ರಾಜ್ಯ

ಧಾರವಾಡದಲ್ಲಿ ಮತ್ತೊಂದು ರಸಗೊಬ್ಬರ ಅಂಗಡಿ ಪರವಾನಗಿ ಅಮಾನತು

ಧಾರವಾಡ prajakiran.com : ರಸಗೊಬ್ಬರ ಮಾರಾಟ ಪರವಾನಗಿ ಹೊಂದಿದ ಕೆಲವು ವಿತರಕರು ರಸಗೊಬ್ಬರ ನಿಯಂತ್ರಣ ಕಾಯ್ದೆ 1985 ರ ಉಲ್ಲಂಘನೆ ಮಾಡಿ ರೈತರ ಹೆಸರಿಲ್ಲಿ ಅಧಿಕ ರಸಗೊಬ್ಬರ ಮಾರಾಟ ಮಾಡಿರುವ ಅಂಶ ಕಂಡು ಬಂದಿದೆ.

ಹಿನ್ನೆಲೆಯಲ್ಲಿ  ಧಾರವಾಡದ ಕೃಪಾ ಅಗ್ರೋ ಇಂಡಸ್ಟ್ರೀಸ್ ಕಾರ್ಪೊರೇಷನ್ ಅವರ ರಸಗೊಬ್ಬರ ವಿತರಕರ ಮಾರಾಟ ಪರವಾನಿಗೆಯನ್ನ  ತಕ್ಷಣದಿಂದಲೇ ಅಮಾನತ್ತುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ತಿಳಿಸಿದ್ದಾರೆ.

ಕಾಳಸಂತೆಯಲ್ಲಿ ಯೂರಿಯಾ ಮಾರಾಟವಾಗುವುದನ್ನು ತಡೆಯಲು ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆಯು ರಸಗೊಬ್ಬರ  ವಿತರಕರು ,ಚಿಲ್ಲರೆ ಮಾರಾಟಗಾರರ ಮೇಲೆ ಕಣ್ಗಾವಲಿರಿಸಿದೆ.

ಕೃಷಿ ಇಲಾಖೆಯ ಪರಿವೀಕ್ಷಕರ ತಂಡಗಳು ಹಾಗೂ ತಹಸೀಲ್ದಾರ್‌ಗಳು ಜಂಟಿಯಾಗಿ ಪರಿವೀಕ್ಷಣೆ ನಡೆಸಿ ಅತೀಹೆಚ್ಚು ಯೂರಿಯಾ ರಸಗೊಬ್ಬರ ಖರೀದಿಮಾಡಿದ ರೈತರನ್ನು ಗುರುತಿಸಿದೆ.

ರೈತರು ಹೊಂದಿರುವ ಭೂಮಿಗಿಂತ ಹೆಚ್ಚು ಯೂರಿಯಾವನ್ನು ವಿತರಕರು ಮಾರಾಟ ಮಾಡಿದ್ದು ಕಂಡುಬಂದ ಹಿನ್ನೆಲೆಯಲ್ಲಿ  ಅಮಾನತುಗೊಳಿಸಲಾಗಿದೆ.

ಶನಿವಾರ ಹತ್ತು ಮಾರಾಟಗಾರರ ಪರವಾನಗಿ ಅಮಾನತ್ತುಗೊಳಿಸಲಾಗಿತ್ತು. ಭಾನುವಾರ ಮತ್ತೊಂದು ಪರವಾನಿಗೆ ಅಮಾನತ್ತಾಗಿದೆ. ಆ ಮೂಲಕ ಜಿಲ್ಲೆಯ 11 ರಸಗೊಬ್ಬರ ಅಂಗಡಿಗಳ ಪರವಾನಿಗೆ ಅಮಾನತುಗೊಂಡತಾಗಿದೆ.

ಅಲ್ಲದೆ, ಕೃಷಿ ಇಲಾಖೆಯ ಪರಿವೀಕ್ಷಕರ ತಂಡ ಜಿಲ್ಲೆಯ ಎಲ್ಲ  ರಸಗೊಬ್ಬರ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲಿಸುವ ಕಾರ್ಯ ಮುಂದುವರೆಸಲಿದೆ.

ತಪ್ಪಿತಸ್ಥರ ವಿರುದ್ಧ ರಸಗೊಬ್ಬರ ನಿಯಂತ್ರಣ ಕಾಯ್ದೆಯಡಿ ಸೂಕ್ತ ಕಾನೂನಿನ ಕ್ರಮ ಕೈಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *