ರಾಜ್ಯ

ಧಾರವಾಡದ ಶಿರಕೋಳದಲ್ಲಿ ಕರೋನಾಗೆ ಬಲಿ : 13ಕ್ಕೆ ಏರಿಕೆಯಾದ ಜಿಲ್ಲೆಯ ಸಾವಿನ ಸಂಖ್ಯೆ




ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ಕರೋನಾ ವೈರಸ್ ಗೆ  ಮತ್ತೊಂದು ಬಲಿಯಾಗಿದ್ದು, ಆ ಮೂಲಕ ಜಿಲ್ಲೆಯ ಸಾವಿನ ಸಂಖ್ಯೆ ಹದಿಮೂರಕ್ಕೆ ಏರಿಕೆಯಾದಂತಾಗಿದೆ.

ಜಿಲ್ಲೆಯ ನವಲಗುಂದ ತಾಲೂಕಿನ ಶಿರಕೋಳ ಗ್ರಾಮದ ಪಿ. 18713 ಸೋಂಕಿತ 43 ವಯಸ್ಸಿನ  ನಿವಾಸಿ ನಿನ್ನೆ ಸಂಜೆ ಮೃತಪಟ್ಟಿದ್ದಾನೆ.  ಇದರಿಂದಾಗಿ ಶಿರಕೋಳ ಗ್ರಾಮದಲ್ಲಿ ಆತಂಕದ ವಾತವರಣ ನಿರ್ಮಾಣವಾಗಿದೆ.

ಆರಂಭದಲ್ಲಿ ಪಕ್ಕದ ಮೊರಬ ಗ್ರಾಮಕ್ಕೆ ಎಂಟ್ರಿ ಕೊಟ್ಟಿದ್ದ ಕರೋನಾಕ್ಕೆ ಆಗಮಿಸಿತ್ತು. ಆನಂತರ   ಶಿರಕೋಳ ಗ್ರಾಮಕ್ಕೂ ಪಾದಾರ್ಪಣೆ ಮಾಡಿತ್ತು.



ಶಿರಕೋಳ ಗ್ರಾಮದ 120 ಜನ ಇರುವ ಕುಟುಂಬದ ಸದಸ್ಯರ ಪೈಕಿ ಪಿ-12121 ಸೋಂಕಿತ 36 ವರ್ಷದ ಪುರುಷನಿಗೆ ತಗುಲಿತ್ತು.

ಅವನಿಂದ ಅದೇ ಕುಟುಂಬದ ಮೂವರಿಗೆ ವ್ಯಾಪಿಸಿತ್ತು, ಇದೇ  ವ್ಯಕ್ತಿಯ ಜೊತೆಗೆ ಸಂಪರ್ಕ ಹೊಂದಿದ್ದ ಮೃತನು, ಯಾವುದೇ ವೈದ್ಯಕೀಯ ಪ್ರಮಾಣ ಪತ್ರ ಹೊಂದಿರದೆ, ಕಳೆದ ಕೆಲ ವರ್ಷಗಳಿಂದ ವೈದ್ಯಕೀಯ ವೃತ್ತಿಯನ್ನು ಮಾಡುತ್ತಿದ್ದ ಎನ್ನಲಾಗಿದೆ.

ಈ ಅವಿಭಕ್ತ ಕುಟುಂಬದಲ್ಲಿ 120 ಜನ ವಾಸವಿದ್ದರು. ಕುಟುಂಬದ ಸದಸ್ಯ ಪಿ-12121 36 ವರ್ಷದ ಪುರುಷನ ಕುಟುಂಬ ವೈದ್ಯನಾಗಿ ಚಿಕಿತ್ಸೆ ನೀಡುತಿದ್ದ. 



ಇನ್ನೂ ಈ ಸೋಂಕಿತ ವ್ಯಕ್ತಿ ಕೆಲ ದಿನಗಳ ಹಿಂದಷ್ಟೇ ಗ್ರಾಮದಲ್ಲಿ ಚಿಕಿತ್ಸೆ ಸಹ ನೀಡಿದ್ದ ಈತನಿಗೆ ಜ್ವರ ಮತ್ತು ನೆಗಡಿ ಕಾಣಿಸಿಕೊಂಡ ನಂತರ ಇತ ನವಲಗುಂದದಲ್ಲಿ ಖಾಸಗಿ ಆಸ್ಪತ್ರೆಗೆ ಸಹ ದಾಖಲಾಗಿದ್ದ.

ಇದರಿಂದ ಗ್ರಾಮಸ್ಥರು ಗಾಬರಿಗೊಂಡಿದ್ದು, ಶಿರಕೋಳದಲ್ಲಿ ಕರೊನಾ ಪಾಸಿಟಿವ್ ಬಂದ ತಕ್ಷಣವೇ ಗ್ರಾಮಕ್ಕೆ ಕಂದಾಯ ಅಧಿಕಾರಿಗಳು ಹಾಗೂ ಮೊರಬ ಪ್ರಾಥಮಿಕ ಆರೋಗ್ಯ ಕೇಂದ್ರದ ಮೆಡಿಕಲ್ ಅಧಿಕಾರಿ  ಡಾ. ಸ್ಪೂರ್ತಿ, ಕೇಂದ್ರದ ಸುಪರ್ ವೈಸರ್ ಎಸ್‌. ಎನ್.ಗಿಡ್ನನವರ ಹಾಗೂ  ಕ್ಷೇತ್ರ ವೈದ್ಯಕೀಯ ತಂಡದಿಂದ ಶಿರಕೋಳ ಗ್ರಾಮದಲ್ಲಿ ಕೊವೀಢ್ ರೋಗವನ್ನು ತಡೆಯಲು ಶ್ರಮಿಸುತ್ತಿದ್ದಾರೆ.

ಇದರಿಂದಾಗಿ ಶಿರಕೋಳದಲ್ಲಿ ಸ್ಮಶಾನ ಮೌನ ಆವರಿಸಿದ್ದು, ಮತ್ತೇಷ್ಟು ಜನರಿಗೆ ಕರೋನಾ ಹರಡಿದೆಯೋ, ಆತನಿಂದ ತಪಾಸಣೆ ಮಾಡಿಸಿಕೊಂಡವರಿಗೆ ಇದೀಗ ಢವ ಢವ ಶುರುವಾಗಿದೆ.



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *