ಸಿನಿಮಾ

ಗಾನಗಂಧರ್ವ ಎಸ್ ಪಿ ಬಾಲಸುಬ್ರಮಣ್ಯ ಇನ್ನು ನೆನಪು ಮಾತ್ರ

ಚೈನ್ನೈ  prajakiran.com : ಹಿರಿಯ ಬಹುಭಾಷಾ ನಟ, ನಿರ್ಮಾಪಕ, ಖ್ಯಾತ ಹಿನ್ನಲೆ ಗಾಯಕ ಗಾನಗಂಧರ್ವ ಎಸ್ ಪಿ ಬಾಲಸುಬ್ರಮಣ್ಯ (74) ಅವರು ಸೆ. 25ರಂದು ಶುಕ್ರವಾರ ಮಧ್ಯಾಹ್ನ 1 ಗಂಟೆ ನಾಲ್ಕು ನಿಮಿಷಕ್ಕೆ ವಿಧಿವಶರಾದರು.

10ಕ್ಕೂ ಹೆಚ್ಚು ಭಾಷೆಗಳಲ್ಲಿ 40 ಸಾವಿರಕ್ಕೂ ಅಧಿಕ ಹಾಡು ಹಾಡಿರುವ ಎಸ್ ಪಿ ಬಿ ನಟನೆ, ನಿರ್ಮಾಣ, ಸಂಯೋಜನೆಯಲ್ಲಿ ಪಳಗಿದ್ದರು. ಹಿಂದಿಯಲ್ಲಿ ಒಂದೇ ದಿನ 16 ಚಿತ್ರಗಳಿಗೆ ಹಾಡು ಹಾಡುವ ಮೂಲಕ ದಾಖಲೆ ಬರೆದಿದ್ದರು.

ಅವರು ಕಳೆದ ಆ. 5ರಂದು ಚೈನ್ನೈ ನ ಎಂಜಿಎಂ ಆಸ್ಪತ್ರೆಗೆ ದಾಖಲಾಗಿದ್ದರು. 52 ದಿನಗಳ ಹೋರಾಟವನ್ನು ಕೊನೆಗೊಳಿಸಿದ್ದಾರೆ. ಅವರಿಗೆ ಸೆ. 4ರಂದು ಕರೋನಾ ನೆಗೆಟಿವ್ ಬಂದಿದೆ ಎಂದು ಎಂಜಿಎಂ ಆಸ್ಪತ್ರೆ ಹೆಲ್ತ್ ಬುಲೇಟಿನ್ ತಿಳಿಸಿದೆ.

ಅವರ ಅಗಲಿಕೆ ಕನ್ನಡ ಸಿನಿಮಾ ರಂಗ ಸೇರಿದಂತೆ ವಿವಿಧ ಭಾಷೆಗಳಿಗೆ ತುಂಬಲಾರದ ನಷ್ಟವಾಗಿದ್ದು, ರಾಜ್ಯ ಹಾಗೂ ರಾಷ್ಟ್ರದ ಸಿನಿಮಾ ದಿಗ್ಗಜರು, ಗಣ್ಯರು ಕಂಬನಿ ಮಿಡಿದಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *