ್ಟಿದೆ.

ಕರೋನಾ ಸೋಂಕಿತರ ಸಂಪರ್ಕದಿಂದ ಜು. 5ರಂದು 18 ಜನರಿಗೆ ಹರಡಿತ್ತು. ಜು. 6ರಂದು ಕೂಡ ಮತ್ತೆ 18 ಜನರಿಗೆ ಕರೋನಾ ವಕ್ಕರಿಸಿತ್ತು. ಮತ್ತೇ ಜು 7ರಂದು 12 ಜನರಿಗೆ ಹಾಗೂ ಜು 8 ರಂದು 13 ಜನರಿಗೆ ಕರೋನಾ ಹರಡಿದೆ ಎಂದು ಆರೋಗ್ಯ ಇಲಾಖೆ ವಿವರಿಸಿದೆ. 

 ಜಿಲ್ಲೆಯಲ್ಲಿ ಜೂನ್ 6ರಂದು ಒಬ್ಬರಿಗೆ ಸಾರಿ ಕೇಸ್ ಪತ್ತೆಯಾಗಿದ್ದರೆ, ಜೂನ್ 7ರಂದು 3 ಕೇಸ್, ಜು. 8 ರಂದು 5 ಸಾರಿ ಕೇಸ್  ದೃಢಪಟ್ಟಿವೆ.  

ಸಾವನ್ನಪ್ಪಿದವರ ವಿವರ : ಪಿ-18713 ಸೋಂಕಿತ 34 ವರ್ಷದ ವ್ಯಕ್ತಿ, ಪಿ-28431 ಸೋಂಕಿತ 85 ವರ್ಷದ ವೃದ್ದೆ, ಪಿ-28450 ಸೋಂಕಿತ 62 ವರ್ಷದ ವ್ಯಕ್ತಿ, ಪಿ-28451 ಸೋಂಕಿತ 65 ವರ್ಷದ ವೃದ್ದ, ಪಿ-28461 ಸೋಂಕಿತ 54 ವರ್ಷದ ಮಹಿಳೆ, ಪಿ-28497 ಸೋಂಕಿತ 70 ವರ್ಷದ ವೃದ್ದ ಸಾರಿ ಕೇಸ್ ನಿಂದ ಮೃತಪಟ್ಟರೆ,  ಪಿ-20056 ಸೋಂಕಿತ 65 ವರ್ಷದ ವೃದ್ದ ಐ ಎಲ್ ಐ ನಿಂದ   ಸಾವನ್ನಪ್ಪಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿ ಬುಧವಾರ ಒಟ್ಟು 23 ಜನ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *