ರಾಜ್ಯ

ಧಾರವಾಡದಲ್ಲಿ 1, ಹುಬ್ಬಳ್ಳಿ, ಮೊರಬದಲ್ಲಿ ತಲಾ 2 ಕೋವಿಡ್ ಪಾಸಿಟಿವ್  

ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ಕರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಶನಿವಾರ ಮತ್ತೆ ಹೊಸದಾಗಿ 5 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ  ಎಂದು ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್ ತಿಳಿಸಿದ್ದಾರೆ.

DWD 179  –  ಪಿ- 8286   (52 ವರ್ಷದ ಪುರುಷ) , ಇವರು ಧಾರವಾಡ ಸಂಗಮ್ ಟಾಕೀಸ್ ಹತ್ತಿರ ಕೆಂಪಗೇರಿ ಓಣಿಯ ನಿವಾಸಿಯಾಗಿದ್ದಾರೆ.  ನೆಗಡಿ,ಕೆಮ್ಮು ಹಾಗೂ ತೀವ್ರ ಜ್ವರದಿಂದ ( ಐಎಲ್ಐ) ಬಳಲುತ್ತಿದ್ದರು.




DWD 180 –  ಪಿ- 8287  (65  ವರ್ಷದ ಮಹಿಳೆ ) , ಇವರು ಹುಬ್ಬಳ್ಳಿ ತಾಲೂಕು ರಾಯನಾಳದ ಬಸಮ್ಮ ಕಾಲನಿ    ನಿವಾಸಿಯಾಗಿದ್ದಾರೆ. ಇವರಿಗೆ ವಕ್ಕರಿಸಿದ ಕರೋನಾ  ಸಂಪರ್ಕ ಪತ್ತೆ ಮಾಡಲಾಗುತ್ತಿದೆ.

DWD – 181   ಪಿ- 8288 ( 43 ವರ್ಷದ ಪುರುಷ) ಹುಬ್ಬಳ್ಳಿ ರಾಮಲಿಂಗೇಶ್ವರ ನಗರದ ನಿವಾಸಿ.  ನೆಗಡಿ,ಕೆಮ್ಮು ಹಾಗೂ ತೀವ್ರ ಜ್ವರದಿಂದ ( ಐಎಲ್ಐ) ಬಳಲುತ್ತಿದ್ದರು .

DWD 182-ಪಿ-8289 (48 ವರ್ಷ, ಪುರುಷ) ,DWD 183- ಪಿ-8290(40 ವರ್ಷ ,ಮಹಿಳೆ) ಇವರಿಬ್ಬರೂ ನವಲಗುಂದ ತಾಲ್ಲೂಕು ಮೊರಬ ಗ್ರಾಮದ ನಿವಾಸಿಗಳು.ಪಿ-7039 ಅವರೊಂದಿಗೆ ಸಂಪರ್ಕ ಹೊಂದಿದ್ದರು.

ಆ ಮೂಲಕ ಧಾರವಾಡ ಜಿಲ್ಲೆಯಲ್ಲಿ ಕರೋನಾ ದ್ವಿಶತಕದತ್ತ ಹೆಜ್ಜೆ ಹಾಕುತ್ತಿರುವುದು ಮೇಲ್ನೊಟಕ್ಕೆ ಸ್ಪಷ್ಟವಾಗಿ ಕಾಣುತ್ತಿದೆ.

 


6 ಜನ ಗುಣಮುಖ , ಆಸ್ಪತ್ರೆಯಿಂದ ಬಿಡುಗಡೆ :

ಕೋವಿಡ್ ನಿಂದ  ಸಂಪೂರ್ಣ ಗುಣಮುಖರಾಗಿರುವ ಪಿ-6253 ( 37 , ಪುರುಷ) , ಪಿ-6263(46 ,ಪುರುಷ) , ಪಿ-6264( 33, ಮಹಿಳೆ), ಪಿ-6265( 12 , ಬಾಲಕಿ) ,ಪಿ-6264 (33, ಮಹಿಳೆ) ಹಾಗೂ ಪಿ-6269( 28 ,ಪುರುಷ) ಈ ಆರು ಜನರನ್ನು ನಿನ್ನೆ ಜೂನ್ 19 ರ ಸಂಜೆ ಕಿಮ್ಸ್ ನಿಂದ ಬಿಡುಗಡೆ ಮಾಡಲಾಗಿದೆ.

ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 183  ಕ್ಕೇರಿದೆ. ಈ ಪೈಕಿ ಈಗಾಗಲೇ 62 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಅವರು ವಿವರಿಸಿದ್ದಾರೆ.

.



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *