ರಾಜ್ಯ

ಹಿರಿಯ ಪತ್ರಕರ್ತ ರವಿ ಬೆಳೆಗೆರೆ ಇನ್ನಿಲ್ಲ

ಬೆಂಗಳೂರು prajakiran.com : ಹಾಯ್ ಬೆಂಗಳೂರು ಸಂಪಾದಕರಾಗಿದ್ದ ಹಿರಿಯ ಪತ್ರಕರ್ತ ರವಿ ಬೆಳೆಗೆರೆ (62) ಶುಕ್ರವಾರ ಬೆಳಗಿನ ಜಾವ ನಿಧನ ಹೊಂದಿದರು. ಅವರಿಗೆ ರಾತ್ರಿ ಎದೆ ನೋವು ಕಾಣಿಸಿಕೊಂಡಿತ್ತು. ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಅವರು ವಿಧಿವಶರಾದರು. ಸಂಯುಕ್ತ ಕರ್ನಾಟಕದಲ್ಲಿ ಹಲವು ವರ್ಷಗಳ ಕಾಲ ನಿರ್ವಹಿಸಿದ್ದಅವರು 1995ರಲ್ಲಿ ಹಾಯ್ ಬೆಂಗಳೂರು ಎಂಬ ಕಪ್ಪು ಸುಂದರಿ ಮೂಲಕ ನಾಡಿನಲ್ಲಿ ಮಿಂಚಿನ ಸಂಚಲನ ಸೃಷ್ಟಿಸಿದ್ದರು. ಬಾಟಮ್ ಐಟಮ್, ಸಂಪಾದಕೀಯ, ಅಂಕಣಗಳು, ಅದರಲ್ಲೂ ಭೀಮಾತೀರದ ರಕ್ತಪಾತದ […]

ರಾಜ್ಯ

ಪವರ ಟಿ ವಿ ಮೇಲೆ ದಾಳಿ ನೆನೆದು ಕಣ್ಣೀರಿಟ್ಟ ನಿರೂಪಕ ರೆಹಮಾನ್ ಹಾಸನ್ ವೀಡಿಯೋ ವೈರಲ್

ಬೆಂಗಳೂರು prajakiran.com : ನಾಡಿನ ಪ್ರತಿಷ್ಟಿತ ಚಾನಲ್ ಗಳಲ್ಲಿ ಒಂದಾದ ಪವರ್ ಟಿವಿ ಮೇಲೆ ಪ್ರತಿಕಾರದ ದಾಳಿ ನಡೆಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರಅವರ ಕ್ರಮ ನೆನೆದು ನಿರೂಪಕ ರೆಹಮಾನ್ ಹಾಸನ ಕಣ್ಣೀರಿಟ್ಟ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಚಾನೆಲ್ ನಂಬಿಕೊಂಡು ರಾಜ್ಯದಲ್ಲಿ 250ಕ್ಕೂ ಹೆಚ್ಚು ಕುಟುಂಬಗಳು ಬದುಕುಕಟ್ಟಿಕೊಳ್ಳುತ್ತಿವೆ. ಅವರ ಬದುಕು ಬೀದಿಗೆ ಬಂದಿದೆ ಎಂದು ಬಿಕ್ಕಿ ಬಿಕ್ಕಿ ಅತ್ತ ವೀಡಿಯೋ ಇದಾಗಿದೆ. ನಾಡಿನ ದೊರೆಯ ಕುಟುಂಬದ ಭ್ರಷ್ಟಾಚಾರವನ್ನು ದಾಖಲೆ […]

ರಾಜ್ಯ

ಹಿರಿಯ ಸಾಹಿತಿ, ವಿಮರ್ಶಕ ಡಾ. ಜಿ. ಎಸ್. ಆಮೂರ ಇನ್ನಿಲ್ಲ  

ಬೆಂಗಳೂರು prajakiran.com : ನಾಡಿನ ಹಿರಿಯ ಸಾಹಿತಿ, ವಿಮರ್ಶಕರಾಗಿದ್ದ ಡಾ. ಜಿ.ಎಸ್. ಆಮೂರ (95) ಅವರು ಬೆಂಗಳೂರಿನಲ್ಲಿ ಸೋಮವಾರ ಬೆಳಗ್ಗೆ ವಿಧಿವಶರಾದರು. ಅವರು ಕಳೆದ ಹದಿನೈದು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಇಂದು ಚಿಕಿತ್ಸೆ ಫಲಿಸದೆ ಇಹಲೋಕ ತ್ಯಜಿಸಿದ್ದಾರೆ. ಡಾ. ಗುರುರಾಜ ಶ್ಯಾಮಾಚಾರ ಆಮೂರರು (ಜಿ.ಎಸ್. ಆಮೂರರು) ಹಲವು ದಶಕಗಳಿಂದ ಧಾರವಾಡದಲ್ಲಿ ನೆಲೆಸಿರುವ ಕನ್ನಡದ ಖ್ಯಾತ ವಿಮರ್ಶಕ ಮತ್ತು ಸಾಹಿತಿಗಳಾಗಿದ್ದಾರೆ.   ಇವರ “ಭುವನದ ಭಾಗ್ಯ”  ಕೃತಿಗೆ ೧೯೯೬ ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ. […]

ಸಿನಿಮಾ

ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾನಿ ಜೈಲು ಪಾಲು

ಬೆಂಗಳೂರು prajakiran.com : ಡ್ರಗ್ಸ್ ಜಾಲದ ನಂಟು ಹೊಂದಿರುವ ಆರೋಪ ಎದುರಿಸುತ್ತಿರುವ ಸ್ಯಾಂಡಲ್ ವುಡ್ ನಟಿ ರಾಗಿಣಿ ಜೈಲು ಸೇರಿದ ಬೆನ್ನಲ್ಲೇ ಸಿಸಿಬಿ ವಿಚಾರಣೆ ಮುಗಿಸಿ ಇನ್ನೊಬ್ಬ ನಟಿ ಸಂಜನಾ ಗಲ್ರಾನಿ ಕೂಡ ಬೆಂಗಳೂರಿನ ಪರಪ್ಪನಅಗ್ರಹಾರ ಜೈಲು ಪಾಲಾಗಿದ್ದಾರೆ. ಸೆ.18ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ಈ ಮಧ್ಯೆ  ಜೈಲಿನಲ್ಲಿ ನಟಿ ರಾಗಿಣಿ ಹಾಗೂ ಸಂಜನಾ ಇಬ್ಬರು ಜೊತೆಯಾಗಿ ಕಾಲ ಕಳೆದಿದ್ದಾರೆ. ಇದೇ ವೇಳೆ ಸ್ಯಾಂಡಲ್ ವುಡ್ ಇನ್ನೊಬ್ಬ ನಟಿ ಐಂದ್ರಿತಾ ರೆ ಹಾಗೂ […]

ರಾಜ್ಯ

ರಾಜ್ಯದಲ್ಲಿ ಭಾನುವಾರ 9319 ಕರೋನಾ, 95 ಸಾವು

ರಾಜ್ಯದಲ್ಲಿ 9575  ಜನ ಬಿಡುಗಡೆ ಬೆಂಗಳೂರು prajakiran.com : ರಾಜ್ಯದಲ್ಲಿ ಭಾನುವಾರವೂ ಮಹಾಮಾರಿ ಕರೋನಾ ಅಟ್ಟಹಾಸ ಮುಂದುವರೆದಿದ್ದು, ಇಂದು ಕೂಡ ವಿವಿಧ ಜಿಲ್ಲೆಗಳಲ್ಲಿ  95  ಜನ ಸಾವನ್ನಪ್ಪಿದ್ದಾರೆ. ಮತ್ತೆ ಹೊಸದಾಗಿ   9319 ಜನರಿಗೆ ಸೋಂಕು ಹರಡಿದ್ದರಿಂದ ರಾಜ್ಯದ ಒಟ್ಟು ಸೋಂಕಿತರ 3,98, 551ಕ್ಕೆ  ಏರಿಕೆಯಾಗಿದೆ.  ಇಂದು ರಾಜ್ಯದಲ್ಲಿ 9575 ಜನ ಬಿಡುಗಡೆಗೊಂಡಿದ್ದು, ಈವರೆಗೆ 2,92,873 ಒಟ್ಟು ಜನ ಗುಣಮುಖರಾಗಿದ್ದು,  99266    ಸಕ್ರಿಯ ಪ್ರಕರಣಗಳಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 775 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. […]

ರಾಜ್ಯ

ರಾಜ್ಯದಲ್ಲಿ ಶುಕ್ರವಾರ 9280 ಕರೋನಾ, 116 ಸಾವು

ರಾಜ್ಯದಲ್ಲಿ 6161 ಜನ ಬಿಡುಗಡೆ ಬೆಂಗಳೂರು prajakiran.com : ರಾಜ್ಯದಲ್ಲಿ ಶುಕ್ರವಾರವೂ ಮಹಾಮಾರಿ ಕರೋನಾ ಅಟ್ಟಹಾಸ ಮುಂದುವರೆದಿದ್ದು, ಇಂದು ಕೂಡ ವಿವಿಧ ಜಿಲ್ಲೆಗಳಲ್ಲಿ  116 ಜನ ಸಾವನ್ನಪ್ಪಿದ್ದಾರೆ. ಮತ್ತೆ ಹೊಸದಾಗಿ 9280 ಜನರಿಗೆ ಸೋಂಕು ಹರಡಿದ್ದರಿಂದ ರಾಜ್ಯದ ಒಟ್ಟು ಸೋಂಕಿತರ 3,79,486    ಕ್ಕೆ  ಏರಿಕೆಯಾಗಿದೆ.  ಇಂದು ರಾಜ್ಯದಲ್ಲಿ 6161 ಜನ ಬಿಡುಗಡೆಗೊಂಡಿದ್ದು, ಈವರೆಗೆ ಒಟ್ಟು 2,74,196 ಜನ ಗುಣಮುಖರಾಗಿದ್ದು,    99,101 ಸಕ್ರಿಯ ಪ್ರಕರಣಗಳಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 785 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. […]

ಸಿನಿಮಾ

ನಟಿ ರಾಗಿಣಿ ಆಪ್ತ ರವಿಶಂಕರ್ ಬಂಧನ

ನಟಿ ಸಂಜನಾ ಆಪ್ತ ರಾಹುಲ್ ಸಿಸಿಬಿ ವಶಕ್ಕೆ ಬೆಂಗಳೂರು prajakiran.com : ಡ್ರಗ್ಸ್ ಜಾಲದ ನಂಟು ಹೊಂದಿದ್ದ ಆರೋಪದ ಮೇಲೆ ಬೆಂಗಳೂರು ಸಿಸಿಬಿ ಪೊಲೀಸರು ನಟಿ ರಾಗಿಣಿ ಆಪ್ತ ರವಿಶಂಕರ್ ಬಂಧನ ಮಾಡಿರುವುದು ಕನ್ನಡ ಸಿನಿಮಾ ರಂಗದಲ್ಲಿ ತಳಮಳ ಸೃಷ್ಟಿಸಿದೆ. ಅದರ ಬೆನ್ನಲ್ಲೇ ಇನ್ನೊಬ್ಬ ನಟಿ ಸಂಜನಾ ಗಲ್ರಾಣಿ ಅವರ ಆಪ್ತ ರಾಹುಲ್ ಸಿಸಿಬಿ ವಶದಲ್ಲಿದ್ದು, ಆತನ ವಿಚಾರಣೆ ನಡೆದಿದೆ. ಇದರ ಬೆನ್ನಲ್ಲೇ ನಟಿ ರಾಗಿಣಿ ಕೂಡ ಸಿಸಿಬಿ ಎದುರು ಹಾಜರಾಗಿ ವಿಚಾರಣೆ ಎದುರಿಸಲು ನೋಟಿಸ್ ಜಾರಿಯಾಗಿದೆ. […]

ಸಿನಿಮಾ

ಸಿಸಿಬಿಗೆ 10-15 ಜನರ ಹೆಸರು ಹೇಳಿದ್ದೇನೆ : ಇಂದ್ರಜೀತ್ ಲಂಕೇಶ

ಬೆಂಗಳೂರು prajakiran.com : ಮಾದಕ ಜಗತ್ತಿನ ನಂಟು ಹೊಂದಿರುವ 10-15 ಜನರ ಹೆಸರುಗಳನ್ನು ಬೆಂಗಳೂರು ಸಿಸಿಬಿ ಪೊಲೀಸರಿಗೆ ಕೊಟ್ಟಿದ್ದೇನೆ ಎಂದು ನಿರ್ದೇಶಕ ಇಂದ್ರಜೀತ್ ಲಂಕೇಶ ತಿಳಿಸಿದ್ದಾರೆ. ಅವರು ಸೋಮವಾರ ಸುದೀರ್ಘವಾದ ವಿಚಾರಣೆ ಬಳಿಕ ಹೊರಬಂದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ವಿವರ ನೀಡಿದರು. ಡ್ರಗ್ಸ್ ರಾಯಭಾರಿಗಳಾಗಿರುವ ಕೆಲ ಸೆಲೆಬ್ರಿಟಿಗಳಿಗೆ ಬಿಸಿ ತಾಕಿಸುವ ಉದ್ದೇಶದಿಂದ ಯಾರಾರು ಭಾಗಿಯಾಗಿದ್ದಾರೆ. ಸಂಪರ್ಕದಲ್ಲಿದ್ದಾರೆ. ಮಾದಕ ವಸ್ತುಗಳ ವ್ಯಸನಿಗಳ ಹೆಸರು, ಮಾಹಿತಿ ಹಾಗೂ ದಾಖಲೆ ಸಮೇತ ಮಾಹಿತಿ ನೀಡಿದ್ದೇನೆ. ಡ್ರಗ್ಸ್ ಪಾರ್ಟಿ ನಡೆಯುತ್ತಿರುವ ಹಲವು ಜಾಗಗಳ […]

ಅಪರಾಧ

ಖತರ್ ನಾಕ್ ಆನ್ ಲೈನ್ ವಂಚಕ ಸೆರೆ

ಬೆಂಗಳೂರು prajakiran.com : ಖತರ್ ನಾಕ್ ಆನ್ ಲೈನ್ ವಂಚಕನನ್ನು ಸೆರೆ ಹಿಡಿಯುವಲ್ಲಿ ಬೆಂಗಳೂರು ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ. ಬಂಧಿತನನ್ನು ನಂದೀಶರಡ್ಡಿ ಅಲಿಯಾಸ ಬಾಬು ಎಂದು ಗುರುತಿಸಲಾಗಿದೆ. ಈತ ಒಎಲ್ ಎಕ್ಸ್ ನಲ್ಲಿ 5 ಸಾವಿರ ಕಳೆದುಕೊಂಡಿದ್ದ. ಬಳಿಕ ಅದನ್ನೇ ದಂಧೆಯನ್ನಾಗಿಸಿಕೊಂಡು ವಂಚಿಸಲು ಆರಂಭಿಸಿದ. ಪ್ರತಿ ಬಾರಿಯೂ ಹೊಸ ಸಿಮ್ ಹಾಕಿ ಕಾರು ಮಾರುವುದಿದೆ. ಬೈಕ್ ಮಾರುವುದಿದೆ ಎಂದು ನಂಬಿಸಿ ಬಲೆಗೆ ಹಾಕುತ್ತಿದ್ದ. ಟೆಸ್ಟ್ ಡ್ರೈವ್ ನೆಪದಲ್ಲಿ ವಾಹನ ಸಮೇತ ಪರಾರಿಯಾಗುತ್ತಿದ್ದ. ಬೆಂಗಳೂರಿನ ತಿಲಕ್ ನಗರ ಪೊಲೀಸ್ […]

ರಾಜ್ಯ

ಡ್ರಗ್ಸ್ ಮಾಫಿಯಾ ಕುರಿತು ಸಿಸಿಬಿಯಿಂದ ತನಿಖೆ

ಹುಬ್ಬಳ್ಳಿ prajakiran.com : ಡ್ರಗ್ಸ್ ಪ್ರಭಾವಕ್ಕೆ ಚಿತ್ರರಂಗವಲ್ಲದೇ ಬಹಳಷ್ಟು  ಜನ ಒಳಗಾಗಿದ್ದಾರೆ. ಸದ್ಯ ನಾವು ಅದರ ಮೂಲವನ್ನ ಹುಡುಕುತ್ತಿದ್ದೆವೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಅವರು ಭಾನುವಾರ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಕುರಿತು ವಿವರ ನೀಡಿದರು. ಇಲ್ಲಿಯವರೆಗೆ ಕೇವಲ ಗಾಂಜಾ ವ್ಯವಹಾರ ಮಾಡೋರನ್ನ ಪೊಲೀಸರು ಅರೆಸ್ಟ್ ಮಾಡ್ತಿದ್ರು.ಈಗ ಡಾಕ್೯ ನೆಟ್ ಎನ್ನೋ ಆನಲೈನ್ ವೆಬ್ ಸೈಟ್ ನ್ನ ಭೇಧಿಸಿದ್ದೆವೆ ಎಂದರು. ಪೋಸ್ಟಲ್ ಮೂಲಕನೂ ಮಾದಕ ವಸ್ತು ಸಪ್ಲೈ ಆಗ್ತಿತ್ತು. ಅಂತರಾಜ್ಯ, ವಿದೇಶದ […]