ರಾಜ್ಯ

ಮಾಜಿ ಸಚಿವ ವಿನಯ ಕುಲಕರ್ಣಿ ಬಿಜೆಪಿ ಸೇರ್ಪಡೆ : ಯಾರನ್ನು ಸಂಪರ್ಕಿಸಿಲ್ಲ ಎಂದ ಕೇಂದ್ರ ಸಚಿವ

ಧಾರವಾಡ prajakiran.com : ಮಾಜಿ ಸಚಿವ ವಿನಯ ಕುಲಕರ್ಣಿ ಬಿಜೆಪಿ ಸೇರ್ಪಡೆ ಕುರಿತು ಪ್ರತಿಕ್ರಿಯೆ ನೀಡಿದ ಅವರು ಜಿಲ್ಲಾಧ್ಯಕ್ಷರಿಂದ ಹಿಡಿದು ರಾಜ್ಯಅಧ್ಯಕ್ಷರವರೆಗೆ, ಅಲ್ಲದೆ ರಾಷ್ಟ್ರೀಯಅಧ್ಯಕ್ಷರವರೆಗೆ ಅವರು ಯಾರನ್ನು ಸಂಪರ್ಕಿಸಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸ್ಪಷ್ಟಪಡಿಸಿದರು.

ಅವರು ಭಾನುವಾರ ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಯಾರು ಯಾರಿಗೆ ಸಂಪರ್ಕಿಸಿದ್ದಾರೆ ಎಂಬುದು ನಮಗೆ ಗೋತ್ತಿಲ್ಲ.

ಈ ಬಗ್ಗೆ ಪಕ್ಷದಲ್ಲಿ ಯಾವುದೇ ಚರ್ಚೆ ಆಗಲಿ ಪ್ರಸ್ತಾಪ ಕೂಡ ಆಗಲಿ ಇಲ್ಲ. ಹೀಗಾಗಿ ನಾನು ಊಹಾಪೋಹ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಲ್ಲ  ಎಂದರು.

ಮಹದಾಯಿ ಯೋಜನೆ ಕುರಿತು ದಿನೇಶ ಗುಂಡೂರಾವ್ ಹೇಳಿಕೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿರುಗೇಟು ನೀಡಿದ್ದಾರೆ.

 ಈ ಹಿಂದೆಸೋನಿಯಾ ಗಾಂಧಿಯೂ ಒಂದು ಹನಿ ನೀರನ್ನ ಸಹ ನಾವು ಬಿಟ್ಟು ಕೊಡಲ್ಲ ಎಂದು ಗೋವಾದಲ್ಲಿಯೇ ಭಾಷಣ ಮಾಡಿದ್ದರು ಎಂದು ಕುಟುಕಿದರು.

ಈಗಲೂ ಅದನ್ನೇ ಅವರ ನಾಯಕರು ಮುಂದುವರೆಸಿದ್ದಾರೆ. ಕಾಂಗ್ರೆಸ್ ಬೆಳಗ್ಗೆ ಒಂದು ರಾತ್ರಿ ಒಂದು ಉಸರವಳ್ಳಿ ತರಹ ಕಾಂಗ್ರೆಸ್ ನವರದು ಬಣ್ಣ ಬದಲಾಯಿಸೋ ಗುಣ ಇದೆ ಎಂದು ಛೇಡಿಸಿದರು.

ಸರದಾರ್ ವಲ್ಲಭಬಾಯಿ ಪಟೇಲ್ ಅವರ ಬಗ್ಗೆ ಕಾಂಗ್ರೆಸ್ಗೆ ಬಿಜೆಪಿಯವರು ಏಕತಾ ಪ್ರತಿಮೆ ಸ್ಥಾಪಿಸಿದ ಬಳಿಕ ಈಗ ನೆನಪಾಗಿದೆ.

ಮಹಾತ್ಮಾ ಗಾಂಧಿ ಆಗಲೇ ಕಾಂಗ್ರೆಸ್ ವಿಸರ್ಜನೆ ಮಾಡಲು ಹೇಳಿದ್ದರು. ಆದರೂ ಅದನ್ನು ಮುಂದುವರೆಸಿ ನೆಹರು, ಇಂದಿರಾ, ರಾಜೀವ್ ಸಂಜೀವ ಗಾಂಧಿ, ಸೋನಿಯಾ ಗಾಂಧಿ ರಾಹುಲ್ ಗಾಂಧಿ ಅವರಿಗೆ ಸೀಮಿತವಾಗಿ ಬಿಟ್ಟಿದೆ.

ಇವರಿಗೆ ಅವರು ಬಿಟ್ಟರೆ ಬೇರೆ ಯಾರೂ ನೆನಪಿರಲಿಲ್ಲ. ಹೀಗಾಗಿ ಇದು ಒರಿಜಿನಲ್ ಕಾಂಗ್ರೆಸ್ ಅಲ್ಲ ಎಂದು ವ್ಯಂಗ್ಯ ವಾಡಿದರು.

ಏಕತೆಗಾಗಿ ಹೋರಾಡಿದ ಮಹಾತ್ಮನನ್ನ ಕಾಂಗ್ರೆಸ್ ನವರು ಒಪ್ಪಿಕೊಂಡಿಲ್ಲ. ಅವರು ವಲ್ಲಭಾಯಿ ಪಟೇಲ್ ರನ್ನ ನೆನೆಪಿಸಿಕೊಳ್ಳುತ್ತಿಲ್ಲ.

ಈಗ ನಿಮಗೆ ವಲ್ಲಭಭಾಯಿ ಪಟೇಲ್ ಬಗ್ಗೆ ಮಾತನಾಡುವ ಹಕ್ಕು ಇಲ್ಲ. ನೀವೆಲ್ಲಾ ನಾಲಾಯಕ್ ಕಾಂಗ್ರೆಸ್ ನವರು ಎಂದು ಜೋಶಿ ಆಕ್ರೋಶ ವ್ಯಕ್ತಪಡಿಸಿದರು.

 

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *