ರಾಜ್ಯ

ಸರ್ಕಾರಿ ಕಚೇರಿ ಕೇವಲ 24 ಗಂಟೆ, ಸಾರ್ವಜನಿಕರ ಅಂಗಡಿ ಗಳಾದರೆ 48 ಗಂಟೆ ಸೀಲ್ ಡೌನ್ …!?

ಧಾರವಾಡ prajakiran.com : ಧಾರವಾಡ ಜಿಲ್ಲಾಡಳಿತ ಸಾರ್ವಜನಿಕ ಹಿತದೃಷ್ಟಿಯಿಂದ ರ‍್ಯಾಪಿಡ್ ಆ್ಯಂಟಿಜನ್ ಟೆಸ್ಟ್ ಮಾಡುತ್ತಿರುವುದು ಒಳ್ಳೆಯ ಕಾರ್ಯಕ್ರಮ. ಕೆಮ್ಮು, ನೆಗಡಿ, ಜ್ವರ, ಶೀತದ ಲಕ್ಷಣಗಳು ಇದ್ದರೆ ಕೋವಿಡ್ ತಪಾಸಣೆ ಮಾಡಿಸಿಕೊಳ್ಳಿ ಎಂದು ಜಾಹಿರಾತು ತಪಾಸಣೆಯ ವಾಹನದ ಮೇಲೆ ಇದೆ. ಆದರೆ ಪೊಲೀಸರು, ಮಹಾನಗರ ಪಾಲಿಕೆ ಅಧಿಕಾರಿಗಳು, ಎಲ್ಲಾ ಅಂಗಡಿಕಾರರಿಗೆ ಹಾಗೂ ಸಾರ್ವಜನಿಕ ರಿಗೆ ಒತ್ತಾಯ ಪೂರ್ವಕವಾಗಿ  ಪರೀಕ್ಷೆ ಮಾಡಿಸಿಕೊಳ್ಳಿ ಎನ್ನುವದು ಒಂದು ರೀತಿಯ ಧಮ್ಕಿ ಹಾಕಿದಂತಿದೆ ಎಂದು ವ್ಯಾಪಾರಸ್ಥರು ಬಹಿರಂಗವಾಗಿ ಆರೋಪಿಸುತ್ತಿದ್ದಾರೆ. ರ‍್ಯಾಪಿಡ್ ಆ್ಯಂಟಿಜನ್ ಟೆಸ್ಟ್  ವಾಹನ […]

ರಾಜ್ಯ

ಧಾರವಾಡದ ಏಳು ಆಸ್ಪತ್ರೆಗಳ ವೈದ್ಯರ ಸಹಭಾಗಿತ್ವದಲ್ಲಿ 65 ಹಾಸಿಗೆಗಳ ಕೋವಿಡ್ ಆಸ್ಪತ್ರೆ

ಧಾರವಾಡ prajakiran.com : ವಿದ್ಯಾನಗರಿ ಧಾರವಾಡದಲ್ಲಿ ಏಳು ಖಾಸಗಿ ಆಸ್ಪತ್ರೆಗಳ ವೈದ್ಯರು ಸೇರಿ ಜಿಲ್ಲಾ ನ್ಯಾಯಾಲಯದ ಎದುರಿನ ಇರಕಲ್ ಕಟ್ಟಡದ ಶ್ರೇಯಾ ಆಸ್ಪತ್ರೆಯ ಒಂದು ಭಾಗದಲ್ಲಿ ಯುನಿಟಿ ಹಾಸ್ಪಿಟಲ್  ಹೆಸರಿನಲ್ಲಿ  ಪ್ರತ್ಯೇಕವಾಗಿ ಕೋವಿಡ್ ಚಿಕಿತ್ಸೆಗೆ ಮೀಸಲಡಲು 65 ಹಾಸಿಗೆಗಳ ಆಸ್ಪತ್ರೆ ಒದಗಿಸಲು ಮುಂದೆ  ಬಂದಿದ್ದಾರೆ. ಶ್ರೇಯಾ ಆಸ್ಪತ್ರೆಯ ಡಾ. ಸತೀಶ ಇರಕಲ್, ಶ್ರವ್ಯ ಆಸ್ಪತ್ರೆಯ ಡಾ. ಎಸ್.ಆರ್.ಜಂಬಗಿ, ರಾಮನಗೌಡರ ಆಸ್ಪತ್ರೆಯ ಡಾ. ಪ್ರಕಾಶ ರಾಮನಗೌಡರ, ಅಮರಜ್ಯೋತಿ ಆಸ್ಪತ್ರೆಯ ಡಾ. ಜ್ಯೋತಿಪ್ರಕಾಶ ಸುಲ್ತಾನಪುರಿ, ಅಮೃತ ನರ್ಸಿಂಗ್ ಹೋಂ ನ ಡಾ.ಅಮೃತ ಮಹಾಬಲಶೆಟ್ಟಿ, […]

ರಾಜ್ಯ

ಧಾರವಾಡ ಜಿಲ್ಲೆಯಾದ್ಯಂತ ಭಾನುವಾರ ಲಾಕ್ ಡೌನ್ ಮುಂದುವರಿಕೆ

ಧಾರವಾಡ prajakiran.com : ಕರೋನಾ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಈ ಹಿಂದೆ ರಾಜ್ಯ ಸರಕಾರ ಹೊರಡಿಸಿದ್ದ ಭಾನುವಾರದ ಲಾಕ್ ಡೌನ್ ಮುಂದುವರೆಸಿ ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಆದೇಶ ಹೊರಡಿಸಿದ್ದಾರೆ. ಈ ಹಿನ್ನಲೆಯಲ್ಲಿ ಜು. 25ರಿಂದ ಇಂದು ಶನಿವಾರ ರಾತ್ರಿ 9 ಗಂಟೆಯಿಂದಲೇ ಜು. 27 ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ಸೆಕ್ಷನ್ 144 ಕಲಂ ಜಾರಿಗೊಳಿಸಿ ಈ ಕರ್ಫ್ಯೂ ಜಾರಿಯಲ್ಲಿರಲಿದೆ. ಇದರಿಂದಾಗಿ ಭಾನುವಾರ ಜಿಲ್ಲೆಯಾದ್ಯಂತ ಸಂತೆ, ಜಾತ್ರೆ, ಸಮಾವೇಶ, ಮೆರವಣಿಗೆ, ಸಮ್ಮೇಳನ, ಕ್ರೀಡಾಕೂಟ, ಸಮಾರಂಭಗಳನ್ನು ಜರುಗಿಸುವುದನ್ನು ನಿಷೇಧಿಸಲಾಗಿದೆ. […]

ರಾಜ್ಯ

ಧಾರವಾಡದ ಬೇಲೂರು ಕೈಗಾರಿಕಾ ಪ್ರದೇಶದ ಮಾಹಿತಿ ಕೇಳಿದ ಜಿಲ್ಲಾಧಿಕಾರಿ…!

ಧಾರವಾಡ prajakiran.com : ಧಾರವಾಡದ ಟಾಟಾ ಮಾರ್ಕೋಪೋಲೋ ಕಂಪನಿಯಲ್ಲಿ ಮತ್ತೆ ಕೊರೋನ ವೈರಸ್ ಹಾವಳಿ ಹೆಚ್ಚಾಗಿದೆ. ಈವರೆಗೆ ಒಟ್ಟು 30ಕ್ಕೂ ಹೆಚ್ಚುಜನರಿಗೆ ಪಾಸಿಟಿವ್ ಕೇಸ್ ಇರುವುದರ ಬಗ್ಗೆ ಬೇಲೂರು ಕೈಗಾರಿಕಾ ವಲಯ ಕೋವಿಡ್ ಹರಡುವಿಕೆ ಬಗ್ಗೆ ಜಿಲ್ಲಾಧಿಕಾರಿ ಮಾಹಿತಿ ಕೇಳಿದ್ದಾರೆ. ಟಾಟಾ ಮಾರ್ಕೋಪೋಲೋ ಕಂಪೆನಿಯ 30 ಕ್ಕಿಂತ ಹೆಚ್ಚು ನೌಕರರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದರಿಂದ ಕಂಪನಿಯನ್ನು ಸೀಲ್ ಡೌನ್  ಮಾಡಿಲ್ಲ. ಅಷ್ಟೇ ಅಲ್ಲದೇ ಕಾರ್ಮಿಕರಿಗೆ ಅಗತ್ಯ ಆರೋಗ್ಯ ತಪಾಸಣೆ ನಡೆಸಿಲ್ಲ ಎಂಬ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ […]

ರಾಜ್ಯ

ಧಾರವಾಡಕ್ಕೆ ಏಳು ಆ್ಯಂಬುಲೆನ್ಸ್ ಖರೀದಿಸಲು ಆರೋಗ್ಯ ಇಲಾಖೆಗೆ ಡಿಸಿ ಸೂಚನೆ

ಧಾರವಾಡ prajakiran.com : ಜಿಲ್ಲೆಯಲ್ಲಿ ಕೋವಿಡ್-೧೯ ತಪಾಸಣೆಗಳ ಸಂಖ್ಯೆ ಹೆಚ್ಚಳ ಮಾಡಲಾಗಿದೆ. ಸೋಂಕಿತರನ್ನು ತಕ್ಷಣ ನಿಗದಿತ ಆಸ್ಪತ್ರೆಗೆ ದಾಖಲಿಸಲು ಸಾಕಷ್ಟು ಪ್ರಮಾಣದಲ್ಲಿ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿದ್ದು,  ಇನ್ನು ಹೆಚ್ಚುವರಿಯಾಗಿ ಏಳು ಆ್ಯಂಬುಲೆನ್ಸ್ ಖರೀದಿಸಲು ಜಿಲ್ಲಾ ಆರೋಗ್ಯ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದರು. ಕೊರೊನಾ ಸೋಂಕಿತರನ್ನು ಪತ್ತೆ ಹಚ್ಚಿ ಆಸ್ಪತ್ರೆಗೆ ದಾಖಲಿಸಲು ಪ್ರತಿ ತಾಲೂಕಿನಲ್ಲಿ ತಹಶೀಲ್ದಾರ ಹಾಗೂ ಎಡಿಎಲ್‌ಆರ್ ನೇತೃತ್ವದಲ್ಲಿ ವಿವಿಧ ಸಿಬ್ಬಂದಿಗಳ ತಂಡ ರಚಿಸಲಾಗಿದೆ. ಸೀಲ್‌ಡೌನ್ ಪ್ರದೇಶದ ನಿಯಮಗಳ ಪಾಲನೆಗೆ ಪ್ರತಿ […]

ರಾಜ್ಯ

ಧಾರವಾಡದಲ್ಲಿ ಸೋಂಕಿತರ ಸ್ಥಳಾಂತರಕ್ಕೆ ಪ್ರತಿ ಆ್ಯಂಬುಲೆನ್ಸ್ ಗೆ ಪ್ರತ್ಯೇಕ ನೋಡಲ್ ಅಧಿಕಾರಿ

ಧಾರವಾಡ prajakiran.com : ಕೋವಿಡ್ ಸೋಂಕಿತರ ಸ್ಥಳಾಂತರದ ಕಾರ್ಯನಿರ್ವಹಣೆಗೆ ಜಿಲ್ಲೆಯಲ್ಲಿ ಹನ್ನೊಂದು ಆ್ಯಂಬುಲೆನ್ಸ ಗಳನ್ನು ಮೀಸಲಿಡಲಾಗಿದ್ದು, ಪ್ರತಿ ವಾಹನಕ್ಕೆ ಪ್ರತ್ಯೇಕವಾಗಿ ಓರ್ವ ನೋಡಲ್ ಅಧಿಕಾರಿಯನ್ನು ನೇಮಿಸಿ ಕರ್ತವ್ಯ ನಿರ್ವಹಿಸಬೇಕು. ಅಗತ್ಯಬಿದ್ದರೆ ಖಾಸಗಿ ವಾಹನಗಳನ್ನೂ ಕೂಡ ಬಾಡಿಗೆಗೆ ಪಡೆಯಬಹುದು ಎಂದು ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ಹೇಳಿದರು. ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಕಾರ್ಯಪಡೆ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ  ಹೆಚ್ಚುತ್ತಿರುವುದರಿಂದ ಸೋಂಕಿತರ ಸ್ಥಳಾಂತರಕ್ಕೆ ಹೆಚ್ಚು ಒತ್ತು  ನೀಡಬೇಕಾಗಿದೆ. ಅದಕ್ಕಾಗಿ ರಚಿಸಿರುವ ತಂಡದೊಂದಿಗೆ […]

ರಾಜ್ಯ

ಧಾರವಾಡದ ಖಾಸಗಿ ಆಸ್ಪತ್ರೆಗಳಲ್ಲಿ ಶೇ.೫೦ ರಷ್ಟು ಹಾಸಿಗೆ ಕೋವಿಡ್ ಗೆ ಮೀಸಲು

ಧಾರವಾಡ prajakiran.com : ಕೋವಿಡ್-೧೯ ಪ್ರಕರಣಗಳು ದಿನೇದಿನೇ ಹೆಚ್ಚುತ್ತಿರುವುದರಿಂದ ಸರ್ಕಾರಿ ಆಸ್ಪತ್ರೆಗಳು ಹಾಗೂ ಕಿಮ್ಸ್ ಜೊತೆಗೆ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ನೋಂದಣಿಯಾಗಿರುವ ಖಾಸಗಿ ಆಸ್ಪತ್ರೆಗಳೂ ಕೂಡಾ ತಮ್ಮಲ್ಲಿರುವ ಒಟ್ಟು ಹಾಸಿಗೆಗಳ ಸಾಮರ್ಥ್ಯದ ಶೇ.೫೦ ರಷ್ಟು ಕೋವಿಡ್ ಚಿಕಿತ್ಸೆಗೆ ಮೀಸಲಿಡಲು ಒಪ್ಪಿಗೆ ನೀಡಿವೆ.  ಜಿಲ್ಲಾಡಳಿತ ಅಂತಹ ಆಸ್ಪತ್ರೆಗಳಿಗೆ ಅಗತ್ಯ ಸಹಕಾರ ನೀಡಲಿದೆ. ಇಂದಿನಿಂದಲೇ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆ ಪ್ರಾರಂಭವಾಗಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು. ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಖಾಸಗಿ […]

ರಾಜ್ಯ

ಧಾರವಾಡ ಜಿಲ್ಲೆಯ ಮುಂಗಾರು, ಅತೀವೃಷ್ಟಿ ನಿರ್ವಹಣೆಗೆ ಸನ್ನದ್ಧರಾಗಲು ಜಿಲ್ಲಾಧಿಕಾರಿ ಸೂಚನೆ

ಧಾರವಾಡ prajakiran.com : ಜಿಲ್ಲೆಯಲ್ಲಿ ಮುಂಗಾರು ಮಳೆ ಪ್ರಾರಂಭವಾಗಿದ್ದು, ಅತೀವೃಷ್ಟಿ ಸಂಭವಿಸಿದರೆ ಪರಿಸ್ಥಿತಿ ನಿರ್ವಹಿಸಲು ಎಲ್ಲ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಸನ್ನದ್ಧರಾಗಿರಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು. ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಳೆದ ೨೦೧೯ ರ ಆಗಸ್ಟ್ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ಅತಿವೃಷ್ಟಿಯಿಂದ ಉಂಟಾದ ಹಾನಿಯ ಪ್ರಮಾಣ ಮತ್ತು ಪರಿಹಾರ ಕಾರ್ಯಗಳ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು ಮನೆಗಳ ಪುನರ್‌ನಿರ್ಮಾಣ, ನೆರೆ ಬಾಧಿತ […]

ರಾಜ್ಯ

ಧಾರವಾಡದಲ್ಲಿ ೧೭ ಕೋವಿಡ್ ಆಸ್ಪತ್ರೆಗಳಿವೆ ಎಂದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ

ಧಾರವಾಡ prajakiran.com  : ಧಾರವಾಡದಲ್ಲಿ ೧೭ ಕೋವಿಡ್ ಆಸ್ಪತ್ರೆಗಳಿವೆ. ಅದರಲ್ಲಿ ಚಿಕಿತ್ಸೆಗೆ ಬರುವ ರೋಗಿಗಳಿಗೆ ಚಿಕಿತ್ಸೆ ನೀಡಲಾಗುವುದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು. ಅವರು ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ,  ಕಿಮ್ಸ್ ಆಸ್ಪತ್ರೆಗಳಲ್ಲಿ ಸಾಕಷ್ಟು ವೈದ್ಯರು ಹಾಗೂ ಸ್ಟಾಫ್ ನರ್ಸ್ ಗಳು ಇರುವುದರಿಂದ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ನರ್ಸ್ ಗಳ ಕೊರತೆಯಿಲ್ಲ ಎಂದರು. ಜಿಲ್ಲೆಯಲ್ಲಿ ಕೊರೊನಾ ಚಿಕಿತ್ಸೆಗೆ ೬,೩೬೪ ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ಕೇರ್‌ಸೆಂಟರ್‌ಗಳಿಗೆ ಈಗಾಗಲೇ ೫೦೦ ಬೆಡ್‌ಗಳನ್ನು ೫ ಆಯುರ್ವೇದ ಆಸ್ಪತ್ರೆಗಳನ್ನು ಗುರುತಿಸಿದೆ. ಕಿಮ್ಸ್ […]

ರಾಜ್ಯ

ಧಾರವಾಡದ ಎಸ್‌ಡಿಎಂನಲ್ಲಿ ೧೩, ಹುಬ್ಬಳ್ಳಿಯ ಕಿಮ್ಸ ನಲ್ಲಿ ೧೮೮ ಜನರಿಗೆ ಚಿಕಿತ್ಸೆ

ಧಾರವಾಡ prajakiran.com : ಪ್ರಸ್ತುತ ಧಾರವಾಡ ಜಿಲ್ಲೆಯಲ್ಲಿ ಕರೋನಾ ವೈರಸ್ ಚಿಕಿತ್ಸೆಗೆ ಕಿಮ್ಸ ನಲ್ಲಿ ೧೮೮, ಎಸ್‌ಡಿಎಂನಲ್ಲಿ ೧೩, ಕೋವಿಡ್ ಕೇರ್ ಸೆಂಟರ್‌ನಲ್ಲಿ ೧೩೮ ಸೇರಿ ಒಟ್ಟು ೩೩೯ ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ. ಅವರು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರ ನೇತೃತ್ವದಲ್ಲಿ ನಡೆದ ಸಭೆಗೆ  ಈ ಕುರಿತು ಮಾಹಿತಿ ನೀಡಿದ್ದಾರೆ. ಧಾರವಾಡದ ಡಿಮ್ಹಾನ್ಸ್ ಪ್ರಯೋಗಾಲಯದಲ್ಲಿ ೩೧,೮೦೭, ಕಿಮ್ಸ್ ೧೯೫೯೬, ಖಾಸಗಿ ಎನ್‌ಎಂಆರ್ ಪ್ರಯೋಗಾಲಯದಲ್ಲಿ ೬೩ ಜನರನ್ನು ಇದುವರೆಗೆ […]