ರಾಜ್ಯ

ರಾಜ್ಯದ ಬಿಜೆಪಿ ಸರ್ಕಾರ 33 ಪರ್ಸೆಂಟೇಜ್ ಸರ್ಕಾರ ಎಂದ ಹೊರಟ್ಟಿ

ಧಾರವಾಡ prajakiran.com : ಭೂ ಸುಧಾರಣೆ ಕಾಯ್ದೆ ತಿದ್ದುಪಡಿ, ರಾಜ್ಯದ ಬಿಜೆಪಿ ಸರಕಾರದ ಆಡಳಿತ ವೈಫಲ್ಯ ವಿರೋಧಿಸಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಜಿಲ್ಲೆಯ ಜೆಡಿಎಸ್ ಮುಖಂಡರು ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು. ಈ ವೇಳೆ ಮಾತನಾಡಿದ ಮಾಜಿ ಸಚಿವ ಬಸವರಾಜ ಹೊರಟ್ಟಿ, ಬಿಜೆಪಿ ಸರ್ಕಾರದ ಮಾನ ಹರಾಜು ಹಾಕಿದರು. ಮಾತಿನುದ್ದಕ್ಕು ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದರು. ಸಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರನ್ನು ರಬ್ಬರಸ್ಟ್ಯಾಂಪ್  ಮತ್ತು ಹೆಬ್ಬಟ್ಟು ರಾಜ್ಯಪಾಲ ಎಂದು ಜರಿದರು.  ಸರ್ಕಾರ […]

ರಾಜ್ಯ

ಗದಗ ಜಿಲ್ಲೆಯ ಶೇ.೯೬ ರಷ್ಟು ಆಟೊ ಚಾಲಕರಿಗಿಲ್ಲ ನೆರವು…!

೧೬ ಸಾವಿರ ಆಟೋ ಚಾಲಕರಲ್ಲಿ ೪೨೩ ಜನಕ್ಕಷ್ಟೇ ನೆರವು ದಾಖಲಾತಿ, ಮಾಹಿತಿ ಕೊರತೆ  ಸರ್ಕಾರದ ೫೦೦೦ ಪರಿಹಾರ ಧನ ನಾಮಕಾವಾಸ್ತೆ ಮಂಜುನಾಥ ಎಸ್.ರಾಠೋಡ ಗದಗ prajakiran.com : ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾದ ಆಟೊ ಚಾಲಕರಿಗೆ ರಾಜ್ಯ ಸರ್ಕಾರ ಘೋಷಿಸಿದ ಪರಿಹಾರ ಧನದ ಪ್ರಯೋಜನ ಗದಗ ಜಿಲ್ಲೆಯ ಬಹುತೇಕ ಆಟೊ ಚಾಲಕರಿಗೆ ಸಿಕ್ಕಿಲ್ಲ. ರಾಜ್ಯ ಸರ್ಕಾರವು ಪ್ರತಿ ಆಟೊ ಚಾಲಕನಿಗೆ ೫,೦೦೦ ಪರಿಹಾರ ಧನ ಘೋಷಿಸಿತ್ತು. ಪರಿಹಾರ ಧನಕ್ಕೆ ಅರ್ಜಿ ಸಲ್ಲಿಸಲು ಜು. ೩೧ ಕಡೆಯ ದಿನವಾಗಿತ್ತು. ಗದಗ […]

ರಾಜ್ಯ

ಧಾರವಾಡ ಜಿಲ್ಲೆಯ ನೆರೆ ನಿರ್ವಹಣೆಯಲ್ಲಿ ಸರಕಾರ ವಿಫಲ

ಧಾರವಾಡ prajakiran.com : ಜಿಲ್ಲೆಯಲ್ಲಿನ ಮಳೆ ಮತ್ತು ನೆರೆ ನಿರ್ವಹಣೆಯಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ ಆರೋಪಿಸಿದರು. ಅವರು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಮಳೆ ಮತ್ತು ಕೆಲವು ಭಾಗಗಳಲ್ಲಿನ ನೆರೆ ಹಾವಳಿಯಿಂದ ಜನ ಜೀವನ ಸಂಕಷ್ಟಕ್ಕೆ ಸಿಲುಕಿದೆ. ವಿಶೇಷವಾಗಿ ರೈತರ ಹೊಲದಲ್ಲಿನ ಬೆಳೆಗಳು ನಾಶವಾಗಿದ್ದು, ರೈತರನ್ನು ಮತ್ತಷ್ಟು ಸಂಕಷ್ಟದ ಜಾಲಕ್ಕೆ ನೂಕಿದೆ. ಧಾರವಾಡ ಜಿಲ್ಲೆಯಲ್ಲಿ ಹರಿಯುವ ಬೆಣ್ಣಿ ಹಳ್ಳ ಮತ್ತು ತುಪ್ಪರಿ ಹಳ್ಳಗಳ ಇಕ್ಕೆಲೆಗಳಲ್ಲಿನ […]

ರಾಜ್ಯ

ಧಾರವಾಡದ ತುಪರಿ ಹಳ್ಳದಲ್ಲಿ ಕೋಚ್ಚಿ ಹೋದ ರೈತ 56 ದಿನ ಕಳೆದರೂ ನಾಪತ್ತೆ…!

ಜಿಲ್ಲಾಡಳಿತದ ವಿರುದ್ದ ಪಿ.ಎಚ್. ನೀರಲಕೇರಿ ಆಕ್ರೋಶ ಮಗನ ನೆನೆದು ರೈತ ತಂದೆ ತಾಯಿ ಕಣ್ಣೀರು follow/like: facebook.com/prajakirannews ಧಾರವಾಡ prajakiran.com : ಧಾರವಾಡ ತಾಲೂಕಿನ ಹಾರೋಬೆಳವಡಿ ಗ್ರಾಮದ  ರೈತ ಮಡಿವಾಳಪ್ಪ‌ ನಾಗಪ್ಪ ಜಕ್ಕನವರ ಜಾನುವಾರು ಕಾಯಿಸಲು ಹೋದಾಗ ತುಪರಿಹಳ್ಳದ ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗಿ 56 ದಿನ ಕಳೆದರೂ ಜಿಲ್ಲಾಡಳಿತ ಈವರೆಗೆ ರೈತನನ್ನು ಹುಡುಕಿಕೊಡದೆ ದಿವ್ಯ ನಿರ್ಲಕ್ಷ್ಯ ತೋರಿಸಿದೆ. ಇನ್ನೂ ಒಂದುಅಚ್ಚರಿಯ ಸಂಗತಿಯೆಂದರೆ, ಆ ಬಡ ತಂದೆ ತಾಯಿಗೆ(ಹಿರಿಯ ಜೀವಗಳಿಗೆ) ಸಾಂತ್ವನವೂ ಹೇಳದೆ (ಐದು ಲಕ್ಷ ಪರಿಹಾರವೂ ನೀಡದೆ) […]

ರಾಜ್ಯ

ಧಾರವಾಡದ ಲಕ್ಷ್ಮೀ, ಗಣೇಶ,ಕುಮಾರೇಶ್ವರ, ಶಿವಾನಂದ, ನೆಹರು ನಗರಕ್ಕೂ ಕರೋನಾ

ಧಾರವಾಡ ಕೋವಿಡ್  8543 ಪ್ರಕರಣಗಳು : 6051 ಜನ ಗುಣಮುಖ   ಧಾರವಾಡ prajakiran.com :  ಜಿಲ್ಲೆಯಲ್ಲಿ ಗುರುವಾರ 159  ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಆ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 8543 ಕ್ಕೆ ಏರಿದೆ. ಇದುವರೆಗೆ 6051  ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2234 ಪ್ರಕರಣಗಳು ಸಕ್ರಿಯವಾಗಿವೆ.  36 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 258 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ. ಗುರುವಾರ ಪತ್ತೆಯಾದ ಪ್ರಕರಣಗಳ ಸ್ಥಳಗಳು:* *ಧಾರವಾಡ […]

ರಾಜ್ಯ

ರಾಜ್ಯದಲ್ಲಿ ಗುರುವಾರ 7385 ಕರೋನಾ, 102 ಸಾವು

ರಾಜ್ಯದಲ್ಲಿ 6231 ಜನ ಬಿಡುಗಡೆ ಬೆಂಗಳೂರು prajakiran.com : ರಾಜ್ಯದಲ್ಲಿ ಗುರುವಾರವೂ ಮಹಾಮಾರಿ ಕರೋನಾ ಅಟ್ಟಹಾಸ ಮುಂದುವರೆದಿದ್ದು, ಇಂದು ಕೂಡ ವಿವಿಧ ಜಿಲ್ಲೆಗಳಲ್ಲಿ 102 ಜನ ಸಾವನ್ನಪ್ಪಿದ್ದಾರೆ. ಮತ್ತೆ ಹೊಸದಾಗಿ 7385 ಜನರಿಗೆ ಸೋಂಕು ಹರಡಿದ್ದರಿಂದ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ   2,56,975  ಕ್ಕೆ  ಏರಿಕೆಯಾಗಿದೆ.  ಇಂದು ರಾಜ್ಯದಲ್ಲಿ 6231 ಜನ ಬಿಡುಗಡೆಗೊಂಡಿದ್ದು, ಈವರೆಗೆ ಒಟ್ಟು 1,70,381 ಜನ ಗುಣಮುಖರಾಗಿದ್ದು,  82,149 ಸಕ್ರಿಯ ಪ್ರಕರಣಗಳಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  705 ಜನ ಐಸಿಯುನಲ್ಲಿ ಚಿಕಿತ್ಸೆ […]

ರಾಜ್ಯ

ಧಾರವಾಡದಲ್ಲಿ ಗುರುವಾರ 159 ಜನರಿಗೆ ಕರೋನಾ

ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ಗುರುವಾರ ಸಂಜೆ ಮತ್ತೆ ಹೊಸದಾಗಿ  159 ಜನರಿಗೆ ಕೋವಿಡ್ ಪಾಸಿಟಿವ್ ಇರುವುದು ದೃಢವಾಗಿದೆ. ಆ ಮೂಲಕ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 8546ಕ್ಕೆ ಏರಿಕೆಯಾದಂತಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಲ್ತ್ ಬುಲೇಟಿನ್ ತಿಳಿಸಿದೆ.  ಧಾರವಾಡ ಜಿಲ್ಲೆಯಲ್ಲಿ ಈವರೆಗೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದವರ ಸಂಖ್ಯೆ 258ಕ್ಕೆ ಏರಿದಂತಾಗಿದೆ.  ಗುರುವಾರ ಜಿಲ್ಲೆಯಲ್ಲಿ 330 ಜನ ಬಿಡುಗಡೆಗೊಂಡಿದ್ದಾರೆ. ಆ ಮೂಲಕ ಈವರೆಗೆ 6046ಜನರು ಬಿಡುಗಡೆಗೊಂಡತಾಗಿದೆ. ಇನ್ನೂ 2242 ಸಕ್ರಿಯ ಕರೋನಾ ಸೋಂಕಿತರು  ಜಿಲ್ಲೆಯಲ್ಲಿದ್ದಾರೆ  […]

ರಾಜ್ಯ

ನಂಜನಗೂಡು ಆರೋಗ್ಯಾಧಿಕಾರಿ ಆತ್ಮಹತ್ಯೆ : ಡಿಹೆಚ್ ಒ ಕಚೇರಿ ಎದುರು ಶವವಿಟ್ಟು ಪ್ರತಿಭಟನೆ

ಮೈಸೂರು prajakiran.com : ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕು ಆರೋಗ್ಯಾಧಿಕಾರಿಯೂ ಆಗಿದ್ದ ಕೋವಿಡ್‌ ವಾರಿಯರ್‌ ಡಾ. ನಾಗೇಂದ್ರ ಆತ್ಮಹತ್ಯೆ ಮಾಡಿಕೊಂಡಿರುವುದು ರಾಜ್ಯದ ಆರೋಗ್ಯ ಇಲಾಖೆಯನ್ನು ಬೆಚ್ಚಿಬೀಳಿಸಿದೆ. ಕೋವಿಡ್  ಗುರಿ ತಲುಪಲು ಮೈಸೂರು ಡಿ ಹೆಚ್ ಒ ಅವರ ಮೇಲೆ ಒತ್ತಡ ಹೇರಿದ್ದರು. ಹೀಗಾಗಿ ಮಾನಸಿಕವಾಗಿ ಜರ್ಜರಿತರಾಗಿದ್ದಅವರು ಸಾವಿನ ಮನೆ ಕದ ಬಡಿದಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದ ಕುಪಿತಗೊಂಡ ಆರೋಗ್ಯ ಇಲಾಖೆ ಸಿಬ್ಬಂದಿ ಅವರ ಶವವನ್ನು ಜಿಲ್ಲಾ ಆರೋಗ್ಯಇಲಾಖೆ ಕಚೇರಿ ಎದುರು ಇಟ್ಟು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ […]

ರಾಜ್ಯ

ಬೆಳಗಾವಿಯಲ್ಲಿ ಮಳೆ ಹೊಡೆತಕ್ಕೆ ಟ್ರ್ಯಾಕ್ಟರ್ ಅಡಿ ಜೀವನ…!

ಬೆಳಗಾವಿ prajakiran.com : ಮಹಾರಾಷ್ಟ್ರದ ಪಶ್ಚಿಮ ಘಟ್ಟ ಹಾಗೂ ಗಡಿನಾಡು ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ಬಿಡುವಿಲ್ಲದೆ ಸುರಿಯುತ್ತಿರುವ ಧಾರಕಾರ ಮಳೆ ಹಲವರನ್ನು ಬೀದಿಪಾಲು ಮಾಡಿದೆ. ಗೋಕಾಕ ತಾಲೂಕಿನ ಹಡಗಿನಾಳ ಗ್ರಾಮದ ಕುಟುಂಬವೊಂದು ಕಳೆದ ನಾಲ್ಕು ದಿನಗಳಿಂದ ರಸ್ತೆ ಬದಿಯೇ ಟ್ರ್ಯಾಕ್ಟರ್ ಟ್ರೇಲರ್ ನಲ್ಲಿಯೇ, ಐವರು ಮಕ್ಕಳು, ಹಿರಿಯರು ಸಮೇತ ವಾಸವಾಗಿದ್ದಾರೆ. ಘಟಪ್ರಭಾ ಪ್ರವಾಹಕ್ಕೆ ಸಿಲುಕಿದ ಇವರ ಮನೆಗೆ ನೀರು ನುಗ್ಗಿದ್ದರಿಂದ ಸುರಕ್ಷಿತ ಸ್ಥಳಕ್ಕೆ ತೆರಳಲು ಸಾಧ್ಯವಾಗದೆ, ನಾಲ್ಕು ಕಿ,ಮೀ ದೂರ ಬಂದು ರಸ್ತೆ ಬದಿಯಲ್ಲಿಯೇ […]

ರಾಜ್ಯ

ಘಟಪ್ರಭಾ ಪ್ರವಾಹ : ನೂರಾರು ಮನೆಗಳು, ದೇವಸ್ಥಾನ ಜಲಾವೃತ….!

ಬಾಗಲಕೋಟೆ prajakiran.com : ಬಾಗಲಕೋಟೆ ಜಿಲ್ಲೆಯ ಘಟಪ್ರಭಾ ನದಿಯೂ ತುಂಬಿ ಹರಿಯುತ್ತಿರುವುದರಿಂದ ಪ್ರವಾಹ ಸಂಕಷ್ಟ ಮುಂದುವರೆದಿದೆ. ಈ ನದಿ ಪಾತ್ರದ ಹಲವು ಹಳ್ಳಿಗಳ ಜನಅಕ್ಷರಶಃ ಸಂಕಷ್ಟಕ್ಕೆ ಸಿಲುಕಿದ್ದು, ಅಲ್ಲಿಯ ಜನ ಮಳೆಯಲ್ಲಿ ಸಿಲುಕಿ ನರುಳುತ್ತಿದ್ದಾರೆ. ಭಾರೀ ಮಳೆಗೆ ನೂರಾರು ಮನೆಗಳು ಜಲಾವೃತಗೊಂಡಿವೆ. ಉಪಮುಖ್ಯಮಂತ್ರಿ ಗೋವಿಂದ ಕಾರಜೋಳಅವರ ತವರು ಕ್ಷೇತ್ರ ಮುಧೋಳದ ಮಿರ್ಜಿ ಯಲ್ಲಿಯೇ 50 ಮನೆಗಳು ಜಲಾವೃತಗೊಂಡಿವೆ. ಅದೇ ರೀತಿ ಮಾಚಕನೂರು ಚಿಕ್ಕೂರು ಸೇತುವೆ ಮುಳಗಡೆಯಾಗಿದೆ. ಇದರಿಂದಾಗಿ, ಐದು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಜೊತೆಗೆ ಮಾಚಕನೂರಿನ ಹೊಳೆ […]