ಅಭಿಮಾನಿಗಳಲ್ಲಿ ಹೆಚ್ಚಿದ ಕುತೂಹಲ
ಮುಂಬೈ Prajakiran.com : ನಾವೆಲ್ಲ ಚಿಕ್ಕರಿದ್ದಾಗ ಕ್ರಿಶ್ ಸಿನಿಮಾದಲ್ಲಿ ಬರುವ ಹೀರೋನ ಅದ್ಭುತ ಸಾಮಾರ್ಥ್ಯ ನೋಡಿ ಆಶ್ಚರ್ಯದ ಜೊತೆಗೆ ಖುಷಿ ಕೂಡಾ ಪಟ್ಟಿದ್ದೇವು.
ಆ ಸಿನಿಮಾದ ಯಶಸ್ಸಿನ ಹಿನ್ನೆಲೆ ಕ್ರಿಶ್ 1,ಕ್ರಿಶ್ 2, ಕ್ರಿಶ್ 3 ಬಂದವು. ಇದೀಗ ಹೃತಿಕ್ ಹರಿ ಬಿಟ್ಟ ವಿಡಿಯೋ ಒಂದು ಅಭಿಮಾನಿಗಳಲ್ಲಿ ಕಯತೂಹಲ ಮೂಡಿಸಿದೆ.
ಕ್ರಿಶ್ 4 ಬಗ್ಗೆ ಸ್ವತಃ ಹೃತಿಕ್ ರೋಷನ್ ಅವರೇ ಸಣ್ಣ ಸುಳಿವು ನೀಡಿದ್ದಾರೆ.
ಕ್ರಿಶ್ ಮೊದಲ ಸಿನಿಮಾ ಬಂದು 15 ವರ್ಷಗಳಾಗಿವೆ. ಈ ಕುರಿತು ಟ್ವಿಟರ್ನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.
ಹೃತಿಕ್ ವಿಡಿಯೋ ಕೆಳಗೆ ‘ಕ್ರಿಶ್ ಈಗಾಗಲೇ ಜನರ ಮನಮುಟ್ಟಿದ್ದು, ಇದು ಪಾಸ್ಟ್.
ಇನ್ನು ಫ್ಯೂಚರ್ ನಮಗಾಗಿ ಏನು ನೀಡಲಿದೆ ನೋಡಬೇಕು, ಕ್ರಿಶ್ 4’ ಎಂದು ಕ್ಯಾಪ್ಷನ್ ಹಾಕಿದ್ದಾರೆ.
ಇನ್ನೂ ವಿಡಿಯೋದಲ್ಲಿ ಹೃತಿಕ್ ಮಾಸ್ಕ್ ಒಂದನ್ನು ಗಾಳಿಯಲ್ಲಿ ಹಾರಿ ಬಿಟ್ಟಿದ್ದಾರೆ. ಈ ಮೂಲಕ ಹೃತಿಕ್ ಅಭಿಮಾನಿಗಳಿಗೆ ಕ್ರಿಶ್ 4 ಕುರಿತು ಸಣ್ಣ ಸುಳಿವು ನೀಡಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ.