ಸಿನಿಮಾ

ಧಾರವಾಡದ ವಿನಯ ಡೇರಿಯಲ್ಲಿ ನಟ ದರ್ಶನ ಚಕ್ಕಡಿ ಬಂಡಿ ಓಟ…!

ಧಾರವಾಡ prajakiran.com : ಮಾಜಿ‌ ಸಚಿವ ವಿನಯ ಕುಲಕರ್ಣಿ ಅವರ ವಿನಯ ಡೈರಿಗೆ ಶುಕ್ರವಾರ ಚಾಲೆಂಜಿಂಗ್ ಸ್ಟಾರ್ ದರ್ಶನ ಭೇಟಿ ನೀಡಿ ಕೆಲ ಕಾಲ ಆನಂದವಾಗಿ ಕಳೆದಿದ್ದಾರೆ.

ಜಾನುವಾರಗಳ ಮೇಲೆ  ವಿಶೇಷ ಪ್ರೀತಿ, ಗೌರವ, ಕಾಳಜಿ ಹೊಂದಿರುವ ಸ್ಯಾಂಡಲ್ ವುಡ್ ಚಿತ್ರನಟ ದರ್ಶನ ಧಾರವಾಡದ ಹೊರವಲಯದಲ್ಲಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಡೈರಿಗೆ ಆಗಮಿಸಿದ್ದಾರೆ.

ಡೈರಿಯಲ್ಲಿ ಸುತ್ತಾಡಿ ಜಾನುವಾರುಗಳನ್ನು ಕಂಡು ಅವುಗಳೊಂದಿಗೆ  ಕೆಲ ಕಾಲ ಕಳೆದ್ದದ್ದು ಅಲ್ಲದೆ, ನಟ ದರ್ಶನ ಚಕ್ಕಡಿ‌  ಬಂಡಿ ಓಡಿಸಿಖುಷಿ ಪಟ್ಟಿದ್ದಾರೆ.

ಅವರಿಗೆ ಮಾಜಿ ಸಚಿವ ವಿನಯ ಕುಲಕರ್ಣಿ ಹಾಗೂ ಅವರ ಬೆಂಬಲಿಗರು ಕೂಡ ಸಾಥ್ ನೀಡಿ, ಸೆಲ್ಫೀ ತೆಗೆದುಕೊಂಡು ಸಂಭ್ರಮಿಸಿದರು.

ವಿನಯ ಡೇರಿಯ ತೋಟದಲ್ಲಿ ದರ್ಶನ ಚಕ್ಕಡಿ ರೈಡಿಂಗ್ ಮಾಡಿದ್ದು, ಚಕ್ಕಡಿಏರಿ ಅಲ್ಲಿಯೇ ದರ್ಶನ ಖುಷಿ ಪಟ್ಟಿದ್ದಾರೆ. ದರ್ಶನ ಅಲ್ಲಿಯೇ ಕೆಲವೊತ್ತು ಸಮಯ ಕಳೆಯಲಿದ್ದಾರೆ ಎಂದು ತಿಳಿದುಬಂದಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *