prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
ಅಂತಾರಾಷ್ಟ್ರೀಯ

ತೌಕ್ತೆ ಚಂಡಮಾರುತ : ಮೃತರ ಕುಟುಂಬಕ್ಕೆ 4 ಲಕ್ಷ ರೂ. ಪರಿಹಾರ

ಅಹಮದಾಬಾದ್ prajakiran.com : ‘ತೌಕ್ತೆ’ ಚಂಡಮಾರುತದಿಂದ ಮೃತಪಟ್ಟವರ ಕುಟುಂಬಗಳಿಗೆ ತಲಾ 4 ಲಕ್ಷ ರೂ. ಪರಿಹಾರ ನೀಡುವುದಾಗಿ ಗುಜರಾತ್ ಸರ್ಕಾರ ಘೋಷಿಸಿದೆ. ಈ ಕುರಿತು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಮಾಹಿತಿ ನೀಡಿದ್ದು, ‘ತೌಕ್ತೆ’ ಚಂಡಮಾರುತದ ಅಬ್ಬರಕ್ಕೆ ಸಿಲುಕಿ ಗಾಯಗೊಂಡವರಿಗೆ 50 ಸಾವಿರ ರೂ. ನೀಡುವುದಾಗಿ ಹೇಳಿದ್ದಾರೆ. ಗುಜರಾತ್ ಸರ್ಕಾರದ ವರದಿ ಪ್ರಕಾರ 45 ಜನರು ‘ತಾಕ್ತೆ’ ಅಬ್ಬರಕ್ಕೆ ಜೀವ ಕಳೆದುಕೊಂಡಿದ್ದಾರೆ. ಬುಧವಾರ ಪ್ರಧಾನಿ ನರೇಂದ್ರ ಮೋದಿ ಗುಜರಾತ್​ಗೆ ಭೇಟಿ, ಚಂಡಮಾರುತದಿಂದ ಉಂಟಾದ ಹಾನಿಯ ವೈಮಾನಿಕ ಸಮೀಕ್ಷೆ […]

ಅಂತಾರಾಷ್ಟ್ರೀಯ

ಸಿಡಿಲು ಬಡಿದು ಪ್ರಜ್ಞೆ ತಪ್ಪಿದವನ ಎಚ್ಚರ ಮಾಡಲು ಸಗಣಿಯಲ್ಲಿ ಹೂತ ಜನ….!

ಛತ್ತಿಸಗಡ prajakiran. com : ಸಿಡಿಲ ಬಡಿತದಿಂದ ಪ್ರಜ್ಞೆ ಕಳೆದುಕೊಂಡವನಿಗೆ ಸಗಣಿ ಗುಂಡಿಯಲ್ಲಿ ಸಮಾಧಿ ಮಾಡಿದರೆ ಮರುಜೀವ ನೀಡಬಹುದೆಂಬ ಮೂಡನಂಬಿಕೆಯಿಂದ ಕುಟುಂಬ, ಇದೀಗ ಮನೆಯ ಸದಸ್ಯನನ್ನೇ ಕಳೆದುಕೊಂಡಿದೆ. ಈ ಅಮಾನವೀಯ ಘಟನೆ ನಡೆದಿರುವುದು ಛತ್ತೀಸ್​ಗಢದ ಸರ್ಗುಜಾ ಜಿಲ್ಲೆಯಲ್ಲಿ. ಲಖನ್​ಪುರ್​ ಮಟ್ಕಿ ಎಂಬುವಾತನೇ ಮೃತ ದುರ್ದೈವಿ. ಮಟ್ಕಿ ಅವರು ತನ್ನ ಮನೆಯ ಮುಂದೆ ನಿಂತಿದ್ದಾಗ ಸಿಡಿಲು ಬಡಿದೆ. ಸಿಡಿಲು ಬಡಿತದಿಂದ ಗಂಭೀರ ಗಾಯಗೊಂಡು ಪ್ರಜ್ಞೆ ತಪ್ಪಿದ್ದಾರೆ. ಮಟ್ಕಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯದೆ, ಸಗಣಿ ರಾಶಿಯಲ್ಲಿ ತಲೆ ಭಾಗವನ್ನು ಮಾತ್ರ […]

ಅಂತಾರಾಷ್ಟ್ರೀಯ

ಕೊರೋನಾ ನಿಯಂತ್ರಣಕ್ಕೆ ಖಾಸಗಿ ಆಸ್ಪತ್ರೆಗಳ ಸಹಭಾಗಿತ್ವ ಅವಶ್ಯ : ಸಚಿವ ಪ್ರಹ್ಲಾದ್ ಜೋಶಿ

ಧಾರವಾಡ prajakiran.com : ಮಹಾಮಾರಿ ಕೊರೋನಾ ಎರಡನೇ ಅಲೆಯು ವ್ಯಾಪಕವಾಗಿ ಹರಡುತ್ತಿದ್ದು, ಸಾವಿನ ಪ್ರಮಾಣ ಹೆಚ್ಚುತ್ತಿದೆ. ಕೊರೋನಾ ನಿಯಂತ್ರಣಕ್ಕೆ ಹಾಗೂ ಸೋಂಕಿತರಿಗೆ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳ ಸಹಭಾಗಿತ್ವ ಅಗತ್ಯ ಹಾಗೂ ಅನಿವಾರ್ಯವಾಗಿದೆ ಎಂದು ಕೇಂದ್ರ ಸಚಿವ ಹಾಗೂ ಲೋಕಸಭಾ ಸದಸ್ಯ ಪ್ರಹ್ಲಾದ್ ಜೋಶಿ ಹೇಳಿದರು. ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಮಧ್ಯದ ಸತ್ತೂರ ಬಳಿಯ ಶ್ರೀ ಸತ್ಯ ಸಾಯಿ ಕಾಲೇಜ್ ಆಫ್ ಹೋಮಿಯೋಪಥಿಕ್ ಮೆಡಿಕಲ್ ಸೈನ್ಸ್ ಕಾಲೇಜಿನಲ್ಲಿ ಕೋವಿಡ್ ಕೇರ್ ಸೆಂಟರ್ ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬರೂ ಜಾಗೃತರಾಗಿರಬೇಕು. […]

ರಾಜ್ಯ

ರಾಜ್ಯದ ವಕೀಲರ ಹಿತ ಕಾಯಲು 100 ಕೋಟಿ ನೀಡಲು ಒತ್ತಾಯ

ಧಾರವಾಡ prajakiran.com : ಕೊವಿಡ್ -19‌ ವೈರಸ್ ಪರಿಣಾಮವಾಗಿ ಕಳೆದ ವರ್ಷವೂ ಕೇಲವೇ ದಿನಗಳು ಮಾತ್ರ ಕಾರ್ಯಲಾಪಗಳು ನಡೆದವು. ಅಲ್ಲದೇ ಅಧಿವಿಚಾರಣಾ ನ್ಯಾಯಾಲಯಗಳಲ್ಲಿ ದಿನಕ್ಕೆ 20-30 ಪ್ರಕರಣಗಳನ್ನು ಮಾತ್ರ ನಡೆಸುವುದಕ್ಕೆ ನಿರ್ಧರಿಸಲಾಗಿತ್ರು. ಈ ವರ್ಷವೂ ಕೂಡಾ ಹಲವು ಷರತ್ತುಗಳ ಹಾಗೂ ನಿರ್ಬಂಧಗಳ ಅನ್ವಯ ನ್ಯಾಯಾಲಯದ ಕಾರ್ಯಕಲಾಪಗಳು ನಡೆಯುತ್ತಿದ್ದವು. ಈ ಎರಡನೇ ಅಲೇಯ ಪರಿಣಾಮವಾಗಿ ಸರಕಾರ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ನ್ಯಾಯಾಲಯದ ಕಾರ್ಯಕಲಾಪಗಳು ಸುಗಮವಾಗಿ ಹಾಗೂ ಸರಾಗವಾಗಿ ನಡೆದಲ್ಲಿ ಮಾತ್ರ ಪಕ್ಷಗಾರರು ನ್ಯಾಯಾಲಯಕ್ಕೆ ಬರಲು ಅನುಕೂಲವಾಗುತ್ತದೆ. ಅಲ್ಲದೇ […]

ರಾಜ್ಯ

ರಾಜ್ಯದಲ್ಲಿ ಬುಧವಾರ 49,953 ಜನ ಕರೋನಾದಿಂದ ಗುಣಮುಖ

ಬುಧವಾರವು 34,281 ಕರೋನಾ ಪಾಸಿಟಿವ್ ರಾಜ್ಯದಲ್ಲಿ 468 ಜನ ಸಾವು ಬೆಂಗಳೂರು prajakiran.com : ರಾಜ್ಯದಲ್ಲಿ ಕೊರೋನಾ ಎರಡನೇ ಅಲೆಯ ಅಬ್ಬರಕ್ಕೆ ಬುಧವಾರ ಬರೋಬ್ಬರಿ 468 ಜನ ಸಾವನ್ನಪ್ಪಿದ್ದಾರೆ. ಇವತ್ತು ಒಂದೇ ದಿನ ರಾಜ್ಯದಲ್ಲಿ 34,281 ಕೊರೋನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ರಾಜ್ಯದಲ್ಲಿ ಆ ಮೂಲಕ ಈವರೆಗೆ ಒಟ್ಟು ಸೋಂಕಿತರ ಸಂಖ್ಯೆ 23,06,655 ಕ್ಕೆ ಏರಿಕೆಯಾಗಿದೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ಪ್ರಕಾರ ಬುಧವಾರ ರಾಜ್ಯದಲ್ಲಿ 34,281 ಜನರಲ್ಲಿ […]

ಜಿಲ್ಲೆ

ಧಾರವಾಡದಲ್ಲಿ ಬುಧವಾರ 582 ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆ

ಧಾರವಾಡ ಜಿಲ್ಲೆಯಲ್ಲಿ 871 ಸೋಂಕಿತರು, 10 ಜನ ಸಾವು ಧಾರವಾಡ prajakiran.com : ಧಾರವಾಡ ಜಿಲ್ಲೆಯ ಕರೋನಾ ಪಾಸಿಟಿವ್ ಪ್ರಕರಣ ದಿನದಿಂದ ದಿನಕ್ಕೆ ಏರುತ್ತಲೇ ಸಾಗಿದೆ. ಸೋಂಕಿತರ ಸಂಖ್ಯೆ ಬುಧವಾರ ಮತ್ತೆ ಕಡಿಮೆಯಾಗಿದೆ. ಇಂದು ಮತ್ತೆ 871 ಜನರಿಗೆ ಕರೋನಾ ಪಾಸಿಟಿವ್ ಬಂದಿದೆ. ದುರಂತದ ಸಂಗತಿಯೆಂದರೆ ಇಂದು ಬರೋಬ್ಬರಿ 10 ಸೋಂಕಿತರು ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾರೆ. ಧಾರವಾಡದ ಎಸ್ ಡಿಎಂ ನಲ್ಲಿ ಇಬ್ಬರು ಹಾಗೂ ಹುಬ್ಬಳ್ಳಿಯ ಕಿಮ್ಸ ನಲ್ಲಿ ಎಂಟು ಜನ ಕೋವಿಡ್ ನಿಂದ ಚಿಕಿತ್ಸೆ ಫಲಿಸದೆ […]

ಜಿಲ್ಲೆ

ಧಾರವಾಡದ ಹಿರಿಯ ಕಾಂಗ್ರೆಸ್ ನಾಯಕಿ ಡಾ. ಶಾಂತಾ ಹಲಗಿ ನಿಧನ

ಧಾರವಾಡ prajakiran.com : ಧಾರವಾಡದ ಹಿರಿಯ ಕಾಂಗ್ರೆಸ್ನಾಯಕಿ ಡಾ. ಶಾಂತಾ ಹಲಗಿ (67) ಬುಧವಾರ ನಿಧನ ಹೊಂದಿದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಡಾ. ಹಲಗಿ ಧಾರವಾಡದ ನಿವಾಸದಲ್ಲಿ ಇಹಲೋಕ ತ್ಯಜಿಸಿದರು. ಅವರು ಚಲನಚಿತ್ರ ಸೆನ್ಸಾರ್ ಮಂಡಳಿ ಪ್ರಾದೇಶಿಕ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಅಲ್ಲದೆ, ಸಮಾಜ ಕಲ್ಯಾಣ ಸಲಹಾ ಮಂಡಳಿ, ಮದ್ಯಪಾನ ಸಂಯಮ ಮಂಡಳಿ, ರಾಜ್ಯ ಮಹಿಳಾ ಆಯೋಗಗಳಿಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಕೃಷಿ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ವೃತ್ತಿ ಜೀವನ ಆರಂಭ ಮಾಡಿದ್ದ ಹಲಗಿ ಅವರು ಬಳಿಕ ಕಾಂಗ್ರೆಸ್ ಪಕ್ಷದಲ್ಲಿ […]

ಅಪರಾಧ

ದ್ವಿಚಕ್ರ ವಾಹನದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ

ತುಮಕೂರು Prajakiran.com  : ಇಲ್ಲಿನ ಎಸ್. ಎಸ್. ಐ.ಟಿ. ಬಳಿ ದ್ವಿಚಕ್ರ ವಾಹನದಲ್ಲಿ ಗಾಂಜಾ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ತಿರುಪತಿಯ ಇಬ್ಬರು ಯುವಕರನ್ನು ತುಮಕೂರಿನ ಸಿ.ಎ.ಎನ್. ಪೊಲೀಸ್ ಠಾಣೆಯ ಅಧಿಕಾರಿಗಳು ಬಂಧಿಸಿದ್ದಾರೆ. ಇನ್ಸ್ಫೆಕ್ಟರ್ ಎಂ. ವಿ.ಶೇಷಾದ್ರಿ ನೇತೃತ್ವದ ತಂಡ ಇಂದು ಬೆಳಿಗ್ಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಮುಖ್ಯಾ ಧಿಕಾರಿಯವರು ತಿಳಿಸಿದ್ದಾರೆ. ಕಿರಣ್ (20) ಮತ್ತು ಪವನ್(19) ಬಂಧಿತ ಆರೋಪಿಗಳು. ತಿರುಪತಿಯ ಯುವಕರು ಕೆಎ06ಹೆಚ್ ಎ 7548 ಎಂಬ ವಾಹನದಲ್ಲಿ ತಿರುಪತಿಯಿಂದ ಗಾಂಜಾ ತಂದು  ಮಾರಾಟಮಾಡುತ್ತಿದ್ದುದಾಗಿ […]

ರಾಜ್ಯ

ದೇವರ ಮುಂದೆ ಮಗುವಿನ ಶವ ಇಟ್ಟು ಬದುಕಿಸು ಎಂದು ಗಂಟೆ ಬಾರಿಸಿದ ಅಜ್ಜಿ

ಉತ್ತರಕನ್ನಡ prajakiran.com : ಮಗುವಿನ ಗಂಟಲಲ್ಲಿ ಶೇಂಗಾ ಸಿಕ್ಕಿಹಾಕಿಕೊಂಡು ಉಸಿರುಗಟ್ಟಿ ಮೃತಪಟ್ಟಿದ್ದು, ಆತನ ಅಜ್ಜಿ ಗಣಪತಿ ದೇವಸ್ಥಾನಕ್ಕೆ ತೆರಳಿ ಮಗುವಿನ ಶವವಿಟ್ಟು , ಬದುಕಿಸುವಂತೆ ಪ್ರಾರ್ಥಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನದಲ್ಲಿ ನಡೆದಿದೆ. ಇಲ್ಲಿನ ರಾಮನಾಥ ಆಚಾರಿ ಎಂಬುವವರ ಎರಡೂವರೆ ವರ್ಷದ ಮಗು ಸಾತ್ವಿಕ್ ಮೃತಪಟ್ಟ ಬಾಲಕ.  ಸಾತ್ವಿಕ್ ಮನೆಯಲ್ಲಿ  ಸಂಜೆ ಶೇಂಗಾ ಬೀಜ ತಿನ್ನುತ್ತಿದ್ದಾಗ ಅಚಾನಕ್ ಆಗಿ ಗಂಟಲಲ್ಲಿ ಸಿಲುಕಿಕೊಂಡವು.  ಉಸಿರಾಡಲು ತೊಂದರೆ ಪಡುತ್ತಿದ್ದ ಮಗು ಕಂಡು  ಮನೆಯವರು ತಕ್ಷಣ,   ಗಂಟಲಿನಿಂದ ಶೇಂಗಾ […]

ಅಂತಾರಾಷ್ಟ್ರೀಯ

ಸಿಂಗಾಪುರದಲ್ಲಿ ಹೊಸ ಕೋವಿಡ್ ತಳಿ ಪತ್ತೆಯಾಗಿಲ್ಲ : ಕೇಜ್ರಿವಾಲ್ ಹೇಳಿಕೆಗೆ ಆಕ್ಷೇಪ

ನವದೆಹಲಿ prajakiran.com : ಸಿಂಗಾಪುರದಲ್ಲಿ ಹೊಸ ಕೋವಿಡ್ ಸೋಂಕು ಪತ್ತೆಯಾಗಿದ್ದು, ಇದು ಮಕ್ಕಳಿಗೆ ಹೆಚ್ಚು ಅಪಾಯಕಾರಿ ಎಂಬ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಹೇಳಿಕೆಯನ್ನು ಸಿಂಗಾಪುರ್ ನಿರಾಕರಿಸಿದ್ದು, ಕೇಜ್ರಿವಾಲ್ ಅವರ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದು ಸಿಂಗಾಪುರ್ ಆರೋಗ್ಯ ಸಚಿವಾಲಯ ಪ್ರತಿಕ್ರಿಯೆ ನೀಡಿದೆ. ಅರವಿಂದ್ ಕೇಜ್ರಿವಾಲ್ ಅವರು ಮಂಗಳವಾರ, ಸಿಂಗಾಪುರದಲ್ಲಿ ಪತ್ತೆಯಾಗಿರುವ ಕೋವಿಡ್ ಹೊಸ ತಳಿಯ ಸೋಂಕು ಮಕ್ಕಳಿಗೆ ಹೆಚ್ಚು ಅಪಾಯಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಸಿಂಗಾಪುರದಿಂದ ಆಗಮಿಸುವ ಎಲ್ಲಾ ವಿಮಾನ ಸಂಚಾರವನ್ನು ನಿರ್ಬಂಧಿಸಬೇಕು ಎಂದು […]