ಬೆಂಗಳೂರು prajakiran.com : ಡ್ರಗ್ಸ್ ಜಾಲದ ನಂಟು ಹೊಂದಿರುವ ಆರೋಪ ಎದುರಿಸುತ್ತಿರುವ ಸ್ಯಾಂಡಲ್ ವುಡ್ ನಟಿ ರಾಗಿಣಿ ಜೈಲು ಸೇರಿದ ಬೆನ್ನಲ್ಲೇ ಸಿಸಿಬಿ ವಿಚಾರಣೆ ಮುಗಿಸಿ ಇನ್ನೊಬ್ಬ ನಟಿ ಸಂಜನಾ ಗಲ್ರಾನಿ ಕೂಡ ಬೆಂಗಳೂರಿನ ಪರಪ್ಪನಅಗ್ರಹಾರ ಜೈಲು ಪಾಲಾಗಿದ್ದಾರೆ.
ಸೆ.18ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ಈ ಮಧ್ಯೆ ಜೈಲಿನಲ್ಲಿ ನಟಿ ರಾಗಿಣಿ ಹಾಗೂ ಸಂಜನಾ ಇಬ್ಬರು ಜೊತೆಯಾಗಿ ಕಾಲ ಕಳೆದಿದ್ದಾರೆ.
ಇದೇ ವೇಳೆ ಸ್ಯಾಂಡಲ್ ವುಡ್ ಇನ್ನೊಬ್ಬ ನಟಿ ಐಂದ್ರಿತಾ ರೆ ಹಾಗೂ ನಟ ದಿಗಂತ ದಂಪತಿಯನ್ನು ಸಿಸಿಬಿ ಅಧಿಕಾರಿಗಳು ಮೂರು ಗಂಟೆಗಳಿಗೂ ಅಧಿಕ ಕಾಲ ವಿಚಾರಣೆ ನಡೆಸಿ ಸಾಕಷ್ಟು ಮಾಹಿತಿ ಕಲೆ ಹಾಕಿದೆ.
ಮತ್ತೇ ಕರೆದಾರ ವಿಚಾರಣೆಗೆ ಹಾಜರಾಗಬೇಕು ಎಂದು ಸಿಸಿಬಿ ಪೊಲೀಸರು ಸೂಚಿಸಿರುವುದು ದಂಪತಿಗಳಿಗೆ ಸಂಕಷ್ಟ ಹಾಗೂ ಆತಂಕ ತಂದಿದೆ.
ಅಲ್ಲದೆ, ಮತ್ತೆ ವಿಚಾರಣೆ ನಡೆಸುತ್ತೇವೆ. ಕರೆದಾಗ ಬರಬೇಕು ಎಂದು ಸೂಚಿಸಿ ಕಳುಹಿಸಲಾಗಿದೆಎಂದು ಬೆಂಗಳೂರು ಸಿಸಿಬಿ ಮುಖ್ಯಸ್ಥ ಸಂಜೀವ ಪಾಟೀಲ ತಿಳಿಸಿದ್ದಾರೆ.
ಡ್ರಗ್ಸ್ ಜಾಲದ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಶೇಖ್ ಫಾಜಿಲ್ ಜೊತೆಗೆ ನಟಿ ಐಂದ್ರಿತಾ ರೆ ನಂಟು ಹೊಂದಿದ್ದರು.
ಶ್ರೀಲಂಕಾದ ಕ್ಯಾಸಿನೋ ಪಾರ್ಟಿ, ಬೆಲ್ಜಿಯಂನಲ್ಲಿ ಡ್ಯಾನ್ಸ್ ಫೆಸ್ಟಿವಲ್ ಸೇರಿದಂತೆ ಹಲವಡೆ ಭಾಗವಹಿಸಿದ್ದರು.
ಮಾಜಿ ಸಚಿವರ ಜೊತೆಗೆ ನಂಟು ಹೊಂದಿದ್ದ ಶೇಖ್ ಫಾಜಿಲ್ ಸದ್ಯ ತಲೆ ಮೆರೆಸಿಕೊಂಡಿದ್ದು, ಸಿಸಿಬಿ ಪೊಲೀಸರು ಆತನಿಗಾಗಿ ಜಾಲ ಬೀಸಿದ್ದಾರೆ.
ಡ್ರಗ್ಸ್ ಪ್ರಕರಣದ ಆರೋಪಿಗಳಾದ ನಟಿ ರಾಗಿಣಿ ಬಾಯ್ ಫ್ರೆಂಡ್ ರವಿಶಂಕರ್ ಹಾಗೂ ಇನ್ನೊಬ್ಬ ಆರೋಪಿ ವಿರೇನ್ ಖನ್ನಾನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.