ರಾಜ್ಯ

ಡ್ರಗ್ಸ್ ಮಾಫಿಯಾ ಕುರಿತು ಸಿಸಿಬಿಯಿಂದ ತನಿಖೆ

ಹುಬ್ಬಳ್ಳಿ prajakiran.com : ಡ್ರಗ್ಸ್ ಪ್ರಭಾವಕ್ಕೆ ಚಿತ್ರರಂಗವಲ್ಲದೇ ಬಹಳಷ್ಟು  ಜನ ಒಳಗಾಗಿದ್ದಾರೆ. ಸದ್ಯ ನಾವು ಅದರ ಮೂಲವನ್ನ ಹುಡುಕುತ್ತಿದ್ದೆವೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.

ಅವರು ಭಾನುವಾರ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಕುರಿತು ವಿವರ ನೀಡಿದರು.

ಇಲ್ಲಿಯವರೆಗೆ ಕೇವಲ ಗಾಂಜಾ ವ್ಯವಹಾರ ಮಾಡೋರನ್ನ ಪೊಲೀಸರು ಅರೆಸ್ಟ್ ಮಾಡ್ತಿದ್ರು.ಈಗ ಡಾಕ್೯ ನೆಟ್ ಎನ್ನೋ ಆನಲೈನ್ ವೆಬ್ ಸೈಟ್ ನ್ನ ಭೇಧಿಸಿದ್ದೆವೆ ಎಂದರು.

ಪೋಸ್ಟಲ್ ಮೂಲಕನೂ ಮಾದಕ ವಸ್ತು ಸಪ್ಲೈ ಆಗ್ತಿತ್ತು. ಅಂತರಾಜ್ಯ, ವಿದೇಶದ ಮೂಲವನ್ನ ಬೇಧಿಸುತ್ತಿದ್ದೆವೆ ಎಂದರು.

ಎನ್ ಸಿಬಿಯವರು ಕೆಲವು ಸಿಂಥೆಟಿಕ್ ಡ್ರಗ್ಸ್ ವ್ಯವಹಾರ ಮಾಡೋರನ್ನ ಬಂದಿಸಿದ್ದಾರೆ. ಅದರಲ್ಲಿ ಕೆಲವು ಚಿತ್ರರಂಗದವರಿದ್ದಾರೆ ಎನ್ನೋ ಮಾಹಿತಿ ಇದೆ.ಆ ಬಗ್ಗೆ ನಾವು ಸಂಪೂರ್ಣ ಸಹಕಾರ ನೀಡುತ್ತಿದ್ದೆವೆ ಎಂದು ವಿವರಿಸಿದರು.

ನಿನ್ನೆ ನಿರ್ದೇಶಕ ಇಂದ್ರಜಿತ್ಲಂಕೇಶ್ ಅವರಿಗೆ ಈ ಕುರಿತು ಸಂಪೂರ್ಣ ಮಾಹಿತಿ ನೀಡಲು ನೋಟಿಸ್ ನೀಡಿದ್ದೆವೆ. ಅವರು ಇವತ್ತು ಏನ್ ಮಾಹಿತಿ ಕೊಡ್ತಾರೆ ನೋಡೋಣ ಎಂದು ಹೇಳಿದರು.

ನಮ್ಮ ಸಿಸಿಬಿಯವರಿಗೆ ಈ ಬಗ್ಗೆ ಕುಲಕುಂಶವಾಗಿ ತನಿಖೆ ಮಾಡಲು ಹೇಳಿದ್ದಿವಿ.ಚಿತ್ರರಂಗ ಇರಲಿ ಇನ್ಯಾವುದೇ ಇರಲಿ ನಾವು ಯಾರನ್ನು ಬಿಡಲ್ಲ.ಕಾಲೇಜು ಆಡಳಿತ ಮಂಡಳಿಗಳಿಗೂ ಸೂಚನೆ ನೀಡುತ್ತೆವೆ‌ ಎಂದರು.

ಪೊಲೀಸರ ಮೇಲೆ ರಾಜಕಾರಣಿಗಳ ಪ್ರಭಾವ ಸತ್ಯಕ್ಕೆ ದೂರವಾದದ್ದು, ಪೊಲೀಸರ ಮೇಲಿನ ಆರೋಪ ಸರಿಯಲ್ಲ ಎಂದು ಸ್ಪಷ್ಟಪಡಿಸಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *