ರಾಜ್ಯ

ಮಾ. 5ರಂದು ರಾಜ್ಯಾದ್ಯಂತ ಶ್ರೀ ಜಗದ್ಗುರು ರೇಣುಕಾಚಾರ್ಯರ ಯುಗಮಾನೋತ್ಸವ ಜಯಂತಿ ಆಚರಣೆ

ಧಾರವಾಡದ ಆಲೂರು ವೆಂಕಟರಾವ್ ಸಭಾಭವನದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಯುಗಮಾನೋತ್ಸವ ಜಯಂತಿ ಆಚರಣೆ

ಧಾರವಾಡ ಮಾ.4 : ಶ್ರೀ ಜಗದ್ಗುರು ರೇಣುಕಾಚಾರ್ಯರ ಯುಗಮಾನೋತ್ಸವ ಜಯಂತಿಯನ್ನು ಈ ವರ್ಷದಿಂದ ರಾಜ್ಯ ಸರ್ಕಾರವು ಪ್ರಪ್ರಥಮವಾಗಿ ಇದೇ ದಿ. 5 ರಂದು ರಾಜಾದ್ಯಂತ ಆಚರಿಸುತ್ತಿರುವುದು ಸ್ವಾಗತಾರ್ಹ.

ಅದರಂತೆ ಧಾರವಾಡ ಜಿಲ್ಲಾ ಆಡಳಿತ ಹಾಗೂ ಕನ್ನಡ ಮತ್ತು ಸಾಂಸ್ಕೃತಿ ಇಲಾಖೆಯಿಂದ ಧಾರವಾಡದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನ ಆಚರಿಸುತ್ತಿದ್ದು , ಈ ಕಾರ್ಯಕ್ರಮಕ್ಕೆ ಸಕಲ ವೀರಶೈವ ಲಿಂಗಾಯತ ಹಾಗೂ ಎಲ್ಲಾ ಸಮಾಜದ ಬಾಂಧವರು ಹೆಚ್ಚಿನ ಪ್ರಮಾಣದಲ್ಲಿ ಪಾಲ್ಗೊಳ್ಳಬೇಕೆಂದು ವಿಶ್ವ ವೀರಶೈವ ಸಂಸ್ಕೃತಿ ಸಂರಕ್ಷಣಾ ಸಮಿತಿ ರಾಷ್ಟ್ರೀಯ ಸಂಚಾಲಕರಾದ ನಾಗನಗೌಡ ಪಾಟೀಲ ನೀರಲಗಿ ಹಾಗೂ ರಾಜ್ಯ ಸಂಚಾಲಕ ನಾಗರಾಜ ಕಿರಣಗಿ ಮನವಿ ಮಾಡಿದರು.

ಅವರು ಶನಿವಾರ ಜಂಟಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರ.
ಈ ಸೃಷ್ಟಿಯನ್ನು ಸೃಷ್ಟಿಮಾಡುವುದಕೋಸ್ಕರ ತನ್ನೊಳಗೆ ಮಾಹೆಯನ್ನು ( ಆದಿಶಕ್ತಿಯನ್ನು ) ಸೃಷ್ಟಿಸಿಕೊಂಡು ಶಿವನು ಅರ್ಧನಾರೇಶ್ವರನಾಗಿ ಪಾರ್ವತಿ ಪರಮೇಶ್ವರ ರೂಪವನ್ನು ತಾಳಿ ಸದಾಶಿವ ಪರಮಾತ್ಮನಾದನು. ತದ ನಂತರ ಬ್ರಹ್ಮನನ್ನು ಸೃಷ್ಟಿಸಿದನು. ಸೃಷ್ಟಿಯ ಕಲೆ ಬೋಧನೆಯನ್ನು ಮಾಡಿ ಸೃಷ್ಟಿಯನ್ನು ಸೃಷ್ಟಿಸಲು ಆದೇಶಿಸಿದನು. ಆದರೆ ಎಷ್ಟೋ ವರ್ಷಗಳು ಆದರೂ ಸಹ ಬ್ರಹ್ಮನಿಗೆ ಈ ಸೃಷ್ಟಿಯನ್ನು ಸೃಷ್ಟಿಸಲು ಸಾಧ್ಯವಾಗದೆ ಹೋದಾಗ ಪರಶಿವನಲ್ಲಿ ಮೊರೆ ಹೋದನು. ಆಗ ನಿಷ್ಕಲ ಪರಬ್ರಹ್ಮ ಮೂರ್ತಿಯಾದ ಪರಶಿವನು ತನ್ನ ಪಂಚ ಮುಖದಿಂದ ಪಂಚ ಗಣಾಧ್ಯಕ್ಷರನ್ನು ಬ್ರಹ್ಮನಿಗೆ ಸಹಾಯ ಮಾಡಲು ಹಾಗೂ ಸೃಷ್ಟಿ ಕಲೆಯನ್ನು ಕಲಿಸಲು ಪಂಚ ಗಣಾಧ್ಯಕ್ಷರನ್ನು ಬ್ರಹ್ಮನೊಡನೆ ಕಳಿಸಿದನು ಎಂದರು.

ಆ ಪಂಚ ಗಣಾಧ್ಯಕ್ಷರು ಪರಶಿವನ ಸಜ್ಯೋಜಾತ, ವಾಮದೇವ, ಅಘೋರ, ತತ್ಪುರುಷ, ಈಶಾನ್ಯ ಎಂಬುವವರೇ ಪರಶಿವನ ಪಂಚ ಅವತಾರ ಪುರುಷರಾಗಿದ್ದಾರೆ ಎಂದರು.

ಈ ಪಂಚ ಪುರುಷರು ಪೃಥ್ವಿ, ವಾಯು, ಅಗ್ನಿ, ವರುಣ, ಆಕಾಶ ಎಂಬ ಪಂಚಭೂತವನ್ನು ಸೃಷ್ಟಿಸಿ ಆ ಪಂಚಭೂತದಿಂದ ಸಕಲ ಸೃಷ್ಟಿ ಕಲೆಯನ್ನು ಆಚಾರ – ವಿಚಾರಗಳನ್ನು ಬ್ರಹ್ಮನಿಗೆ ಬೋಧಿಸಿ ಆ ಪಂಚಭೂತಗಳಿಗೆ ಅನುಗುಣವಾಗಿ ಪಂಚಭೂತ ತತ್ವದಡಿಯಲ್ಲಿ ಸೃಷ್ಟಿಯನ್ನು ಸೃಷ್ಟಿಸಲು ಆದೇಶಿಸಿ ಪರಶಿವನ ಚೈತನ್ಯ ರೂಪವಾದ ಈ ಪಂಚಗಣಾಧೀಶರು ಮರಳಿ ಪರಶಿವನ ವಾಸಿಸುವ ಕೈಲಾಸಕ್ಕೆ ಪಯಣಿಸಿದರು. ಮುಂದೆ ಯುಗ ಯುಗದಲ್ಲಿ ಸಕಲ ಜೀವಿಗಳ ಲೇಸನ್ನು ಬಯಸಿ ಪರಶಿವನು ಅವತಾರವನ್ನು ತಾಳಿ ಈ ಭೂಮಂಡಲಕ್ಕೆ ಅವತಾರ ಪುರುಷರಾಗಿ ಧರೆಗಿಳಿಯುತ್ತಾನೆ.
ಅದರಲ್ಲಿ ಸಪ್ತ ಸಮುದ್ರದ ಭೂ ಭಾಗವಾದ ದಕ್ಷಿಣಾ ಪಥಕ್ಕೆ ಯುಗ ಯುಗದಲ್ಲಿ ಅವತಾರ ಪುರುಷರಾಗಿ ಸಕಲ ಜೀವಿಗಳ ಲೇಸನ್ನು ಬಯಸಿ ಮಾನವನ ಕುಲಕ್ಕೆ ಮೋಕ್ಷವನ್ನು ದಯಪಾಲಿಸುವುದಗೋಸ್ಕರ ಪರಶಿವನ ಸಜ್ಯೋಜಾತ ಮುಖದಿಂದ ಉದ್ಭವಿಸಿದ ಆಚಾರ್ಯರೇ ಶ್ರೀ ಜಗದ್ಗುರು ರೇಣುಕಾಚಾರ್ಯರು. ಇವರು ಯುಗಯುಗಳಲ್ಲಿ ಸಕಲ ಜೀವಿಗಳ ಸಮಾನತೆಯನ್ನು ಬೋಧಿಸಿ ಕಲಿಯುಗದಲ್ಲಿ ಎಲ್ಲರೂ ಶಿವ ಸಜ್ಯೋಜಾತರಾಗಿ ಶಿವಕೈ ಹೊಂದಲು ಶಿವಜ್ಞಾನವನ್ನು ಪಡೆಯುವುದಕೋಸ್ಕರ ಎಲ್ಲಾ ಪಂಗಡಗಳನ್ನು ಒಗ್ಗೂಡಿಸಿ ಸಾವಿರಾರು ವರ್ಷಗಳ ಹಿಂದೆ ಯುಗ ಯುಗದಲ್ಲಿ ಸಂಘಟನಾತ್ಮಕವಾಗಿ ಸಂಘಟನೆಗಳನ್ನು ರೂಪಿಸಿದರು ಎಂದರು.

ಅದರಲ್ಲಿ ಸಕಲ ವಿದ್ಯೆಯನ್ನು ಬಲ್ಲವನಾದ ಗುರುವನ್ನು ನೇಮಿಸಿ ಆ ಗುರುವಿಗೆ ವೀರಮಹೇಶ್ವರ ಎಂಬ ನಾಮಕರಣ ಮಾಡಿ ಪುರಪುರದಲ್ಲಿ ಸಂಘಟನಾತ್ಮಕ ಸಂಘವನ್ನು ಮಾಡಿದರು. ಅದರಲ್ಲಿ ಸಮಾಜಮುಖವಾದ ಕೆಲಸವನ್ನು ಮಾಡಲು 64 ಕಲೆ, 36 ತತ್ವ, 63 ಶೀಲ ಎಂಬ ಎಲ್ಲಾ ವಿಷಯನ್ನು ಕಲಿಸುವ ಅಲ್ಲಿ ಎಲ್ಲಾ ಜನರು ಸಾಕು ಪ್ರಾಣಿಯೊಡನೆ ಹೆಣ್ಣು ಗಂಡು ಎನ್ನದೆ ಎಲ್ಲರನ್ನು ಸೇರಿಸಿ ಒಂದು ಕೇಂದ್ರವನ್ನು ನಿರ್ಮಾಣ ಮಾಡಿದರು. ಅದಕ್ಕೆ ಗುರು ಕುಟೀರ ಮತ್ತು ಮಠ ಎಂದು ಈಗ ಕರೆಯುತ್ತಾರೆ. ಈ ಎಲ್ಲಾ ಅವರು ಮಾಡಿದ ಕ್ರಾಂತಿಯನ್ನು ಇಂದಿನ ಜನಪದ ಕಲೆಯಲ್ಲಿ ನಾವು ಕಾಣಬಹುದು ಅಂತ ಮಹಾನ ಪುರುಷರ ಮೂರು ಲೋಕದ ಜಗದ್ಗುರುಗಳಾದ ರೇಣುಕಾಚಾರ್ಯರ ಯುಗಮಾನೋತ್ಸವ ಸರ್ಕಾರದಿಂದ ಆಚರಣೆ ಮಾಡಲಾಗುತ್ತಿದೆ ಎಂದರು

ಇಂದಿನ ಸಮಾಜವು ಚದುರಿ ಹೋಗುವುದನ್ನು ತಡೆದು ಮಾನವರು ನಾವೆಲ್ಲರೂ ಒಂದು ಎಂದು ತೋರಿಸಿಕೊಟ್ಟಿದೆ. ಆದ ಕಾರಣ ಇಂದಿನ ಕಾಲಘಟ್ಟದಲ್ಲಿ ಬೇರೆಯಾದ ಎಲ್ಲಾ ಸಮಾಜಗಳು ಈ ಜಯಂತಿಯಲ್ಲಿ ಪಾಲ್ಗೊಂಡು ಜಗದ್ಗುರು ರೇಣುಕಾ ಚಾರ್ಯರ ಜಯಂತಿಯನ್ನು ಯಶಸ್ವಿಗೊಳಿಬೇಕೆಂದು ನಮ್ಮ ಸಂಘವು ಬಯುಸುತ್ತದೆ. ಮಾನವರು ನಾವೆಲ್ಲರೂ ಒಂದೆ. ಮಾನವನ ಧರ್ಮಕ್ಕೆ ಜಯವಾಗಲಿ. ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಮಹಾನ್ ಸಂದೇಶವನ್ನು ನೀಡಿದ ಮತ್ತು ವೀರತ್ವವನ್ನು ನೀಡಿ ಅಂಗದಲ್ಲಿ ಇಷ್ಟ ಲಿಂಗವನ್ನು ನೀಡಿ ಲಿಂಗಾಂಗ ಸಾಮರಸ್ಯ ಬೋಧಿಸಿದ ಅನಾದಿ ಶುದ್ಧ ಸನಾತನ ವೀರಶೈವ ಜಗದ್ಗುರುಗಳ ಆಚರಣೆ ಮಾಡುವುದಗೋಸ್ಕರ ಜಿಲ್ಲಾ ಆಡಳಿತ ಆಚರಿಸುತ್ತಿರುವ ಜಯಂತಿಯ ಕಾರ್ಯಕ್ರಮಕ್ಕೆ ಧಾರವಾಡ ಜಿಲ್ಲೆಯ ಎಲ್ಲಾ ಜನತೆ ಆಗಮಿಸಬೇಕೆಂದು ವಿಶ್ವ ವೀರಶೈವ ಸಂಸ್ಕೃತಿ ಸಂರಕ್ಷಣಾ ಸಮಿತಿ ರಾಷ್ಟ್ರೀಯ ಸಂಚಾಲಕರಾದ ನಾಗನಗೌಡ ಪಾಟೀಲ ನೀರಲಗಿ ಹಾಗೂ ರಾಜ್ಯ ಸಂಚಾಲಕ ನಾಗರಾಜ ಕಿರಣಗಿ ತಿಳಿಸಿದರು.

ಈ ಪತ್ರಿಕಾಗೋಷ್ಟಿಯಲ್ಲಿ ಜಂಗಮ ಸಮಾಜದ ಹಿರಿಯರಾದ ಶಿವಪ್ರಕಾಶ ಹಿರೇಮಠ, ವೀರಶೈವ ಲಿಂಗಾಯತ ಸಮಾಜದ ಯುವ‌ಮುಖಂಡರಾದ ರವಿಶಂಕರ ಮಾಲಿಪಾಟೀಲ, ಆನಂದ ಪಾಟೀಲ ಉಪಸ್ಥಿತರಿದ್ದರು

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *