ರಾಜ್ಯ

ರಾಜ್ಯದಲ್ಲಿ ಗುರುವಾರ 7385 ಕರೋನಾ, 102 ಸಾವು

ರಾಜ್ಯದಲ್ಲಿ 6231 ಜನ ಬಿಡುಗಡೆ

ಬೆಂಗಳೂರು prajakiran.com : ರಾಜ್ಯದಲ್ಲಿ ಗುರುವಾರವೂ ಮಹಾಮಾರಿ ಕರೋನಾ ಅಟ್ಟಹಾಸ ಮುಂದುವರೆದಿದ್ದು, ಇಂದು ಕೂಡ ವಿವಿಧ ಜಿಲ್ಲೆಗಳಲ್ಲಿ 102 ಜನ ಸಾವನ್ನಪ್ಪಿದ್ದಾರೆ.

ಮತ್ತೆ ಹೊಸದಾಗಿ 7385 ಜನರಿಗೆ ಸೋಂಕು ಹರಡಿದ್ದರಿಂದ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ   2,56,975  ಕ್ಕೆ  ಏರಿಕೆಯಾಗಿದೆ.

 ಇಂದು ರಾಜ್ಯದಲ್ಲಿ 6231 ಜನ ಬಿಡುಗಡೆಗೊಂಡಿದ್ದು, ಈವರೆಗೆ ಒಟ್ಟು 1,70,381 ಜನ ಗುಣಮುಖರಾಗಿದ್ದು,  82,149 ಸಕ್ರಿಯ ಪ್ರಕರಣಗಳಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  705 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೋವಿಡ್ -19 ಸೋಂಕಿನಿಂದ ರಾಜ್ಯದಲ್ಲಿ  ಗುರುವಾರವೂ 102 ಜನ ಮೃತಪಟ್ಟಿದ್ದು, ಈವರೆಗೆ ಸಾವನ್ನಪ್ಪಿದ್ದವರ ಸಂಖ್ಯೆ 4429ಕ್ಕೆ ಏರಿಕೆಯಾದಂತಾಗಿದೆ.

ಗುರುವಾರ ಪತ್ತೆಯಾದ ಪ್ರಕರಣಗಳಲ್ಲಿ ರಾಜ್ಯದ ರಾಜಧಾನಿ ಬೆಂಗಳೂರು ನಗರದಲ್ಲಿಯೇ ಅತಿ ಹೆಚ್ಚು ಸೋಂಕಿತರು ಕಂಡು ಬಂದಿದ್ದಾರೆ.

ಬೆಂಗಳೂರಿನಲ್ಲಿ ಬರೋಬ್ಬರಿ 2912 ಜನ ಸೋಂಕಿತರು ಕಂಡು ಬಂದಿರುವುದು ಬೆಂಗಳೂರಿಗರನ್ನು ಮತ್ತೆ ಬೆಚ್ಚಿಬೀಳಿಸುವಂತೆ ಮಾಡಿದೆ.

ಇನ್ನೂಳಿದಂತೆ ಬಳ್ಳಾರಿ 483, ಬೆಳಗಾವಿ 358, ಬಾಗಲಕೋಟೆ 159, ಬೆಂಗಳೂರು ಗ್ರಾಮಾಂತರ 77, ಬೀದರ 85, ಚಾಮರಾಜನಗರ 120, ಚಿಕ್ಕಬಳ್ಳಾಪುರ 76, ಚಿಕ್ಕಮಗಳುರು 124, ಚಿತ್ರದುರ್ಗ 60, ದಕ್ಷಿಣ ಕನ್ನಡ 177, ದಾವಣಗೆರೆ 245, ಧಾರವಾಡ 159, ಗದಗ 114, ಹಾಸನ 196, ಹಾವೇರಿ 111, ಕಲಬುರಗಿ 210, ಕೊಡಗು 46, ಕೋಲಾರ 69, ಕೊಪ್ಪಳ 132, ಮಂಡ್ಯ 109, ಮೈಸೂರು 253, ರಾಯಚೂರು 111, ರಾಮನಗರ 27, ಶಿವಮೊಗ್ಗ 188, ತುಮಕೂರು 138, ಉಡುಪಿ 351, ಉತ್ತರಕನ್ನಡ 115, ವಿಜಯಪುರ 112, ಯಾದಗಿರಿ 68  ಹೀಗೆ ಒಟ್ಟು 30 ಜಿಲ್ಲೆಗಳಲ್ಲಿ ಕರೋನಾ ವೈರಸ್ ತನ್ನ ಅಟ್ಟಹಾಸ ಮೆರೆದಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಸಾವಿನ ರಣಕೇಕೆ ರಾಜ್ಯದಲ್ಲಿ ಗುರುವಾರವೂ ಮುಂದುವರೆದಿದ್ದು, ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಬರೋಬ್ಬರಿ 25 ಜನ ಸಾವನ್ನಪ್ಪಿದ್ದಾರೆ. 

ಬಳ್ಳಾರಿ 8, ಹಾಸನ ಹಾಗೂ ಕೊಪ್ಪಳ ತಲಾ 7, ದಕ್ಷಿಣ ಕನ್ನಡ 6, ದಾವಣಗೆರೆ 5, ಯಾದಗಿರಿ, ವಿಜಯಪುರ, ಶಿವಮೊಗ್ಗ, ಕಲಬುರಗಿ, ಹಾವೇರಿ ಹಾಗೂ ಬೆಳಗಾವಿ ತಲಾ 4, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು ಹಾಗೂ ಉತ್ತರಕನ್ನಡ ತಲಾ 3, ಉಡುಪಿ, ರಾಯಚೂರು, ಕೊಡಗು ಹಾಗೂ ಚಾಮರಾಜನಗರ ತಲಾ 2, ಗದಗ, ಕೋಲಾರ, ತುಮಕೂರು ತಲಾ ಒಬ್ಬರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. 

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *