ರಾಜ್ಯ

ಧಾರವಾಡ ಜಿಲ್ಲೆಯಲ್ಲಿ ಮಂಗಳವಾರ ಮತ್ತೇ 57 ಜನರಿಗೆ ಕರೋನಾ




ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ಮಂಗಳವಾರ ಸಂಜೆ ಮತ್ತೆ ಹೊಸದಾಗಿ 57 ಜನರಿಗೆ ಕೋವಿಡ್ ಪಾಸಿಟಿವ್ ಇರುವುದು ದೃಢವಾಗಿದ್ದು, ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 668 ಕ್ಕೆ ಏರಿಕೆಯಾದಂತಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಲ್ತ್ ಬುಲೇಟಿನ್ ತಿಳಿಸಿದೆ.

ಧಾರವಾಡ ಜಿಲ್ಲೆಯಲ್ಲಿ ಮಂಗಳವಾರ  15 ಜನ ಸೋಂಕಿತರು ಕೋವಿಡ್ ನಿಯೋಜಿತ ಆಸ್ಪತ್ರೆಗಳ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಧಾರವಾಡ ಜಿಲ್ಲೆಯಲ್ಲಿ ಜೂನ್ 5ರಂದು 18 ಜನರಿಗೆ ಹೇಗೆ ಕರೋನಾ ಬಂತು ಎಂಬ ಮಾಹಿತಿ ಇರದಿದ್ದರೆ ಜೂನ್ 6ರಂದು 11 ಜನರ ಕರೋನಾ ಸಂಪರ್ಕ  ಪತ್ತೆಯಾಗದಿದ್ದರೆ ಜೂನ್ 7ರಂದು 16 ಜನರಿಗೆ ಕರೋನಾ ಹೇಗೆ ಹರಡಿದೆ ಎಂಬುದರ ಸಂಪರ್ಕ ಪತ್ತೆಯಾಗದಿರುವುದು ಆರೋಗ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.



 (ಐಎಲ್ ಐ) ತೀವ್ರ ಜ್ವರ, ನೆಗಡಿ, ಕೆಮ್ಮಿನಿಂದ ಬಳಲುತ್ತಿದ್ದ ಜೂನ್ 6ರಂದು 24 ಜನರು ಬಳಲುತ್ತಿದ್ದರು. ಮತ್ತೇ ಜೂನ್ 7ರಂದು ಕೂಡ ಜಿಲ್ಲೆಯ ವಿವಿಧ  ನಿಯೋಜಿತ ಕೋವಿಡ್ ಆಸ್ಪತ್ರೆಗಳಲ್ಲಿ 24ಜನರ    ಗಂಟಲು ದ್ರವ ತಪಾಸಣೆ ನಡೆಸಿದಾಗ  ಕರೋನಾ ಪಾಸಿಟಿವ್  ಇರುವುದು ದೃಢಪಟ್ಟಿದೆ. 

ಅಂತರ್ ರಾಜ್ಯ ಪ್ರಯಾಣ ಮಾಡಿದ ಒಬ್ಬರಿಗೆ ಹಾಗೂ ಅಂತರ್ ಜಿಲ್ಲೆಯ ಪ್ರಯಾಣ  ಮಾಡಿದ ಒಬ್ಬರಿಗೆ ಕರೋನಾ ಪಾಸಿಟಿವ್ ಬಂದಿದೆ.

ಕರೋನಾ ಸೋಂಕಿತರ ಸಂಪರ್ಕದಿಂದ ಜೂನ್ 5ರಂದು 18 ಜನರಿಗೆ ಹರಡಿತ್ತು. ಜೂನ್ 6ರಂದು ಕೂಡ ಮತ್ತೆ 18 ಜನರಿಗೆ ಕರೋನಾ ವಕ್ಕರಿಸಿತ್ತು. ಮತ್ತೇ ಜೂನ್ 7ರಂದು 12 ಜನರಿಗೆ ಕರೋನಾ ಹರಡಿದೆ ಎಂದು ಆರೋಗ್ಯ ಇಲಾಖೆ ವಿವರಿಸಿದೆ.



ಜಿಲ್ಲೆಯಲ್ಲಿ ಜೂನ್ 6ರಂದು ಒಬ್ಬರಿಗೆ ಸಾರಿ ಕೇಸ್ ಪತ್ತೆಯಾಗಿದ್ದರೆ, ಜೂನ್ 7ರಂದು 3 ಕೇಸ್ ದೃಢಪಟ್ಟಿವೆ. ಮಂಗಳವಾರ ಒಬ್ಬರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

ಪಿ-18713 ಸೋಂಕಿತ 34 ವರ್ಷದ ಯುವಕ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ. ಈತ ನೆಗಡಿ, ಕೆಮ್ಮು, ಜ್ವರ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ. ಜುಲೈ 1ರಂದು ಆಸ್ಪತ್ರೆಗೆ ದಾಖಲಾಗಿದ್ದು. ಜುಲೈ 6ರಂದು ಮೃತಪಟ್ಟಿದ್ದಾನೆ.

ಆ ಮೂಲಕ ಧಾರವಾಡ ಜಿಲ್ಲೆಯಲ್ಲಿ ಈವರೆಗೆ 260 ಜನ ಬಿಡುಗಡೆಗೊಂಡಿದ್ದಾರೆ. ಆ ಮೂಲಕ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ  668ಕ್ಕೆ ಏರಿಕೆಯಾದಂತಾಗಿದೆ. ಈವರೆಗೆ ಧಾರವಾಡ ಜಿಲ್ಲೆಯಲ್ಲಿ ಚಿಕಿತ್ಸೆ ಫಲಿಸದೆ ಒಟ್ಟು 13 ಜನ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.  



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *