ರಾಜ್ಯ

ಧಾರವಾಡ ಜಿಲ್ಲೆಯಲ್ಲಿ ಮೂರು ದಿನಗಳ ಅವಧಿಯಲ್ಲಿ ಏಳು ಜನ ಮರಣ




ಧಾರವಾಡ prajakiran.com : ಕೋವಿಡ್ ನಿಂದಾಗಿ ಕಳೆದ ಮೂರು ದಿನಗಳ ಅವಧಿಯಲ್ಲಿ ಧಾರವಾಡ ಜಿಲ್ಲೆಯಲ್ಲಿ ಏಳು ಜನ ಮೃತಪಟ್ಟಿದ್ದು, ಆ ಮೂಲಕ ಜಿಲ್ಲೆಯಲ್ಲಿ ಒಟ್ಟು ಸಾವಿನ ಸಂಖ್ಯೆ ಇಪ್ಪತ್ತಕ್ಕೆ ಏರಿದೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ ತಿಳಿಸಿದ್ದಾರೆ.

ಪಿ-28497 ( 70 ವರ್ಷ, ಪುರುಷ) ಹಾವೇರಿ ಜಿಲ್ಲೆಯವರು, ಜುಲೈ 5 ರಂದು ಮರಣ ಹೊಂದಿದ್ದಾರೆ. ನಿನ್ನೆ ಜುಲೈ 7 ರಂದು ಕೋವಿಡ್ ದೃಢಪಟ್ಟಿದೆ.

ಪಿ-28461 (54 ವರ್ಷ, ಮಹಿಳೆ) ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಹಮ್ಮಿಗಿ ಗ್ರಾಮದವರು. ತೀವ್ರ ಉಸಿರಾಟದ ತೊಂದರೆಯಿಂದ ಎಸ್ ಡಿ ಎಂ ಆಸ್ಪತ್ರೆಯಲ್ಲಿ ಜುಲೈ 6 ರಂದು ಮೃತಪಟ್ಟಿದ್ದಾರೆ.



ಪಿ- 28451 ( 65 ವರ್ಷ, ಪುರುಷ) ಬಳ್ಳಾರಿ ಜಿಲ್ಲೆಯ ಹೊಸಪೇಟೆಯವರು ಎಸ್ ಡಿ ಎಂ ಆಸ್ಪತ್ರೆಯಲ್ಲಿ ನಿನ್ನೆ ಜುಲೈ 7 ರಂದು ಮೃತಪಟ್ಟಿದ್ದಾರೆ. ಪಿ-28450 ( 62 ವರ್ಷ, ಪುರುಷ) ಹುಬ್ಬಳ್ಳಿ ನಗರದ ಮಂಟೂರ ರಸ್ತೆ ನಿವಾಸಿ.ಜುಲೈ 5 ರಂದು ಮೃತಪಟ್ಟಿದ್ದಾರೆ.

ಪಿ- 28431 ( 85 ವರ್ಷ,ಮಹಿಳೆ) ಶಸ್ತ್ರಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಗೆ ಜುಲೈ 6 ರಂದು ಬಂದಿದ್ದರು ಆಗ ಮೂಗು ಮತ್ತು ಗಂಟಲು ದ್ರವ ಪರೀಕ್ಷೆಗೆ ತೆಗೆದುಕೊಂಡು ಮನೆಗೆ ಕಳುಹಿಸಲಾಗಿತ್ತು. ಮನೆಗೆ ಹೋದ ನಂತರ ಸಾವಿಗೀಡಾಗಿದ್ದಾರೆ. ಕೋವಿಡ್ ವರದಿ ಜುಲೈ 7 ರಂದು ಬಂದಿದೆ.



ಪಿ-18713 ( 34 ವರ್ಷ, ಪುರುಷ) ನವಲಗುಂದ ತಾಲೂಕು ಶಿರಕೋಳದವರು.ಜುಲೈ 6 ರಂದು ಮೃತಪಟ್ಟಿದ್ದಾರೆ. ಪಿ-20056 ( 65 ವರ್ಷ, ಪುರುಷ) ಮೊರಬ ಗ್ರಾಮದವರು, ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಜುಲೈ 7 ರಂದು ಮೃತಪಟ್ಟಿದ್ದಾರೆ.

ಪಾರ್ಥಿವ ಶರೀರಗಳನ್ನು ಜಿಪ್ ಉಳ್ಳ ಎರಡು ಲೇಯರ್ ಕವರ್ ಗಳಲ್ಲಿ ನಿಯಮಾನುಸಾರ ಮುಚ್ಚಿ, ಶವಸಂಸ್ಕಾರ ನಿರ್ವಹಿಸಲಾಗಿದೆ.



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *