ರಾಜ್ಯ

ಹಿರಿಯ ಪತ್ರಕರ್ತ ರವಿ ಬೆಳೆಗೆರೆ ಇನ್ನಿಲ್ಲ

ಬೆಂಗಳೂರು prajakiran.com : ಹಾಯ್ ಬೆಂಗಳೂರು ಸಂಪಾದಕರಾಗಿದ್ದ ಹಿರಿಯ ಪತ್ರಕರ್ತ ರವಿ ಬೆಳೆಗೆರೆ (62) ಶುಕ್ರವಾರ ಬೆಳಗಿನ ಜಾವ ನಿಧನ ಹೊಂದಿದರು. ಅವರಿಗೆ ರಾತ್ರಿ ಎದೆ ನೋವು ಕಾಣಿಸಿಕೊಂಡಿತ್ತು. ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಅವರು ವಿಧಿವಶರಾದರು. ಸಂಯುಕ್ತ ಕರ್ನಾಟಕದಲ್ಲಿ ಹಲವು ವರ್ಷಗಳ ಕಾಲ ನಿರ್ವಹಿಸಿದ್ದಅವರು 1995ರಲ್ಲಿ ಹಾಯ್ ಬೆಂಗಳೂರು ಎಂಬ ಕಪ್ಪು ಸುಂದರಿ ಮೂಲಕ ನಾಡಿನಲ್ಲಿ ಮಿಂಚಿನ ಸಂಚಲನ ಸೃಷ್ಟಿಸಿದ್ದರು. ಬಾಟಮ್ ಐಟಮ್, ಸಂಪಾದಕೀಯ, ಅಂಕಣಗಳು, ಅದರಲ್ಲೂ ಭೀಮಾತೀರದ ರಕ್ತಪಾತದ […]

ಸಿನಿಮಾ

ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾನಿ ಜೈಲು ಪಾಲು

ಬೆಂಗಳೂರು prajakiran.com : ಡ್ರಗ್ಸ್ ಜಾಲದ ನಂಟು ಹೊಂದಿರುವ ಆರೋಪ ಎದುರಿಸುತ್ತಿರುವ ಸ್ಯಾಂಡಲ್ ವುಡ್ ನಟಿ ರಾಗಿಣಿ ಜೈಲು ಸೇರಿದ ಬೆನ್ನಲ್ಲೇ ಸಿಸಿಬಿ ವಿಚಾರಣೆ ಮುಗಿಸಿ ಇನ್ನೊಬ್ಬ ನಟಿ ಸಂಜನಾ ಗಲ್ರಾನಿ ಕೂಡ ಬೆಂಗಳೂರಿನ ಪರಪ್ಪನಅಗ್ರಹಾರ ಜೈಲು ಪಾಲಾಗಿದ್ದಾರೆ. ಸೆ.18ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ಈ ಮಧ್ಯೆ  ಜೈಲಿನಲ್ಲಿ ನಟಿ ರಾಗಿಣಿ ಹಾಗೂ ಸಂಜನಾ ಇಬ್ಬರು ಜೊತೆಯಾಗಿ ಕಾಲ ಕಳೆದಿದ್ದಾರೆ. ಇದೇ ವೇಳೆ ಸ್ಯಾಂಡಲ್ ವುಡ್ ಇನ್ನೊಬ್ಬ ನಟಿ ಐಂದ್ರಿತಾ ರೆ ಹಾಗೂ […]

ಸಿನಿಮಾ

ನಟಿ ರಾಗಿಣಿ ಆಪ್ತ ರವಿಶಂಕರ್ ಬಂಧನ

ನಟಿ ಸಂಜನಾ ಆಪ್ತ ರಾಹುಲ್ ಸಿಸಿಬಿ ವಶಕ್ಕೆ ಬೆಂಗಳೂರು prajakiran.com : ಡ್ರಗ್ಸ್ ಜಾಲದ ನಂಟು ಹೊಂದಿದ್ದ ಆರೋಪದ ಮೇಲೆ ಬೆಂಗಳೂರು ಸಿಸಿಬಿ ಪೊಲೀಸರು ನಟಿ ರಾಗಿಣಿ ಆಪ್ತ ರವಿಶಂಕರ್ ಬಂಧನ ಮಾಡಿರುವುದು ಕನ್ನಡ ಸಿನಿಮಾ ರಂಗದಲ್ಲಿ ತಳಮಳ ಸೃಷ್ಟಿಸಿದೆ. ಅದರ ಬೆನ್ನಲ್ಲೇ ಇನ್ನೊಬ್ಬ ನಟಿ ಸಂಜನಾ ಗಲ್ರಾಣಿ ಅವರ ಆಪ್ತ ರಾಹುಲ್ ಸಿಸಿಬಿ ವಶದಲ್ಲಿದ್ದು, ಆತನ ವಿಚಾರಣೆ ನಡೆದಿದೆ. ಇದರ ಬೆನ್ನಲ್ಲೇ ನಟಿ ರಾಗಿಣಿ ಕೂಡ ಸಿಸಿಬಿ ಎದುರು ಹಾಜರಾಗಿ ವಿಚಾರಣೆ ಎದುರಿಸಲು ನೋಟಿಸ್ ಜಾರಿಯಾಗಿದೆ. […]

ಸಿನಿಮಾ

ಸಿಸಿಬಿಗೆ 10-15 ಜನರ ಹೆಸರು ಹೇಳಿದ್ದೇನೆ : ಇಂದ್ರಜೀತ್ ಲಂಕೇಶ

ಬೆಂಗಳೂರು prajakiran.com : ಮಾದಕ ಜಗತ್ತಿನ ನಂಟು ಹೊಂದಿರುವ 10-15 ಜನರ ಹೆಸರುಗಳನ್ನು ಬೆಂಗಳೂರು ಸಿಸಿಬಿ ಪೊಲೀಸರಿಗೆ ಕೊಟ್ಟಿದ್ದೇನೆ ಎಂದು ನಿರ್ದೇಶಕ ಇಂದ್ರಜೀತ್ ಲಂಕೇಶ ತಿಳಿಸಿದ್ದಾರೆ. ಅವರು ಸೋಮವಾರ ಸುದೀರ್ಘವಾದ ವಿಚಾರಣೆ ಬಳಿಕ ಹೊರಬಂದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ವಿವರ ನೀಡಿದರು. ಡ್ರಗ್ಸ್ ರಾಯಭಾರಿಗಳಾಗಿರುವ ಕೆಲ ಸೆಲೆಬ್ರಿಟಿಗಳಿಗೆ ಬಿಸಿ ತಾಕಿಸುವ ಉದ್ದೇಶದಿಂದ ಯಾರಾರು ಭಾಗಿಯಾಗಿದ್ದಾರೆ. ಸಂಪರ್ಕದಲ್ಲಿದ್ದಾರೆ. ಮಾದಕ ವಸ್ತುಗಳ ವ್ಯಸನಿಗಳ ಹೆಸರು, ಮಾಹಿತಿ ಹಾಗೂ ದಾಖಲೆ ಸಮೇತ ಮಾಹಿತಿ ನೀಡಿದ್ದೇನೆ. ಡ್ರಗ್ಸ್ ಪಾರ್ಟಿ ನಡೆಯುತ್ತಿರುವ ಹಲವು ಜಾಗಗಳ […]

ರಾಜ್ಯ

ರಾಜ್ಯದಲ್ಲಿ ಭಾನುವಾರ 8852 ಕರೋನಾ, 106 ಸಾವು

ರಾಜ್ಯದಲ್ಲಿ7101  ಜನ ಬಿಡುಗಡೆ ಬೆಂಗಳೂರು prajakiran.com : ರಾಜ್ಯದಲ್ಲಿ ಭಾನುವಾರವೂ ಮಹಾಮಾರಿ ಕರೋನಾ ಅಟ್ಟಹಾಸ ಮುಂದುವರೆದಿದ್ದು, ಇಂದು ಕೂಡ ವಿವಿಧ ಜಿಲ್ಲೆಗಳಲ್ಲಿ 106 ಜನ ಸಾವನ್ನಪ್ಪಿದ್ದಾರೆ. ಮತ್ತೆ ಹೊಸದಾಗಿ 8852 ಜನರಿಗೆ ಸೋಂಕು ಹರಡಿದ್ದರಿಂದ ರಾಜ್ಯದ ಒಟ್ಟು ಸೋಂಕಿತರ 3,35,928ಕ್ಕೆ  ಏರಿಕೆಯಾಗಿದೆ.  ಇಂದು ರಾಜ್ಯದಲ್ಲಿ 7101 ಜನ ಬಿಡುಗಡೆಗೊಂಡಿದ್ದು, ಈವರೆಗೆ ಒಟ್ಟು 2,42,229 ಜನ ಗುಣಮುಖರಾಗಿದ್ದು,    88,091 ಸಕ್ರಿಯ ಪ್ರಕರಣಗಳಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 730 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ -19 […]

ಅಪರಾಧ

ಖತರ್ ನಾಕ್ ಆನ್ ಲೈನ್ ವಂಚಕ ಸೆರೆ

ಬೆಂಗಳೂರು prajakiran.com : ಖತರ್ ನಾಕ್ ಆನ್ ಲೈನ್ ವಂಚಕನನ್ನು ಸೆರೆ ಹಿಡಿಯುವಲ್ಲಿ ಬೆಂಗಳೂರು ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ. ಬಂಧಿತನನ್ನು ನಂದೀಶರಡ್ಡಿ ಅಲಿಯಾಸ ಬಾಬು ಎಂದು ಗುರುತಿಸಲಾಗಿದೆ. ಈತ ಒಎಲ್ ಎಕ್ಸ್ ನಲ್ಲಿ 5 ಸಾವಿರ ಕಳೆದುಕೊಂಡಿದ್ದ. ಬಳಿಕ ಅದನ್ನೇ ದಂಧೆಯನ್ನಾಗಿಸಿಕೊಂಡು ವಂಚಿಸಲು ಆರಂಭಿಸಿದ. ಪ್ರತಿ ಬಾರಿಯೂ ಹೊಸ ಸಿಮ್ ಹಾಕಿ ಕಾರು ಮಾರುವುದಿದೆ. ಬೈಕ್ ಮಾರುವುದಿದೆ ಎಂದು ನಂಬಿಸಿ ಬಲೆಗೆ ಹಾಕುತ್ತಿದ್ದ. ಟೆಸ್ಟ್ ಡ್ರೈವ್ ನೆಪದಲ್ಲಿ ವಾಹನ ಸಮೇತ ಪರಾರಿಯಾಗುತ್ತಿದ್ದ. ಬೆಂಗಳೂರಿನ ತಿಲಕ್ ನಗರ ಪೊಲೀಸ್ […]

ರಾಜ್ಯ

ಡ್ರಗ್ಸ್ ಮಾಫಿಯಾ ಕುರಿತು ಸಿಸಿಬಿಯಿಂದ ತನಿಖೆ

ಹುಬ್ಬಳ್ಳಿ prajakiran.com : ಡ್ರಗ್ಸ್ ಪ್ರಭಾವಕ್ಕೆ ಚಿತ್ರರಂಗವಲ್ಲದೇ ಬಹಳಷ್ಟು  ಜನ ಒಳಗಾಗಿದ್ದಾರೆ. ಸದ್ಯ ನಾವು ಅದರ ಮೂಲವನ್ನ ಹುಡುಕುತ್ತಿದ್ದೆವೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಅವರು ಭಾನುವಾರ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಕುರಿತು ವಿವರ ನೀಡಿದರು. ಇಲ್ಲಿಯವರೆಗೆ ಕೇವಲ ಗಾಂಜಾ ವ್ಯವಹಾರ ಮಾಡೋರನ್ನ ಪೊಲೀಸರು ಅರೆಸ್ಟ್ ಮಾಡ್ತಿದ್ರು.ಈಗ ಡಾಕ್೯ ನೆಟ್ ಎನ್ನೋ ಆನಲೈನ್ ವೆಬ್ ಸೈಟ್ ನ್ನ ಭೇಧಿಸಿದ್ದೆವೆ ಎಂದರು. ಪೋಸ್ಟಲ್ ಮೂಲಕನೂ ಮಾದಕ ವಸ್ತು ಸಪ್ಲೈ ಆಗ್ತಿತ್ತು. ಅಂತರಾಜ್ಯ, ವಿದೇಶದ […]

ಅಪರಾಧ

ಡಿವೈಡರ್ ಹಾರಿ ಬಂದು ಗ್ಯಾಸ್ ಲಾರಿಗೆ ಕಾರು ಡಿಕ್ಕಿ…!

ಬೆಂಗಳೂರು prajakiran.com  :  ಡಿವೈಡರ್ ಹಾರಿ ಬಂದು ಗ್ಯಾಸ್ ಲಾರಿಗೆ ಕಾರು ಡಿಕ್ಕಿಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಸಮೀಪ ಸಂಭವಿಸಿದೆ. ಲಾರಿಗೆ ಮುಖಾಮುಖಿಯಾಗಿ ಗುದ್ದಿದ್ದರ ಪರಿಣಾಮ ಈ ಭೀಕರ ಅಪಘಾತ ಸಂಭವಿಸಿದೆ. ಸ್ಥಳದಲ್ಲೆ ಇಬ್ಬರ ದುರ್ಮರಣನ್ನಪ್ಪಿದ್ದರೆ, ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ.  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಬಾವಿಕೆರೆ ಬಳಿಯ ಮಂಗಳೂರು ನೆಲಮಂಗಲ ರಾಷ್ಟ್ರೀಯ ಹೆದ್ದಾರಿ 75 ರ ರಸ್ತೆಯಲ್ಲಿ ಈ ರ್ದುಘಟನೆ ನಡೆದಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, […]

ರಾಜ್ಯ

ಭ್ರಷ್ಟಅಧಿಕಾರಿಗಳಿಗೆ ಗಾಳ ಹಾಕಿದ ಎಸಿಬಿ

ಬೆಂಗಳೂರು prajakiran.com : ಈ ಹಿಂದೆ ಬಿಡಿಎದಲ್ಲಿದ್ದ ಎಂಎಸ್ ಎನ್ ಬಾಬು ಮನೆ ಮೇಲೆ ಬುಧವಾರ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿ ಬಿಸಿ ತಾಕಿಸಿದ್ದಾರೆ. ಬಿಡಿಎದಿಂದ ಇತ್ತೀಚೆಗೆ  ಸ್ಲಂ ಬೋರ್ಡ್ ಗೆ ವರ್ಗಾವಣೆ ಮಾಡಲಾಗಿತ್ತು. ಆದರೆ ಅಧಿಕಾರ ಸ್ವೀಕರಿಸಿರಲಿಲ್ಲ ಮತ್ತೇ ಬಿಡಿಎ ಗೆ ಮರಳಲು ಕಸರತ್ತು ನಡೆಸಿದ್ದ. ಎಸಿಬಿ ದಾಳಿ ವೇಳೆ ಲಕ್ಷ ಲಕ್ಷ ಕಂತು, ಚಿನ್ನ ಬೆಳ್ಳಿ ದೊರೆತಿವೆ. ಅಂದಾಜು 1.5 ಕೆ ಜೆ ಬಂಗಾರ 5 ಲಕ್ಷ ನಗದು, ತುಮಕೂರು, ಬೆಂಗಳೂರಿನಲ್ಲಿ […]

ರಾಜ್ಯ

ಮೃತ ಯುವಕನ ಶವ ನೀಡಲು 18 ಲಕ್ಷ ಪಾವತಿಸಿ ಎಂದ ಆಸ್ಪತ್ರೆ …!

ಬೆಂಗಳೂರು prajakiran.com : ಒಂದು ತಿಂಗಳ ಹಿಂದೆ ಅಪಘಾತಕ್ಕೀಡಾಗಿ ಆಸ್ಪತ್ರೆಗೆ ದಾಖಲಾದ ಯುವಕ ಚಿಕಿತ್ಸೆ  ಫಲಿಸದೆ ಮೃತಪಟ್ಟಿದ್ದು, ಆತನ ಶವ ನೀಡಲು 18 ಲಕ್ಷಬಿಲ್ ಪಾವತಿಸಿ ಎಂದು ಖಾಸಗಿ ಆಸ್ಪತ್ರೆಯೊಂದು ಹೇಳಿದ ಘಟನೆ ಬೆಂಗಳೂರಿನ ಕಮ್ಮನಹಳ್ಳಿಯಲ್ಲಿ ನಡೆದಿದೆ. ಇದರಿಂದಾಗಿ ಆಕ್ರೋಶಗೊಂಡ ಸಂಬಂಧಿಕರು ಆಸ್ಪತ್ರೆ ಸಿಬ್ಭಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ದೌಡು ಪರಿಸ್ಥಿತಿ ನಿಭಾಯಿಸಲು ಹರಸಾಹಸ ನಡೆಸಬೇಕಾಯಿತು. ಮೂರು ಬಾರಿ ಕರೋನಾ ನೆಗೆಟಿವ್ ಬಂದರೂ ಈಗ ಪಾಸಿಟಿವ್ ಎಂದು ಹೇಳಿರುವುದು ಅನುಮಾನಕ್ಕೆ ಕಾರಣವಾಗಿದೆ. ಕೋವಿಡ್ ಸಂದರ್ಭವನ್ನು […]