ಸಿನಿಮಾ

ನಟಿ ರಾಗಿಣಿ ಮತ್ತೇ ಐದು ದಿನಗಳ ಕಾಲ ಸಿಸಿಬಿ ವಶಕ್ಕೆ

ಬೆಂಗಳೂರು prajakiran.com : ಡ್ರಗ್ಸ್ ಜಾಲದ ನಂಟು ಆರೋಪದ ಹಿನ್ನಲೆಯಲ್ಲಿ ಈಗಾಗಲೇ ಮೂರು ದಿನಗಳ ಕಾಲ ಬೆಂಗಳೂರು ಸಿಸಿಬಿ ವಶದಲ್ಲಿದ್ದ ನಟಿ ರಾಗಿಣಿಗೆ ಮತ್ತೇ ನ್ಯಾಯಾಲಯ ಐದು ದಿನಗಳ ವಶಕ್ಕೆ ನೀಡಿದೆ.

ಇದು ನಟಿ ರಾಗಿಣಿಗೆ ಮತ್ತಷ್ಟು ಸಂಕಷ್ಟ ತಂದಿದ್ದು, ಸಿಸಿಬಿ ಅಧಿಕಾರಿಗಳ ವಿಚಾರಣೆಗೆ ಸ್ಪಂದಿಸದ ಹಿನ್ನಲೆಯಲ್ಲಿ ನ್ಯಾಯಾಲಯಕ್ಕೆ ಹತ್ತು ದಿನಗಳ ಕಾಲ ವಶಕ್ಕೆ ನೀಡುವಂತೆ ಕೋರಿದ್ದರು.

ಆದರೆ ನ್ಯಾಯಾಲಯ ಐದು ದಿನಗಳ ಕಾಲ ವಶಕ್ಕೆ ನೀಡಿದ್ದು, ಇದರಿಂದ ರಾಗಿಣಿ ಇಕ್ಕಟ್ಟಿಗೆ ಸಿಲುಕಿದ್ದಾರೆ.

ಇವರ ಮೊಬೈಲ್ ನಲ್ಲಿಯೇ ಸಾಕಷ್ಟು ಮಾಹಿತಿ ದೊರೆತಿದೆ. ಆದರೆ ವಿಚಾರಣೆ ವೇಳೆ ಅವರು ಸಹಕರಿಸುತ್ತಿಲ್ಲ. ಸಾಕಷ್ಟು ಡ್ರಗ್ಸ್ ಪಾರ್ಟಿಗಳಿಗೆ ಹೋಗಿ ಬಂದಿದ್ದರು  ಮಾಹಿತಿ ನೀಡುತ್ತಿಲ್ಲ ಎಂದು ಸಿಸಿಬಿ ಅಧಿಕಾರಿಗಳು ನ್ಯಾಯಾಲಯದ ಗಮನ ಸೆಳೆದರು. ಹೇಳಿದರು.

ಮೂರು ದಿನಗಳ ವಿಚಾರಣೆ ವೇಳೆ ಒಂದು ದಿನ ಬೆನ್ನು ನೋವು, ಆರೋಗ್ಯ ನೆಪವೊಡ್ಡಿ ತನಿಖೆಗೆ ಸಹಕರಿಸಿರಲಿಲ್ಲ.

ಸದ್ಯ ಮಹಿಳಾ ಸಾಂತ್ವಾನ ಕೇಂದ್ರದಲ್ಲಿರುವ ನಟಿ ರಾಗಿಣಿ ಊಟ, ಉಪಹಾರ, ಸೊಳ್ಳೆಕಾಟ, ಕಬ್ಬಿಣ ಕುರ್ಚಿ ನೀಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಸಿಸಿಬಿ ಕಸ್ಟಡಿ ಅವಧಿ ಮುಗಿದ ನಂತರ ಜಾಮೀನು ನೀಡಬೇಕೆ ಬೇಡವೇ ಎಂಬುದು ನಿರ್ಧರಿಸಲಾಗುವುದು. ಅಲ್ಲಿಯವರೆಗೆ ಜಾಮೀನು ಇಲ್ಲ ಎಂದು ಸೆಶನ್ಸ್ ನ್ಯಾಯಾಲಯ ಹೇಳಿದೆ.

ಎನ್ ಡಿಪಿ ಎಸ್ ವಿಶೇಷ ಕೋರ್ಟ್ ನಲ್ಲಿ ಡ್ರಗ್ಸ್ ಜಾಲದ ಎ 2 ಆರೋಪಿಯಾಗಿರುವ ಅರ್ಜಿ ವಿಚಾರಣೆ ಬಾಕಿಯಿದೆ.

ಹೀಗಾಗಿ ಅವರ ಸಿಸಿಬಿ ವಿಚಾರಣೆ ಮುಗಿದ ಬಳಿಕ ಈ ಬಗ್ಗೆ ತೀರ್ಮಾನಿಸಲಾಗುವುದು.

ಪೊಲೀಸ್ ತನಿಖಾ ಹಂತದಲ್ಲಿರುವುದರಿಂದ ಸೆಶನ್ಸ್ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಲಾಗಿತ್ತು.  

ಇದೇ ವೇಳೆ ಎನ್ ಸಿ ಬಿ ಅಧಿಕಾರಿಗಳು ಕೂಡ ನಟಿ ರಾಗಿಣಿಯನ್ನು ವಿಚಾರಣೆಗೆ ಒಳಪಡಿಸಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಮೊದಲು ಎನ್ ಸಿ ಬಿಯೇ ಈ ಕುರಿತು ಮಾಹಿತಿ ಹೊರ ಹಾಕಿತ್ತು. ಅಲ್ಲದೆ, ಡ್ರಗ್ಸ್ ಪೆಡ್ಲರ್ ಅನಿಕಾ ಜೊತೆಗೆ ಸಂಪರ್ಕವಿದೆಯೇ ಎಂಬುದನ್ನು ಮಾಹಿತಿ ಸಂಗ್ರಹಿಸಲಿದೆ ಎಂದು ತಿಳಿದುಬಂದಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *