ಧಾರವಾಡ ಜಿಲ್ಲೆಯಲ್ಲಿ 871 ಸೋಂಕಿತರು, 10 ಜನ ಸಾವು
ಧಾರವಾಡ prajakiran.com : ಧಾರವಾಡ ಜಿಲ್ಲೆಯ ಕರೋನಾ ಪಾಸಿಟಿವ್ ಪ್ರಕರಣ ದಿನದಿಂದ ದಿನಕ್ಕೆ ಏರುತ್ತಲೇ ಸಾಗಿದೆ.
ಸೋಂಕಿತರ ಸಂಖ್ಯೆ ಬುಧವಾರ ಮತ್ತೆ ಕಡಿಮೆಯಾಗಿದೆ.
ಇಂದು ಮತ್ತೆ 871 ಜನರಿಗೆ ಕರೋನಾ ಪಾಸಿಟಿವ್ ಬಂದಿದೆ.
ದುರಂತದ ಸಂಗತಿಯೆಂದರೆ ಇಂದು ಬರೋಬ್ಬರಿ 10 ಸೋಂಕಿತರು ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾರೆ.
ಧಾರವಾಡದ ಎಸ್ ಡಿಎಂ ನಲ್ಲಿ ಇಬ್ಬರು ಹಾಗೂ ಹುಬ್ಬಳ್ಳಿಯ ಕಿಮ್ಸ ನಲ್ಲಿ ಎಂಟು ಜನ ಕೋವಿಡ್ ನಿಂದ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ ಎಂದು ಹೆಲ್ತ್ ಬುಲೆಟಿನ್ ತಿಳಿಸಿದೆ.
ಆತಂಕದ ವಿಚಾರವೆಂದರೆ 557 ಜನ ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 6477 ಕ್ಕೆ ಎರಿಕೆ ಆಗಿದೆ.
ಸಮಾಧಾನದ ಸಂಗತಿಯೆಂದರೆ ಸೋಂಕಿತರು 582 ಗುಣಮುಖರಾಗಿ
ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.