ರಾಜ್ಯ

ಧಾರವಾಡದಲ್ಲಿ ಆಮ್ ಆದ್ಮಿ ಪಕ್ಷದಿಂದ ಪ್ರತಿಭಟನೆ

ಧಾರವಾಡ : ಕೆ.ಐ.ಎ.ಡಿ.ಬಿ ಗಾಮನಗಟ್ಟಿ ಪ್ರದೇಶದ ನಿರ್ವಹಣೆ, ನಿವೇಶನಗಳ ಬೆಲೆ ಹೆಚ್ಚಳ ಹಿಂಪಡೆಯುವುದು ಮತ್ತು ಪರಿಣಾಮಕಾರಿ ಸಿಂಗಲ್  ವಿಂಡೋ ಸಿಸ್ಟಮ್ ಹಾಗೂ ಹಸ್ತಾಂತರ ನೀತಿ ಜಾರಿ ಮಾಡಬೇಕೆಂದು ಆಗ್ರಹಿಸಿ ಶನಿವಾರ ಆಮ್ ಆದ್ಮಿ ಪಕ್ಷದ ವತಿಯಿಂದ ಪ್ರತಿಭಟನೆ ನಡೆಯಿತು.

ಧಾರವಾಡದ ಲಕ್ಕಮ್ಮನಹಳ್ಳಿಯಲ್ಲಿರುವ ಕೆಐಎಡಿಬಿ ಕಚೇರಿ ಎದುರು ಜಿಲ್ಲಾಧ್ಯಕ್ಷ ಸಂತೋಷ ನರಗುಂದ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಗೆ ಹಲವರು ಸಾಕ್ಷಿಯಾದರು.

ಈ ವೇಳೆ ಕೆಐಎಡಿಬಿಯ ಕೈಗಾರಿಕಾ ವಿರೋಧಿ ನಡೆಯ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು.

ವಿವಿಧ ಕೈಗಾರಿಕಾ ಪ್ರದೇಶಗಳಿಂದ ಉದ್ಯಮಿಗಳು ಧರಣಿ ಸ್ಥಳಕ್ಕೆ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಹಲವು ವರ್ಷಗಳಿಂದ ಎದುರಿಸುತ್ತುರುವ ಅನೇಕ ಸಮಸ್ಯೆಗಳ ಕುರಿತು ಮನ ಬಿಚ್ಚಿ ಮಾತನಾಡಿದರು.

ನಂತರ ವಿಸ್ತೃತ ವರದಿ ಜೊತೆಗೆ ಮನವಿ ಪತ್ರವನ್ನು ಕೆಐಎಡಿಬಿ ಅಭಿವೃದ್ಧಿ ಅಧಿಕಾರಿಗಳ ಮೂಲಕ   ಬೃಹತ್ ಕೈಗಾರಿಕಾ ಸಚಿವರಿಗೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಪಕ್ಷದ ಕೈಗಾರಿಕೋದ್ಯಮ ಉಪಸಮಿತಿಯ ಉಸ್ತುವಾರಿ ಶಶಿಕುಮಾರ್ ಸುಳ್ಳದ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ವಿಕಾಸ ಸೊಪ್ಪಿನ, ಅನಂತಕುಮಾರ ಭಾರತೀಯ, ಪ್ರತಿಭಾ ದಿವಾಕರ, ಶಿವಕಿರಣ ಅಗಡಿ, ಯುವ ಘಟಕದ ಉಸ್ತುವಾರಿ ಡೇನಿಯಲ್ ಐಕೋಸ್, ಮುಖಂಡರಾದ  ಶಿವಕುಮಾರ್ ಬಾಗಲಕೋಟ, ಮೆಹಬೂಬ್ ಹರವಿ, ಮಂಜುನಾಥ ಸುಳ್ಳದ, ಭೀಮಪ್ಪ ಪೂಜಾರ, ಲತಾ ಅಂಗಡಿ, ಸನಾ ಕುದುರಿ, ಹಸನ್ ಅಲಿ ಶೇಖ, ವೀರೇಂದ್ರ ಸಾಂಬ್ರಾಣಿ, ಮಾಂತೇಶ ದಿಂಡಲಕೊಪ್ಪ, ಮನೋಹರ ಸುಗನಾನಿ, ಮಹಮ್ಮದ್ ಅರಾಫಾತ್, ಅಭಿಷೇಕ ಲದ್ವಾ ಸೇರಿದಂತೆ ಮುಂತಾದವರು ಇದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *