ಧಾರವಾಡ ಪ್ರಜಾಕಿರಣ. ಕಾಮ್ : ಧಾರವಾಡದ ಮರಾಠಾ ವಿದ್ಯಾ ಪ್ರಸಾರಕ ಮಂಡಳಿಯ ಚುನಾವಣೆಯಲ್ಲಿ ಮನೋಹರ ಮೋರೆ ತಂಡ ಮತ್ತೊಮ್ಮೆ ಜಯಭೇರಿ ಬಾರಿಸಿದೆ. ಆ ಮೂಲಕ ಅಧಿಕಾರದ ಗದ್ದುಗೆ ಉಳಿಸಿಕೊಂಡಿದೆ.
ಮರಾಠಾ ವಿದ್ಯಾ ಪ್ರಸಾರಕ ಮಂಡಳಿಯ ಮತದಾರರು ಮನೋಹರ ಮೋರೆ ತಂಡದ ಕೈ ಹಿಡಿದಿದ್ದು , ಮೂರನೇ ಬಾರಿಗೆ ಮನೋಹರ ಮೋರೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ .
ಧಾರವಾಡ ಮರಾಠಾ ವಿದ್ಯಾ ಪ್ರಸಾರಕ ಮಂಡಳಿಯ ಕಚೇರಿ ಮುಂದೆ ಜಮಾಯಿಸಿದ ಮನೋಹರ ಮೋರೆ ತಂಡದ ಬೆಂಬಲಿಗರು ವಿಜಯೋತ್ಸವ ಆಚರಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.