ಜಿಲ್ಲೆ

ಧಾರವಾಡದ ನಿವೃತ್ತ ಪ್ರಿನ್ಸಿಪಾಲರಾಗಿದ್ದ ಪ್ರೊ. ಬಿ.ಬಿ. ಮಾಶಾಳ ಇನ್ನಿಲ್ಲ

ಧಾರವಾಡ prajakiran.com : ಇಲ್ಲಿನ ವಿನಾಯಕ ನಗರದ ನಿವಾಸಿ ಹಾಗೂ ನಿವೃತ್ತ ಪ್ರಿನ್ಸಿಪಾಲರಾಗಿದ್ದ ಪ್ರೊ. ಬಿ.ಬಿ. ಮಾಶಾಳ (70) ಅವರು ಆ.10 ರಂದು ಸೋಮವಾರ ರಾತ್ರಿ ನಿಧನ ಹೊಂದಿದರು.

ಅವರು ಕಳೆದ ಹಲವು ದಿನಗಳಿಂದ ಅನಾರೋಗ್ಯ ಬಳಲುತ್ತಿದ್ದರು. ಚಿಕಿತ್ಸೆ ಫಲಿಸದೆ ವಿಧಿವಶರಾಗಿದ್ದಾರೆ.

ಅವರು ಪತ್ನಿ, ಪುತ್ರ ಮಹೇಶ ಮಾಶಾಳ, ಪುತ್ರಿ ಸೇರಿದಂತೆ ಅಪಾರ ಬಳಗ ಮತ್ತು ಶಿಷ್ಯ ಸಮೂಹವನ್ನು ಅಗಲಿದ್ದಾರೆ.

ಅವರು ಈ ಹಿಂದೆ ಕೆ.ಎಲ್.ಇ.ಸಂಸ್ಥೆಯ ಕಾಲೇಜಿನ ಪ್ರಾಚಾರ್ಯ, ನಗರದ ಕಾಸ್ಮಸ್ ಕ್ಲಬ್‌ ಅಧ್ಯಕ್ಷ,  ಎಲ್ಇಎ ಸಂಸ್ಥೆಯ ಕಾರ್ಯದರ್ಶಿ, ರೋವಸ್೯ ಕ್ಲಬ್‌ ಅಧ್ಯಕ್ಷ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.

ಶೈಕ್ಷಣಿಕ ಕ್ಷೇತ್ರದಲ್ಲಿ  ಅಪಾರ ಅನುಭವ ಹೊಂದಿದ್ದ ಪ್ರೊ. ಮಾಶಾಳ, ಅಡೆಪ್ಡ್ ಫೌಂಡೇಶನ್ ಸ್ಥಾಪಿಸಿ ಹಲವು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *