ಅಪರಾಧ

ಕೊಡಗು : ಗಾಂಜಾ ಮಾರಾಟ ಮಾಡುತ್ತಿದ್ದ 6 ಮಂದಿ ಅರೆಸ್ಟ್

ಕೊಡಗು prajakiran.com : ಚೆಟ್ಟಳ್ಳಿ ಬಳಿಯ ಪ್ರೌಢಶಾಲಾ ಮೈದಾನ ಪಕ್ಕದ ಸಾವ೯ಜನಿಕ ರಸ್ತೆ ಬದಿಯಲ್ಲಿ ಅಕ್ರಮವಾಗಿ ಗಾಂಜಾವನ್ನು ಮಾರಾಟ ಮಾಡುತ್ತಿದ್ದ  ಸಂದಭ೯ದಲ್ಲಿ ಕೊಡಗು ಪೊಲೀಸ್ ಅಪರಾಧ ಪತ್ತೆ ದಳ ದಾಳಿ ನಡೆಸಿ ಗಾಂಜಾ ಗ್ಯಾಂಗನ ಆರು ಜನರನ್ನು ಪತ್ತೆ  ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಈ ತಂಡ ಕಳೆದ ಹಲವು ದಿನಗಳಿಂದ ಈ ದಂಧೆಯನ್ನು ರಾಜಾರೋಷವಾಗಿ ನಡೆಸುತ್ತಿತ್ತು ಎಂದು ತಿಳಿದುಬಂದಿದೆ. ಅವರನ್ನು ಬಂಧಿಸಿ, ಹೆಡೆ ಮುರಿಕಟ್ಟಿದ್ದಾರೆ.

ಬಂಧಿತರನ್ನು ಮೈಸೂರಿನ ಆನಂದ,ವಿರಾಜಪೇಟೆಯ ಮೊಗರಗಲ್ಲಿ ನಿವಾಸಿ ಖಲೀಲ್, ವಾಲ್ನೂರು ತ್ಯಾಗತ್ತೂರಿನ ಕೆ.ಎಸ್.ಫರೀದ್, ಚೇರಳ ಶ್ರೀಮಂಗಲದ ಕೆ.ಎನ್.ಅರುಣ್ ಕುಮಾರ್,ಅಭ್ಯತ ಮಂಗಲದ ಎಚ್.ಎನ್.ನಿಖಿಲ್, ಎಚ್.ಎನ್.ಹರೀಶ್ ಎಂದು ಪೊಲೀಸರು ತಿಳಿಸಿದ್ದಾರೆ.



ಬಂಧಿತರಿಂದ 1.50 ಲಕ್ಷ ರುಪಾಯಿ ಮೌಲ್ಯದ 5 ಕೆ.ಜಿ.ಗಾಂಜಾ, 5 ಸಾವಿರ ನಗದು ಮತ್ತು 1 ಕಾರ್, ಆಟೋರಿಕ್ಷಾ,ಬೈಕ್ ವಶಕ್ಕೆ ಪಡೆಯಲಾಗಿದೆ.

ಕಳೆದ ಒಂದು ತಿಂಗಳಿನಲ್ಲಿ ಇದು ಮೂರನೇ ದಾಳಿಯಾಗಿದ್ದು,ಪೋಲಿಸರ ಈ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಕೊಡಗು ಪೊಲೀಸ್ ವರಿಷ್ಟಾಧಿಕಾರಿ ಡಾ.ಸುಮನ್ ಪನ್ನೇಕರ್ ಮಾಗ೯ದಶ೯ನದಲ್ಲಿ  ಗ್ರಾಮಾಂತರ ಪೊಲೀಸ್  ವೖತ್ತ ನಿರೀಕ್ಷಕ ದಿವಾಕರ್, ಉಪನಿರೀಕ್ಷಕ ಎಚ್.ವಿ.ಚಂದ್ರಶೇಖರ್, ಸದಾಶಿವ, ಜಿಲ್ಲಾ ಅಪರಾಧ ಪತ್ತೆದಳದ ನಿರೀಕ್ಷಕ ಕುಮಾರ್ ಆರಾಧ್ಯ, ಸಿಬ್ಬಂದಿಗಳಿಂದ ಗಾಂಜಾ ಮಾರಾಟ ದಂಧೆಕೋರರ ಬಂಧನದಲ್ಲಿ ಪಾಲ್ಗೊಂಡಿದ್ದರು.



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *