ರಾಜ್ಯ

ಧಾರವಾಡ ಜಿಲ್ಲೆಯ ಕರೋನಾ ಸೋಂಕಿತರ ಸಂಖ್ಯೆ 175ಕ್ಕೆ ಏರಿಕೆ 

ಧಾರವಾಡ Prajakiran.com : ಜಿಲ್ಲೆಯಲ್ಲಿ  ಗುರುವಾರ ಮತ್ತೆ ಹೊಸದಾಗಿ 4  ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ  ಎಂದು ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್ ತಿಳಿಸಿದ್ದಾರೆ.

DWD 172 –  ಪಿ-  7824  (56  ವರ್ಷದ ಪುರುಷ) , ಇವರು ಹುಬ್ಬಳ್ಳಿ ಮಂಟೂರ ರಸ್ತೆಯ ಗುಂಜಾಳ ಪ್ಲಾಟ್ ನಿವಾಸಿ. ಇವರು ಕೆಮ್ಮು ,ನೆಗಡಿ ಹಾಗೂ ತೀವ್ರ ಜ್ವರದಿಂದ( ಐಎಲ್ಐ)  ಬಳಲುತ್ತಿದ್ದರು. 

DWD 173 –  ಪಿ-  7825 (5 ವರ್ಷದ ಗಂಡುಮಗು ) , ಇವರು ಹುಬ್ಬಳ್ಳಿ ನಗರದ ಪಿ.ಬಿ. ರಸ್ತೆಯ ಹೊಸ ಗಬ್ಬೂರ  ನಿವಾಸಿ. ಕೆಮ್ಮು ,ನೆಗಡಿ ಹಾಗೂ ತೀವ್ರ ಜ್ವರದಿಂದ( ಐಎಲ್ಐ)  ಬಳಲುತ್ತಿದ್ದರು. 

DWD – 174   ಪಿ- 7826  ( 28  ವರ್ಷದ ,ಪುರುಷ )ಹಳೆಹುಬ್ಬಳ್ಳಿ ಸದರಸೋಫಾ ಕೊಡಿಗೇರ ಪ್ಲಾಟ್ ನಿವಾಸಿಯಾಗಿದ್ದು, ಗುಜರಾತ್ ನಿಂದ ಹಿಂದಿರುಗಿದ್ದಾರೆ.



DWD 175 –  ಪಿ-  7827 (30   ವರ್ಷದ ಪುರುಷ ) , ಇವರು ಹುಬ್ಬಳ್ಳಿ ನಗರದ ಗೋಕುಲ ರಸ್ತೆಯ ,ಅಕ್ಷಯ ಪಾರ್ಕ್ ನಿವಾಸಿ. ಕೆಮ್ಮು ,ನೆಗಡಿ ಹಾಗೂ ತೀವ್ರ ಜ್ವರದಿಂದ( ಐಎಲ್ಐ)  ಬಳಲುತ್ತಿದ್ದರು ಎಂದು ವಿವರಿಸಿದ್ದಾರೆ.

ಇಬ್ಬರು ಗುಣಮುಖ : 

ಕೋವಿಡ್ ನಿಂದ ಗುಣಮುಖರಾಗಿರುವ ಎರಡು ವರ್ಷದ ಬಾಲಕಿ ಪಿ-5007 ಹಾಗೂ 26 ವರ್ಷದ ಮಹಿಳೆ ಪಿ-5971 ಕಿಮ್ಸ್ ನಿಂದ ಬಿಡುಗಡೆಯಾಗಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 175 ಕ್ಕೆ ಏರಿಕೆಯಾಗಿದೆ. ಈಗಾಗಲೇ  54 ಜನ ಗುಣಮುಖರಾಗಿ ಆಸ್ಪತ್ರೆಯಿಂದ  ಬಿಡುಗಡೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *