ರಾಜ್ಯ

ಧಾರವಾಡದ ಎಸ್‌ಡಿಎಂನಲ್ಲಿ ೧೩, ಹುಬ್ಬಳ್ಳಿಯ ಕಿಮ್ಸ ನಲ್ಲಿ ೧೮೮ ಜನರಿಗೆ ಚಿಕಿತ್ಸೆ




ಧಾರವಾಡ prajakiran.com : ಪ್ರಸ್ತುತ ಧಾರವಾಡ ಜಿಲ್ಲೆಯಲ್ಲಿ ಕರೋನಾ ವೈರಸ್ ಚಿಕಿತ್ಸೆಗೆ ಕಿಮ್ಸ ನಲ್ಲಿ ೧೮೮, ಎಸ್‌ಡಿಎಂನಲ್ಲಿ ೧೩, ಕೋವಿಡ್ ಕೇರ್ ಸೆಂಟರ್‌ನಲ್ಲಿ ೧೩೮ ಸೇರಿ ಒಟ್ಟು ೩೩೯ ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.

ಅವರು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರ ನೇತೃತ್ವದಲ್ಲಿ ನಡೆದ ಸಭೆಗೆ  ಈ ಕುರಿತು ಮಾಹಿತಿ ನೀಡಿದ್ದಾರೆ.

ಧಾರವಾಡದ ಡಿಮ್ಹಾನ್ಸ್ ಪ್ರಯೋಗಾಲಯದಲ್ಲಿ ೩೧,೮೦೭, ಕಿಮ್ಸ್ ೧೯೫೯೬, ಖಾಸಗಿ ಎನ್‌ಎಂಆರ್ ಪ್ರಯೋಗಾಲಯದಲ್ಲಿ ೬೩ ಜನರನ್ನು ಇದುವರೆಗೆ ಕೋವಿಡ್ ತಪಾಸಣೆಗೆ ಒಳಪಡಿಸಲಾಗಿದೆ ಎಂದು ಹೇಳಿದ್ದಾರೆ.  



ಧಾರವಾಡ ಜಿಲ್ಲೆಯ ಕಿಮ್ಸ್ ನಲ್ಲಿ ೨೫೦, ಜಿಲ್ಲಾಸ್ಪತ್ರೆಯಲ್ಲಿ ೪೦, ಮೂರು ತಾಲೂಕಾ ಆಸ್ಪತ್ರೆಗಳಲ್ಲಿ ತಲಾ ೫೦ ಹಾಸಿಗೆಗಳು ಸೇರಿ ಒಟ್ಟು ೪೪೦ ಹಾಸಿಗೆಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗೆ ಮೀಸಲಿಡಲಾಗಿದೆ ಎಂದು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ೯೧ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ೮೯೭೦ ಹಾಸಿಗೆಗಳ ಸಾಮರ್ಥ್ಯ ಗುರುತಿಸಲಾಗಿದೆ. ಈ ಪೈಕಿ ಸದ್ಯ ೪ ಸೆಂಟರ್‌ಗಳಲ್ಲಿ ೩೦೦ ಹಾಸಿಗೆಗಳು ಲಭ್ಯವಿವೆ.



ಎಲ್ಲಾ ೧೭ ಖಾಸಗಿ ಆಸ್ಪತ್ರೆಗಳಲ್ಲಿ ಅವುಗಳ ಒಟ್ಟು ಸಾಮರ್ಥ್ಯದ ಅರ್ಧದಷ್ಟು ಹಾಸಿಗೆಗಳನ್ನು ಕೋವಿಡ್ ಚಿಕಿತ್ಸೆಗೆ ಹಂತಹಂತವಾಗಿ ಪಡೆಯಲಾಗುವುದು ಎಂದು ಸಭೆಗೆ ಜಿಲ್ಲಾಧಿಕಾರಿಗಳು ವಿವರಿಸಿದರು.



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *