ರಾಜ್ಯ

ರಾಜ್ಯದ ವಕೀಲರ ಹಿತ ಕಾಯಲು 100 ಕೋಟಿ ನೀಡಲು ಒತ್ತಾಯ

ಧಾರವಾಡ prajakiran.com : ಕೊವಿಡ್ -19‌ ವೈರಸ್ ಪರಿಣಾಮವಾಗಿ ಕಳೆದ ವರ್ಷವೂ ಕೇಲವೇ ದಿನಗಳು ಮಾತ್ರ ಕಾರ್ಯಲಾಪಗಳು ನಡೆದವು.

ಅಲ್ಲದೇ ಅಧಿವಿಚಾರಣಾ ನ್ಯಾಯಾಲಯಗಳಲ್ಲಿ ದಿನಕ್ಕೆ 20-30 ಪ್ರಕರಣಗಳನ್ನು ಮಾತ್ರ ನಡೆಸುವುದಕ್ಕೆ ನಿರ್ಧರಿಸಲಾಗಿತ್ರು.

ಈ ವರ್ಷವೂ ಕೂಡಾ ಹಲವು ಷರತ್ತುಗಳ ಹಾಗೂ ನಿರ್ಬಂಧಗಳ ಅನ್ವಯ ನ್ಯಾಯಾಲಯದ ಕಾರ್ಯಕಲಾಪಗಳು ನಡೆಯುತ್ತಿದ್ದವು.

ಈ ಎರಡನೇ ಅಲೇಯ ಪರಿಣಾಮವಾಗಿ ಸರಕಾರ ಲಾಕ್ ಡೌನ್ ಘೋಷಣೆ ಮಾಡಲಾಗಿದೆ.

ನ್ಯಾಯಾಲಯದ ಕಾರ್ಯಕಲಾಪಗಳು ಸುಗಮವಾಗಿ ಹಾಗೂ ಸರಾಗವಾಗಿ ನಡೆದಲ್ಲಿ ಮಾತ್ರ ಪಕ್ಷಗಾರರು ನ್ಯಾಯಾಲಯಕ್ಕೆ ಬರಲು ಅನುಕೂಲವಾಗುತ್ತದೆ.

ಅಲ್ಲದೇ ವಕೀಲರಿಗೆ ಆದಾಯವೂ ಬರುತ್ತದೆ.
ಲಾಕ್ ಡೌನ್ ಘೋಷಣೆಯಿಂದಾಗಿ
ಈಗ ನ್ಯಾಯಾಲಯದ ಕಾರ್ಯ ಕಲಾಪಗಳು ಸ್ಥಗಿತಗೊಂಡಿವೆ.

ಕೇವಲ ತುರ್ತು ಪ್ರಕರಣಗಳ ವಿಚಾರಣೆ ಮಾತ್ರ ನಡೆಯುತ್ತಿರುವದರಿಂದ ವಕೀಲರಿಗೆ ಯಾವದೇ ಆದಾಯ ಬರುತ್ತಿಲ್ಲ.

ಈಗ ತಾನೆ ವೃತ್ತಿಗೆ ಬಂದ ವಕೀಲರು ಹಾಗೂ ಯುವ ವಕೀಲರಿಗೆ ಆದಾಯ ಬಹಳ ಕಡಿಮೆ ಇರುತ್ತದೆ.

ಕೋರ್ಟ್ ಕಲಾಪಗಳು ನಡೆಯದ್ದರಿಂದ ಯುವ ವಕೀಲರು ತೀವ್ರವಾದ ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ.

ಇನ್ನುಮುಂದೆಯೂ ಕೂಡಾ ಮೂರನೇ ಅಲೇಯ ಭಯ ಹಾಗೂ ಭೀತಿ ವಕೀಲರನ್ನು ಕಾಡುತ್ತಿದೆ.

ಈ ಸಂಕಷ್ಟದ ಸಂದರ್ಭದಲ್ಲಿ ಸರಕಾರಗಳು ವಕೀಲರ ಹಿತ ಕಾಪಾಡಲು ಯಾವದೇ ಯೋಜನೆಯನ್ನು ಜಾರಿಗೊಳಿಸಿಲ್ಲ.

ವಕೀಲರು ಕೂಡಾ ನೀತ್ಯ ಸಾರ್ವಜನಿಕ ಸಂಪರ್ಕ ಹೊಂದುವದರಿಂದಾಗಿ ಕೇಲವು ವಕೀಲರು ಕೊವಿಡ್ ಬಾದಿತರಾಗಿ ಪ್ರಾಣ ಕಳೆದುಕೊಂಡಿದ್ದಾರೆ.

ಪ್ರಾಣ ಕಳೆದುಕೊಂಡ ವಕೀಲರ ಕುಟುಂಬದವರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಕಳೆದ ಬಜೆಟ್ ನಲ್ಲಿಯೋ ಕೂಡಾ ವಕೀಲರಿಗಾಗಿ ಯಾವದೇ ಯೋಜನೆ ರೂಪಿಸಿಲ್ಲ ಹಾಗೂ ಯಾವದೇ ರೀತಿಯ ಹಣ ಮೀಸಲು ಇಟ್ಟಿಲ್ಲ..

ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಹಾಗೂ ಹಲವಾರು ವಕೀಲರ ಸಂಘಟನೆಗಳು ಸರಕಾರಕ್ಕೆ ಮನವಿ ಸಲ್ಲಿಸಿದರೂ ಕೂಡಾ ಸರಕಾರ ವಕೀಲರ ಸಮುದಾಯವನ್ನು ಕಡೆಗಣಿಸುತ್ತಲೇ ಬಂದಿದೆ.

ಇಂದು ರಾಜ್ಯ ಸರಕಾರ ಘೋಷಣೆ ಮಾಡಿದ ಪ್ಯಾಕೇಜ್ ನಲ್ಲಿ ಲಾಕ್ ಡೌನ್ ಪರಿಣಾಮವಾಗಿ ಸಂಕಷ್ಟಕ್ಕಿಡಾದ ವಕೀಲರಿಗೆ ಸರಕಾರ ಯಾವದೇ ರೀತಿಯ ಹಣಕಾಸಿನ ಸಹಾಯ ನೀಡಿಲ್ಲ.

ವಕೀಲರಿಗೆ ಸಹಾಯಕವಾಗಲೂ
ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿಗೂ ಕೂಡಾ ಯಾವುದೇ ರೀತಿಯ ಹಣಕಾಸು ಅನುದಾನ ಸಹಾಯ ಒದಗಿಸಿಲ್ಲ.

ಹಲವಾರು ವಕೀಲರು ಸಂಕಷ್ಟಕ್ಕಿಡಾಗಿದ್ದಾರೆ. ಕೂಡಲೇ ಸರಕಾರ ವಕೀಲರಿಗಾಗಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು

ಹಾಗೂ ವಕೀಲರ ಹಿತ ಕಾಯಲು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿಗೆ 100 ಕೂಟಿ ರೂಪಾಯಿ ಹಣಕಾಸಿನ ಸಹಾಯ ನೀಡಲು ಅಖಿಲ ಭಾರತ ವಕೀಲರ ಒಕ್ಕೂಟ AILU ಕರ್ನಾಟಕ ರಾಜ್ಯ ಸಮಿತಿ ಸರಕಾರವನ್ನು ಒತ್ತಾಯಿಸುತ್ತದೆ.

ಕೆ.ಎಚ್.ಪಾಟೀಲ ವಕೀಲರು,
ರಾಜ್ಯ ಜಂಟಿ ಕಾರ್ಯದರ್ಶಿ
ಅಖಿಲ ಭಾರತ ವಕೀಲರ ಒಕ್ಕೂಟ ಕರ್ನಾಟಕ ರಾಜ್ಯ ಸಮಿತಿ
9986982130

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *