dharwad dc order
ಜಿಲ್ಲೆ

ಬೆಳೆ ವಿಮೆ ಪಡೆಯಲು 72 ಗಂಟೆಗಳಲ್ಲಿ ಮಾಹಿತಿ ನೀಡಿ

ಧಾರವಾಡ prajakiran.com :  ಜಿಲ್ಲೆಯಲ್ಲಿ 2020 ರ ಮುಂಗಾರು ಹಂಗಾಮಿಗೆ ಅನುಷ್ಟಾನಗೊಳಿಸಲಾದ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ಸ್ಥಳ ನಿರ್ದಿಷ್ಟ ಪ್ರಕೃತಿ ವಿಕೋಪಗಳಾದ (Localized calamity)ಆಲಿಕಲ್ಲು ಮಳೆ, ಭೂಕುಸಿತ, ಬೆಳೆ ಮುಳುಗಡೆ (cloud burst) ಮೇಘಸ್ಫೋಟ (Natural Fire due to lightening)  ಮತ್ತು ಗುಡುಗು-ಮಿಂಚುಗಳಿಂದಾಗಿ ಬೆಂಕಿ ಅವಘಡ (Bharati Axa General Insurance Company)  ಗಳಿಂದ ಉಂಟಾಗುವ ನಷ್ಟದ ನಿರ್ಧರಣೆಯನ್ನು ವೈಯಕ್ತಿಕವಾಗಿ ನಿರ್ಧರಿಸಿ ಬೆಳೆ ವಿಮಾ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸಲು ಅವಕಾಶ ಒದಗಿಸಲಾಗಿದೆ.

ಬೆಳೆ ವಿಮೆ ಯೋಜನೆಯಡಿ ನೊಂದಾಯಿತ ರೈತರು ಇದರ ಪ್ರಯೋಜನ ಪಡೆಯಲು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ .

ಇಂತಹ ಸ್ಥಳೀಯ ಗಂಡಾಂತರಗಳಿಂದ ಬೆಳೆ ನಷ್ಟ ಸಂಭವಿಸಿದರೆ, ಬೆಳೆ ವಿಮೆ ನೋಂದಣಿ ಮಾಡಿಸಿರುವ ರೈತರು ತಾಲ್ಲೂಕವಾರು ಪ್ರತಿನಿಧಿಗಳನ್ನು ,ಕೃಷಿ ಇಲಾಖೆಯ ಅಧಿಕಾರಿಗಳನ್ನು ಬೆಳೆಯ ವಿವರ, ಹಾನಿಯ ವ್ಯಾಪ್ತಿ ಹಾಗೂ ಹಾನಿಯ ಕಾರಣಗಳೊಂದಿಗೆ 72 ಗಂಟೆಯೊಳಗಾಗಿ ಸಂಪರ್ಕಿಸಬೇಕು. 

ಹೆಚ್ಚಿನ ವಿವರಗಳಿಗಾಗಿ ಮತ್ತು ಮಾರ್ಗಸೂಚಿಗಳಿಗಾಗಿ ಭಾರತಿ ಆ್ಯಕ್ಸಾ ಜನರಲ್ ಇನ್ಸುರನ್ಸ ಕಂಪನಿ (Bharati Axa General Insurance Company), ತಾಲ್ಲೂಕವಾರು ಪ್ರತಿನಿಧಿಗಳು ಅಥವಾ ಕೃಷಿ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಲು ವಿನಂತಿಸಲಾಗಿದೆ

ಬೆಳೆ ವಿಮೆ ಯೋಜನೆಯಡಿ ನೊಂದಾಯಿತ ಧಾರವಾಡ ತಾಲ್ಲೂಕಿನ ರೈತರು ವಿಶ್ವನಾಥ ಹಿರೇಮಠ (ಮೊ : 8105852864), ಹುಬ್ಬಳ್ಳಿ ತಾಲೂಕಿನ ರೈತರು ಚನ್ನಬಸವ ಮೊರಬದ(ಮೊ :9902052740), ಕುಂದಗೋಳ ತಾಲೂಕಿನ ರೈತರು ಉಮೇಶ ಸುಣಗಾರ(ಮೊ :8618672546), ನವಲಗುಂದ ತಾಲೂಕಿನ ರೈತರು ಶಂಕರ ಪಾಟೀಲ (ಮೊ :9590928886) ಹಾಗೂ ಭಾರತಿ ಆ್ಯಕ್ಸಾ ಜನರಲ್ ಇನ್ಸುರನ್ಸ ಕಂಪನಿ (Bharati Axa General Insurance Company), ಸೆಂಟ್ರಲ್ ಬಿಲ್ಡಿಂಗ್, ರಿಲಾಯನ್ಸ್ ಡಿಜಿಟಲ್ ಕಟ್ಟಡ ಮೇಲೆ, ವಿದ್ಯಾನಗರ ಹುಬ್ಬಳ್ಳಿ ಇಲ್ಲಿಗೆ ಸಂಪರ್ಕಿಸಬೇಕೆಂದು ಧಾರವಾಡ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *