dharwad dc order
ಜಿಲ್ಲೆ

ಬೆಳೆ ವಿಮೆ ಪಡೆಯಲು 72 ಗಂಟೆಗಳಲ್ಲಿ ಮಾಹಿತಿ ನೀಡಿ

ಧಾರವಾಡ prajakiran.com :  ಜಿಲ್ಲೆಯಲ್ಲಿ 2020 ರ ಮುಂಗಾರು ಹಂಗಾಮಿಗೆ ಅನುಷ್ಟಾನಗೊಳಿಸಲಾದ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ಸ್ಥಳ ನಿರ್ದಿಷ್ಟ ಪ್ರಕೃತಿ ವಿಕೋಪಗಳಾದ (Localized calamity)ಆಲಿಕಲ್ಲು ಮಳೆ, ಭೂಕುಸಿತ, ಬೆಳೆ ಮುಳುಗಡೆ (cloud burst) ಮೇಘಸ್ಫೋಟ (Natural Fire due to lightening)  ಮತ್ತು ಗುಡುಗು-ಮಿಂಚುಗಳಿಂದಾಗಿ ಬೆಂಕಿ ಅವಘಡ (Bharati Axa General Insurance Company)  ಗಳಿಂದ ಉಂಟಾಗುವ ನಷ್ಟದ ನಿರ್ಧರಣೆಯನ್ನು ವೈಯಕ್ತಿಕವಾಗಿ ನಿರ್ಧರಿಸಿ ಬೆಳೆ ವಿಮಾ ನಷ್ಟ ಪರಿಹಾರವನ್ನು […]

ಜಿಲ್ಲೆ

ಗದಗನ ಶೇ. ೯೦ ಮಕ್ಕಳ ಕೈ ಸೇರಿದ ಪಠ್ಯಪುಸ್ತಕ

ಮಂಜುನಾಥ ಎಸ್. ರಾಠೋಡ ಗದಗprajakiran.com : ಕೊರೊನಾ ಭೀತಿಯಿಂದಾಗಿ ಶಾಲೆಗಳು ಆರಂಭವಾಗದ ಹಿನ್ನೆಲೆಯಲ್ಲಿ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಈಗಾಗಲೇ ಜಿಲ್ಲೆಯಲ್ಲಿ ಮಕ್ಕಳ ಮನೆಗಳಿಗೆ ಪಠ್ಯ ಪುಸ್ತಕಗಳನ್ನು ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ೨೦೨೦-೨೧ನೇ ಸಾಲಿಗೆ ಅಗತ್ಯವಿರುವ ಎಲ್ಲ ಪಠ್ಯಪುಸ್ತಕಗಳನ್ನು ಕರ್ನಾಟಕ ಪಠ್ಯಪುಸ್ತಕ ಸಂಘದಿಂದ ೧ರಿಂದ ೧೦ನೇ ತರಗತಿವರೆಗಿನ ಸರ್ಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಉಚಿತವಾಗಿ ಪಠ್ಯಪುಸ್ತಕಗಳನ್ನು ವಿತರಿಸುತ್ತಿದೆ. ಗದಗ ಶೈಕ್ಷಣಿಕ ಜಿಲ್ಲೆಯಲ್ಲಿ ಈಗಾಗಲೇ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮಕ್ಕಳಿಗೆ ಪುಸ್ತಕಗಳು ಬಂದಿವೆ. […]

ಜಿಲ್ಲೆ

ಧಾರವಾಡದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ

ಧಾರವಾಡ prajakiran.com : ಧಾರವಾಡ ತಾಲೂಕಿನ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಧಾರವಾಡ ಕ್ಷೇತ್ರ ಸಂಪನ್ಮೂಲ ಕೇಂದ್ರ ಶಹರವಲಯದ  ಆಶ್ರಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರತಿಭಾ ಪುರಸ್ಕಾರ ಮಾಡಿ ಗೌರವಿಸಲಾಯಿತು.  ತಾಲೂಕಿಗೆ ಬಂದ ಪ್ರಥಮ ಆದಿತ್ಯ ಭಟ್ (೬೨೦ ಅಂಕ) ಬಾಲಬಳಗ ಸೃಜನ ಶೀಲ ಆಂಗ್ಲ ಮಾಧ್ಯಮ ಶಾಲೆ,  ದ್ವಿತೀಯ ಅಂಕಿತ ಪಾಟೀಲ (೬೧೯ ಅಂಕ) ಕೆ ಇ ಬೋರ್ಡ್ ಆಂಗ್ಲ ಮಾಧ್ಯಮ ಶಾಲೆ, ತೃತೀಯ ಎಸ್ ಧರಣಿ (೬೧೮ ಅಂಕ) ಪವನ […]

ಜಿಲ್ಲೆ

ಕಾಳಸಂತೆಯಲ್ಲಿ ಗೊಬ್ಬರ ಮಾರಾಟ ಮಾಡಿದರೆ ಅಂಗಡಿ ಸೀಜ್

ಮಾನ್ಯತೆ ರದ್ದು ಮಾಡುವ ಎಚ್ಚರಿಕೆ ಎಂಆರ್‌ಪಿ ದರ ರೂ.೨೬೬ ಗಿಂತ ಹೆಚ್ಚಿನ ದರಕ್ಕೆ  ಮಾರುವಂತಿಲ್ಲ ಧಾರವಾಡ prajakiran.com : ಜಿಲ್ಲೆಯ ರೈತರಿಗೆ ಅಗತ್ಯಕ್ಕೆ ಅನುಗುಣವಾಗಿ ರಸಗೊಬ್ಬರ ಪೂರೈಸಲು ಕ್ರಮಕೈಗೊಳ್ಳಲಾಗಿದ್ದು, ರೈತರು ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ. ಎಂ.ಸಿ.ಎಫ್. ಕಂಪನಿಯ ಯೂರಿಯಾ ರಸಗೊಬ್ಬರವನ್ನು ಆಗಸ್ಟ್ ೧೩ ರಂದು ಧಾರವಾಡ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿರುವ ರಸಗೊಬ್ಬರ ಅಂಗಡಿ ಮತ್ತು ಸಹಕಾರಿ ಸಂಸ್ಥೆಗಳಿಗೆ ಸುಮಾರು ೫೪೧ ಮೆ.ಟನ್ ರಸಗೊಬ್ಬರ ಪೂರೈಸಲಾಗಿದೆ.  ರಸಗೊಬ್ಬರ ಪೂರೈಕೆ ಕುರಿತು ದೂರುಗಳಿದ್ದಲ್ಲಿ ಜಿಲ್ಲಾಧಿಕಾರಿಗಳ […]

ಜಿಲ್ಲೆ

ಧಾರವಾಡ ಸಮಾಜ ಪುಸ್ತಕಾಲಯದ ರವೀಂದ್ರ ಘಾಣೇಕರ ಇನ್ನಿಲ್ಲ

ಧಾರವಾಡ prajakiran.com : ಕರ್ನಾಟಕದ ಪ್ರಮುಖ ಪ್ರಕಾಶನ ಸಂಸ್ಥೆಗಳಲ್ಲಿ ಒಂದಾದ ಧಾರವಾಡದ ಸಮಾಜ ಪುಸ್ತಕಾಲಯದ ರವೀಂದ್ರ ಭಾಲಚಂದ್ರ ಘಾಣೇಕರ ಆ. ೧೨ರಂದು ಬುಧವಾರ ನಿಧನ ಹೊಂದಿದರು. ಕಳೆದ ಎಂಟು ದಶಕಗಳಿಂದ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ ದ ಗಮನಾರ್ಹ ಸೇವೆಯನ್ನು ಸಮಾಜ ಪುಸ್ತಕಾಲಯ ತನ್ನ ಪ್ರಕಾಶನ, ಪುಸ್ತಕ ಮಾರಾಟ, ಮುದ್ರಣಗಳ ಮೂಲಕ ಮಾಡುತ್ತ ಬಂದಿದೆ. ರವೀಂದ್ರ ಘಾಣೇಕರರು ೧೯೪೨ ಮೇ ೦೮ ರಂದು ಬನವಾಸಿಯಲ್ಲಿ ಹುಟ್ಟಿದ್ದರು. ಧಾರವಾಡ ಟ್ರೇನಿಂಗ್ ಶಾಲೆಯಲ್ಲಿ ತಮ್ಮ ಮೆಟ್ರಿಕ್ ಮುಗಿಸಿ ಮದ್ರಾಸಗೆ ಹೋಗಿ […]

ಜಿಲ್ಲೆ

ಗ್ರಾಮೀಣ ಶಿಕ್ಷಕರ ಸಂಘದ ಚಿತ್ರದುರ್ಗ ಜಿಲ್ಲಾಧ್ಯಕ್ಷರಾಗಿ ಜಗದೀಶ ಯಾದವ್

ಚಿತ್ರದುರ್ಗ prajakiran.com : ಜಿಲ್ಲೆಯ ಹಿರಿಯೂರ ತಾಲೂಕಿನ ಕರಿಯೋಬನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಜಗದೀಶ ಯಾದವ್ ಅವರನ್ನು ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚಿತ್ರದುರ್ಗ ಜಿಲ್ಲಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಸಂಘದ ರಾಜ್ಯಾಧ್ಯಕ್ಷರಾದಅಶೋಕ.ಎಮ್.ಸಜ್ಜನ.ರಾಜ್ಯ ಪ್ರ.ಕಾ.ಮಲ್ಲಿಕಾರ್ಜುನ ಉಪ್ಪಿನ  ನೇಮಕ ಮಾಡಿದ್ದಾರೆ. ಸಂಘದ ಪದಾಧಿಕಾರಿಗಳಾದ ಆರ್.ಎಮ್.ಕಮ್ಮಾರ.ಧರ್ಮಣ್ಣ ಭಜಂತ್ರಿ.ವಾಯ್.ಎಚ್.ಮಾಚೇನಹಳ್ಳಿ.ಈರಣ್ಣ ಸೊರಟೂರ ನಾಗರಾಜ ಆತಡಕರ ಅಭಿನಂದಂದಿಸಿ ಶುಭ ಕೋರಿದ್ದಾರೆ. Share on: WhatsApp

ಜಿಲ್ಲೆ

ದ.ಕ. ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷೆಯಾಗಿ ಮಂಜುಳಾ ನೇಮಕ

ಹುಬ್ಬಳ್ಳಿ prajakiran.com : ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷೆಯಾಗಿ ಬೆಳ್ತಂಗಡಿ ತಾಲೂಕಿನ ಉಜಿರೆ ಪಟ್ಟಣದ ಗುರಿಪಳ್ಳ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಯರಾದ ಶ್ರೀಮತಿ ಮಂಜುಳ.ಜೆ.ಟಿ ಅವರನ್ನು ನೇಮಕ ಮಾಡಲಾಗಿದೆ. ರಾಜ್ಯಾಧ್ಯಕ್ಷರಾದ ಅಶೋಕ.ಎಮ್.ಸಜ್ಜನ.ರಾಜ್ಯ ಪ್ರ.ಕ.ಮಲ್ಲಿಕಾರ್ಜುನ ಉಪ್ಪಿನ ಈ ನೇಮಕ ಮಾಡಿದ್ದಾರೆ. ಇವರಿಗೆ ರಾಜ್ಯ ಪದಾಧಿಕಾರಿಗಳಾದ ನಾಡೋಜ ಮಹೇಶ ಜೋಶಿ ಎಮ್.ವಿ. ಕುಸುಮಾ ಜಿ.ಟಿ.ಲಕ್ಷ್ಮಿದೇವಮ್ಮ ಎಲ್.ಆಯ್.ಲಕ್ಕಮ್ಮನವರ ಮುಂತಾದವರು ಅಭಿನಂದಿಸಿದ್ದಾರೆ. Share on: WhatsApp

ಜಿಲ್ಲೆ

ಕೊರೊನಾ ಮುಕ್ತ ಭಾರತಕ್ಕಾಗಿ ಹುಬ್ಬಳ್ಳಿ ಸಿದ್ಧಾರೂಢರ ಮಠಕ್ಕೆ ಪಾದಯಾತ್ರೆ

ಧಾರವಾಡ prajakiran.com : ಕೊರೊನಾ ಮುಕ್ತ ಭಾರತಕ್ಕಾಗಿ ಪ್ರಾರ್ಥಿಸಿ ನಗರದ ಕಿರಣ ಗೆಳೆಯರ ಬಳಗದಿಂದ ಆ.೧೬ ರಂದು ಹುಬ್ಬಳ್ಳಿಯ ಸಿದ್ಧಾರೂಢರ ಮಠಕ್ಕೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಬಳಗದ ಕಿರಣ ಹಾವಣಗಿ ತಿಳಿಸಿದ್ದಾರೆ. ತಮ್ಮ ತಮ್ಮ ಉದ್ಯೋಗಗಳ ಜೊತೆ ಜೊತೆಗೆ ಸಾಮಾಜಿಕ ಕಾರ್ಯಕ್ಕೆ, ಸಮಾಜದ ಏಳಿಗೆಗಾಗಿ ತಮ್ಮ ಅಳಿಲು ಸೇವೆ ಸಲ್ಲಿಸುತ್ತಿರುವ ಧಾರವಾಡದ ಕಿರಣ ಗೆಳೆಯರ ಬಳಗ ಕೊರೊನಾ ಮುಕ್ತ ಭಾರತಕ್ಕಾಗಿ ಪ್ರಾರ್ಥಿಸಿ ಶ್ರಾವಣ ಕಡೆಯ ಸೋಮವಾರ ಧಾರವಾಡದಿಂದ ಆ.೧೬ರಂದು ಸಂಜೆ ೬.೩೦ಕ್ಕೆ ಹುಬ್ಬಳ್ಳಿ ಸಿದ್ಧಾರೂಢ ಅಜ್ಜನ ಮಠಕ್ಕೆ […]

ಜಿಲ್ಲೆ

ಧಾರವಾಡದ ನಿವೃತ್ತ ಪ್ರಿನ್ಸಿಪಾಲರಾಗಿದ್ದ ಪ್ರೊ. ಬಿ.ಬಿ. ಮಾಶಾಳ ಇನ್ನಿಲ್ಲ

ಧಾರವಾಡ prajakiran.com : ಇಲ್ಲಿನ ವಿನಾಯಕ ನಗರದ ನಿವಾಸಿ ಹಾಗೂ ನಿವೃತ್ತ ಪ್ರಿನ್ಸಿಪಾಲರಾಗಿದ್ದ ಪ್ರೊ. ಬಿ.ಬಿ. ಮಾಶಾಳ (70) ಅವರು ಆ.10 ರಂದು ಸೋಮವಾರ ರಾತ್ರಿ ನಿಧನ ಹೊಂದಿದರು. ಅವರು ಕಳೆದ ಹಲವು ದಿನಗಳಿಂದ ಅನಾರೋಗ್ಯ ಬಳಲುತ್ತಿದ್ದರು. ಚಿಕಿತ್ಸೆ ಫಲಿಸದೆ ವಿಧಿವಶರಾಗಿದ್ದಾರೆ. ಅವರು ಪತ್ನಿ, ಪುತ್ರ ಮಹೇಶ ಮಾಶಾಳ, ಪುತ್ರಿ ಸೇರಿದಂತೆ ಅಪಾರ ಬಳಗ ಮತ್ತು ಶಿಷ್ಯ ಸಮೂಹವನ್ನು ಅಗಲಿದ್ದಾರೆ. ಅವರು ಈ ಹಿಂದೆ ಕೆ.ಎಲ್.ಇ.ಸಂಸ್ಥೆಯ ಕಾಲೇಜಿನ ಪ್ರಾಚಾರ್ಯ, ನಗರದ ಕಾಸ್ಮಸ್ ಕ್ಲಬ್‌ ಅಧ್ಯಕ್ಷ,  ಎಲ್ಇಎ ಸಂಸ್ಥೆಯ […]

ಜಿಲ್ಲೆ

ಕೊನೆಗೂ ಬೋಗೂರ, ಮಾದನಬಾವಿಗೆ ಭೇಟಿ ನೀಡಿದ ಧಾರವಾಡ ಜಿಲ್ಲಾ ಮಕ್ಕಳ ರಕ್ಷಣಾ ಘಟಕ

ಧಾರವಾಡ prajakiran.com :  ಧಾರವಾಡ ತಾಲೂಕಿನ ಮಾದನಬಾವಿಯಲ್ಲಿ ಮೇ 21ರಂದು ಬೋಗೂರ ಗ್ರಾಮದಲ್ಲಿ ಆ. 2ರಂದು ಅತ್ಯಾಚಾರಕ್ಕೊಳಗಾಗಿ ನೊಂದು ಆತ್ಮಹತ್ಯೆಗೆ ಶರಣಾದ ಅಪ್ರಾಪ್ತ ಬಾಲಕಿಯರ ನಿವಾಸಕ್ಕೆ ಧಾರವಾಡ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಅಧಿಕಾರಿಗಳು ನಿನ್ನೆ ಆಗಸ್ಟ್ ೧೦ ರಂದು ಭೇಟಿ ನೀಡಿದ್ದಾರೆ. ಘಟನೆ ನಡೆದ ದಿನ ಇಲ್ಲವೇ ಘಟನೆ ನಡೆದ ನಂತರ ಮಾಹಿತಿ ಪಡೆದು ಕೂಡಲೇ ಸ್ಪಂದಿಸಬೇಕಾಗಿದ್ದ ಇಲಾಖೆಯೇ ಧಾರವಾಡ ಜಿಲ್ಲೆಯಾದ್ಯಂತ ಪ್ರತಿಭಟನೆ ಬಲಗೊಂಡ ನಂತರ ಎಚ್ಚೆತ್ತುಕೊಂಡಿರುವುದು ಮಕ್ಕಳ ಹಕ್ಕುಗಳ ಹೋರಾಟಗಾರರಿಗೆ ತೀವ್ರ ನೋವುಂಟು ಮಾಡಿದೆ ಎಂದು […]