ರಾಜ್ಯ

ಧಾರವಾಡ ಜಿಲ್ಲೆಯಲ್ಲಿ ಮತ್ತೇ ಐವರಿಗೆ ವಕ್ಕರಿಸಿದ ಕರೋನಾ, 10 ಜನ ಬಿಡುಗಡೆ    

follow/like: facebook.com/prajakirannews

ಧಾರವಾಡ : ಧಾರವಾಡ ಜಿಲ್ಲೆಯಲ್ಲಿ ಶನಿವಾರ ಸಂಜೆ ಮತ್ತೆ ಹೊಸದಾಗಿ 5 ಜನರಿಗೆ ಕೋವಿಡ್ ಪಾಸಿಟಿವ್ ಇರುವುದು ದೃಢವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಲ್ತ್ ಬುಲೇಟಿನ್ ತಿಳಿಸಿದೆ.

ಡಿಡಬ್ಲ್ಯೂಡಿ 179-ಪಿ-8286ನ ಸೋಂಕಿತ 52  ವರ್ಷದ ಪುರುಷನಿಗೆ ಕರೋನಾ ಸೋಂಕು  ಬಂದಿದೆ. ಆತ ಕೆಮ್ಮು, ನೆಗಡಿ ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದ. 

ಡಿಡಬ್ಲ್ಯೂಡಿ 180-ಪಿ-8287 ಸೋಂಕಿತ 65 ವರ್ಷದ ವೃದ್ದೆ ಕೂಡ  ಕರೋನಾ ವೈರಸ್ ವಕ್ಕರಿಸಿದೆ. ಆದರೆ ಇವಳಿಗೆ ಕರೋನಾ ಸೋಂಕು ಹೇಗೆ ತಗುಲಿದೆ ಎಂಬುದು ತಿಳಿದಿಲ್ಲ. ಹೀಗಾಗಿಅವರ ಕರೋನಾ ಸಂಪರ್ಕ   ಪತ್ತೆ ಹಚ್ಚಲಾಗುತ್ತಿದೆ



 ಡಿಡಬ್ಲ್ಯೂಡಿ 181-ಪಿ-8288 ಸೋಂಕಿತ 43 ವರ್ಷದ ಪುರುಷನಿಗೆ ಕರೋನಾ ಸೋಂಕು ಹರಡಿದೆ. ಇವರು

ಕೆಮ್ಮು, ನೆಗಡಿ ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರಿಂದ ಆಸ್ಪತ್ರೆಗೆ ದಾಖಲಾದ ನಂತರ ಕರೋನಾ ಇರುವುದು ಪತ್ತೆಯಾಗಿದೆ.   

ಡಿಡಬ್ಲ್ಯೂಡಿ 182-ಪಿ-8289 ಸೋಂಕಿತ 48 ವರ್ಷದ ಪುರುಷನಿಗೆ ಕರೋನಾ ಸೋಂಕು ಹರಡಿದೆ.  ಇವರಿಗೆ ಪಿ-7039 ನ ಸೋಂಕಿತನ ಸಂಪರ್ಕದಿಂದ ಕರೋನಾ ಹರಡಿದೆ.  

ಡಿಡಬ್ಲ್ಯೂಡಿ 183-ಪಿ-8290 ಸೋಂಕಿತ 40 ವರ್ಷದ ಮಹಿಳೆಗೆ ಕರೋನಾ ಸೋಂಕು ಹರಡಿದೆ.  ಇವರಿಗೆ ಪಿ-7039 ನ ಸೋಂಕಿತನ ಸಂಪರ್ಕದಿಂದ ಕರೋನಾ ಹರಡಿದೆ ಎಂದು ಆರೋಗ್ಯ ಇಲಾಖೆ ವಿವರಿಸಿದೆ.  




  

ಶನಿವಾರ ಕರೋನಾದಿಂದ ಹತ್ತು ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಪಿ- 5007,  ಹಾಗೂ ಪಿ-5969, ಪಿ-5971, ಪಿ-6253, ಪಿ-6261, ಪಿ-6263,  ಪಿ-6264, ಪಿ-6265,  ಪಿ-6266,  ಪಿ-6269   ಸೋಂಕಿತರು ಚೇತರಿಕೆ ಕಂಡಿದ್ದು ಮನೆಯತ್ತ ಹೆಜ್ಜೆ ಹಾಕಿದ್ದಾರೆ.

 ಈವರೆಗೆ ಧಾರವಾಡ ಜಿಲ್ಲೆಯ ಮೂವರು ಕರೋನಾ ಸೋಂಕಿತರು ಸಾವನ್ನಪ್ಪಿದ್ದು, ಇನ್ನೂ ಐದು ಸೋಂಕಿತರು ಐಸಿಯುನಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಆ ಮೂಲಕ ಧಾರವಾಡ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ  183 ಕ್ಕೆ ಏರಿಕೆಯಾಗಿದೆ. ಈ ಪೈಕಿ ಈಗಾಗಲೇ  66 ಜನ ಗುಣಮುಖರಾಗಿ ಆಸ್ಪತ್ರೆಯಿಂದ  ಬಿಡುಗಡೆಯಾಗಿದ್ದಾರೆ. ಉಳಿದವರು  ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವಿವರಿಸಿದೆ.



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *