ರಾಜ್ಯ

ಬೆಳಗಾವಿ, ಬಾಗಲಕೋಟೆಯ ಪ್ರವಾಹ ಪ್ರೀಡಿತ ಪ್ರದೇಶಗಳ ವೈವಾನಿಕ ಸಮೀಕ್ಷೆ

ಬೆಳಗಾವಿ/ ಬಾಗಲಕೋಟೆ prajakiran.com : ಉತ್ತರಕರ್ನಾಟಕ ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದ ಸಂಭವಿಸಿದ ಅಪಾರ ಹಾನಿಯ ವೈಮಾನಿಕ ಸಮೀಕ್ಷೆಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಂಗಳವಾರ ನಡೆಸಿದರು. ಬೆಳಗಾವಿಹಾಗೂ ಬಾಗಲಕೋಟೆ ಜಿಲ್ಲೆಯ ಹಲವು ಪ್ರದೇಶಗಳ ವಸ್ತುಸ್ಥಿತಿಯನ್ನು ಕಣ್ಣಾರೆ ಕಂಡರು. ಜನರಿಗೆ ಆದಅಪಾರ ಹಾನಿ ಕುರಿತು ಕಂದಾಯ ಸಚಿವ ಆರ್. ಅಶೋಕ್, ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ, ಡಿಸಿಎಂ ಲಕ್ಷ್ಮಣ ಸವದಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಂದ ಪಡೆದುಕೊಂಡರು. ಇದಕ್ಕು ಮುನ್ನ ಬೆಳಗಾವಿಯಲ್ಲಿಧಾರವಾಡ, ಬೆಳಗಾವಿ ಹಾಗೂ ಇತರ ಜಿಲ್ಲೆಗಳ ಅಧಿಕಾರಿಗಳ […]

ರಾಜ್ಯ

ಬೆಳಗಾವಿ ಜಿಲ್ಲೆಯಲ್ಲಿ ಮುಂದುವರೆದ ಪ್ರವಾಹ ಭೀತಿ…!?

ಬೆಳಗಾವಿ prajakiran.com : ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಮಲಪ್ರಭಾ ನದಿ ತಟದಲ್ಲಿರುವ ಬೆಳಗಾವಿ ಜಿಲ್ಲೆಯ ನದಿ ಪಕ್ಕದಲ್ಲಿರುವ ಗ್ರಾಮಗಳಿಗೆ ಪ್ರವಾಹ ಭೀತಿ ಶುರುವಾಗಿದೆ. ಅದರಲ್ಲೂ ರಾಮದುರ್ಗ ತಾಲೂಕಿನ  20ಕ್ಕೂ ಅಧಿಕ ಗ್ರಾಮಗಳಿಗೆ ಸಂಕಷ್ಟ ಎದುರಾಗಿದೆ. ಮುಳುಗಡೆ ಭೀತಿಯಲ್ಲಿಯೇ ಜನ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಕಾಲಕಳೆಯುತ್ತಿದ್ದಾರೆ. ಇದೇ ವೇಳೆ ತಾಲೂಕಿನ ಕಿಲ್ಲಾ ತೋರಗಲ್ ಗ್ರಾಮದ ಶೆಟ್ಟಮ್ಮ ದೇವಿ ದೇವಸ್ಥಾನದ ಗರ್ಭಗುಡಿಗೆ ನೀರು ನುಗ್ಗಿದೆ. ರೈತರು ಬೆಳೆದ ನೂರಾರು ಎಕರೆ ಬೆಳೆಗಳು ಜಲಾವೃತಗೊಂಡಿವೆ. Share on: WhatsApp

ಜಿಲ್ಲೆ

ಸಮಾಜ ಪುಸ್ತಕಾಲಯದ ಮನೋಹರ ಘಾಣೇಕರ್ ಇನ್ನಿಲ್ಲ

ಧಾರವಾಡ prajakiran.com : ನಾಡಿನ ಪ್ರತಿಷ್ಠಿತ ಪ್ರಕಾಶನಗಳಲ್ಲಿ ಒಂದಾಗಿರುವ ಧಾರವಾಡದ ಸಮಾಜ ಪುಸ್ತಕಾಲಯದ  ಮನೋಹರ ಘಾಣೇಕರ್ (83) ಗುರುವಾರ ಸಂಜೆ ವಿಧಿವಶರಾಗಿದ್ದಾರೆ. ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ತಮ್ಮ ಪುತ್ರನ ಜೊತೆಗೆ ಬೈಲಹೊಂಗಲದಲ್ಲಿ ವಾಸವಾಗಿದ್ದರು. ಅವರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.  ಆದರೆ ಚಿಕಿತ್ಸೆ ಫಲಿಸದೆ ಅವರು ವಿಧಿವಶರಾಗಿದ್ದಾರೆ. ಕನ್ನಡ ಸಾಹಿತ್ಯ ಲೋಕದ ದಿಗ್ಗಜ ಲೇಖಕರ ಕೃತಿಗಳನ್ನು ಅವರು ತಮ್ಮ ಸಮಾಜ ಪುಸ್ತಕಾಲಯ ಪ್ರಕಾಶನದಿಂದ ಪ್ರಕಟಿಸಿದ್ದರು. ಅವರ ತಮ್ಮ ರವೀಂದ್ರ ಘಾಣೇಕರ್ […]

ರಾಜ್ಯ

ರಾಜ್ಯದಲ್ಲಿ ಗುರುವಾರ 7385 ಕರೋನಾ, 102 ಸಾವು

ರಾಜ್ಯದಲ್ಲಿ 6231 ಜನ ಬಿಡುಗಡೆ ಬೆಂಗಳೂರು prajakiran.com : ರಾಜ್ಯದಲ್ಲಿ ಗುರುವಾರವೂ ಮಹಾಮಾರಿ ಕರೋನಾ ಅಟ್ಟಹಾಸ ಮುಂದುವರೆದಿದ್ದು, ಇಂದು ಕೂಡ ವಿವಿಧ ಜಿಲ್ಲೆಗಳಲ್ಲಿ 102 ಜನ ಸಾವನ್ನಪ್ಪಿದ್ದಾರೆ. ಮತ್ತೆ ಹೊಸದಾಗಿ 7385 ಜನರಿಗೆ ಸೋಂಕು ಹರಡಿದ್ದರಿಂದ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ   2,56,975  ಕ್ಕೆ  ಏರಿಕೆಯಾಗಿದೆ.  ಇಂದು ರಾಜ್ಯದಲ್ಲಿ 6231 ಜನ ಬಿಡುಗಡೆಗೊಂಡಿದ್ದು, ಈವರೆಗೆ ಒಟ್ಟು 1,70,381 ಜನ ಗುಣಮುಖರಾಗಿದ್ದು,  82,149 ಸಕ್ರಿಯ ಪ್ರಕರಣಗಳಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  705 ಜನ ಐಸಿಯುನಲ್ಲಿ ಚಿಕಿತ್ಸೆ […]

ಜಿಲ್ಲೆ

ನೈತಿಕ ಜವಾಬ್ದಾರಿ ಅರಿತು ಶಿಕ್ಷಕರು ಕೆಲಸ ನಿರ್ವಹಿಸಲಿ

೧೩೨ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರಾಗಿ ಬಡ್ತಿ  ಧಾರವಾಡ orajakiran.com : ಶಾಲೆಯ ಮುಖ್ಯಾಧ್ಯಾಪಕರು ನಿರಂತರ ಕ್ರಿಯಾಶೀಲ ನೆಲೆಯಲ್ಲಿ ತಮ್ಮ ನೈತಿಕ ಜವಾಬ್ದಾರಿ ಅರಿತು ಕೆಲಸ ನಿರ್ವಹಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಳಗಾವಿ ವಿಭಾಗದ ಹೆಚ್ಚುವರಿ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಹೇಳಿದರು. ಅವರು ಗುರುವಾರ ಬೆಳಗಾವಿ ವಿಭಾಗ ಮಟ್ಟದ ಕೌನ್ಸೆಲಿಂಗ್‌ದಲ್ಲಿ ಸರಕಾರಿ ಪ್ರೌಢ ಶಾಲಾ ಗ್ರೇಡ್-೨ ಸಹ ಶಿಕ್ಷಕ ವೃಂದದಿಂದ ಸರಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಗ್ರುಪ್-ಬಿ ವೃಂದಕ್ಕೆ ಬಡ್ತಿ   ಪಡೆದ ಶಿಕ್ಷಕ-ಶಿಕ್ಷಕಿಯರಿಗೆ […]

ರಾಜ್ಯ

ಬೆಳಗಾವಿಯಲ್ಲಿ ಮಳೆ ಹೊಡೆತಕ್ಕೆ ಟ್ರ್ಯಾಕ್ಟರ್ ಅಡಿ ಜೀವನ…!

ಬೆಳಗಾವಿ prajakiran.com : ಮಹಾರಾಷ್ಟ್ರದ ಪಶ್ಚಿಮ ಘಟ್ಟ ಹಾಗೂ ಗಡಿನಾಡು ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ಬಿಡುವಿಲ್ಲದೆ ಸುರಿಯುತ್ತಿರುವ ಧಾರಕಾರ ಮಳೆ ಹಲವರನ್ನು ಬೀದಿಪಾಲು ಮಾಡಿದೆ. ಗೋಕಾಕ ತಾಲೂಕಿನ ಹಡಗಿನಾಳ ಗ್ರಾಮದ ಕುಟುಂಬವೊಂದು ಕಳೆದ ನಾಲ್ಕು ದಿನಗಳಿಂದ ರಸ್ತೆ ಬದಿಯೇ ಟ್ರ್ಯಾಕ್ಟರ್ ಟ್ರೇಲರ್ ನಲ್ಲಿಯೇ, ಐವರು ಮಕ್ಕಳು, ಹಿರಿಯರು ಸಮೇತ ವಾಸವಾಗಿದ್ದಾರೆ. ಘಟಪ್ರಭಾ ಪ್ರವಾಹಕ್ಕೆ ಸಿಲುಕಿದ ಇವರ ಮನೆಗೆ ನೀರು ನುಗ್ಗಿದ್ದರಿಂದ ಸುರಕ್ಷಿತ ಸ್ಥಳಕ್ಕೆ ತೆರಳಲು ಸಾಧ್ಯವಾಗದೆ, ನಾಲ್ಕು ಕಿ,ಮೀ ದೂರ ಬಂದು ರಸ್ತೆ ಬದಿಯಲ್ಲಿಯೇ […]

ರಾಜ್ಯ

ಕೃಷ್ಣಾ ನದಿ ಹಿನ್ನಿರಿನಿಂದ ಜಮಖಂಡಿ ತಾಲೂಕಿನ ಹಲವು ಗ್ರಾಮಗಳ ಸಂಪರ್ಕ ಕಡಿತ

ಬಾಗಲಕೋಟೆ prajakiran.com : ಮಹಾರಾಷ್ಟ್ರದ ಪಶ್ಚಿಮಘಟ್ಟದಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ಅದೇ ರೀತಿ ಉತ್ತರಕರ್ನಾಟಕದ ಬೆಳಗಾವಿ, ಧಾರವಾಡ, ಬಾಗಲಕೋಟೆ,ಗದಗ ಜಿಲ್ಲೆಯ ನದಿಗಳಾದ  ಕೃಷ್ಣಾ, ಘಟಪ್ರಭಾ ಹಾಗೂ ಮಲಪ್ರಭಾ ನದಿಗಳು‌ ತುಂಬಿ ಹರಿಯುತ್ತಿವೆ. ಇದರಿಂದಾಗಿ‌ ನದಿಗಳ ಪಾತ್ರದ ಗ್ರಾಮಗಳಲ್ಲಿ ಪ್ರವಾಹದ ಭೀತಿ ಉಂಟಾಗಿದ್ದು,  ಆ ಭಾಗದ ಜನರು ಆತಂಕಗೊಂಡಿದ್ದು, ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬದುಕುತ್ತಿದ್ದಾರೆ. ಮಂಗಳವಾರ   ಜಮಖಂಡಿ ತಾಲೂಕಿನ ಶುರರ್ಪಾಲಿ,ಜುಂಝರವಾಡ , ತುಬಚಿ,ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ, ಸೇತುವೆಗಳ ಮೇಲೆ ನೀರು ಹರಿಯುತ್ತಿರುವುದರಿಂದ ಸಂಪರ್ಕ ಕಡಿತಗೊಂಡಿದೆ. Share […]

ರಾಜ್ಯ

ಪತ್ರಕರ್ತನಿಗೆ ಕಿತ್ತೂರ ಪಿಎಸ್ ಐ ಧಮ್ಕಿ…!

ಬೆಳಗಾವಿ prajakiran.com : ಬೆಳಗಾವಿ ಜಿಲ್ಲೆಯ ಎಂ ಕೆ ಹುಬ್ಬಳ್ಳಿಯಲ್ಲಿ ಸೈಕಲ್ ಮೇಲೆ ಶವ ಸಾಗಿಸಿದ ಘಟನೆ ಕುರಿತು ವರದಿ ಮಾಡಿರುವ ಪತ್ರಕರ್ತನಿಗೆ ಕಿತ್ತೂರ ಪಿಎಸ್ ಐ ಕರೆ ಮಾಡಿ ಧಮ್ಕಿ ಹಾಕಿರುವ ಘಟನೆ ನಡೆದಿದೆ. ಪತ್ರಕರ್ತನಿಗೆ ಧಮ್ಕಿ ಹಾಕಿದ ಕಿತ್ತೂರು ಪಿಎಸ್ಐ ಅವರಿಗೆ ಬೆಳಗಾವಿ ಪ್ರಭಾರಿ ಎಸ್ಪಿ ಅಮರನಾಥ್ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ತೀವ್ರ ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೊರೋನಾ ಲಕ್ಷಣ ಹಿನ್ನಲೆಯಲ್ಲಿ ಆಸ್ಪತ್ರೆಗೆ […]

ರಾಜ್ಯ

ಬೆಳಗಾವಿ ವಕೀಲರ ಸಂಘದ ಅಧ್ಯಕ್ಷ ಅನೀಲ ಮುಳವಾಡಮಠ ಇನ್ನಿಲ್ಲ

ಬೆಳಗಾವಿ prajakiran.com : ರಾಜ್ಯ ವಕೀಲ ಪರಿಷತ್ತಿನ ಮಾಜಿ ಅಧ್ಯಕ್ಷರು ಮತ್ತು ಬೆಳಗಾವಿ ವಕೀಲರ ಸಂಘದ ಹಾಲಿ ಅಧ್ಯಕ್ಷರಾಗಿದ್ದ ಅನೀಲ ಜಿ.ಮುಳವಾಡಮಠಅವರು ಭಾನುವಾರ ನಿಧನ ಹೊಂದಿದ್ದಾರೆ. ಅವರನ್ನು ಅನಾರೋಗ್ಯದ ಹಿನ್ನಲೆಯಲ್ಲಿ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ವಿಧಿವಶರಾಗಿದ್ದಾರೆ. ಅವರಿಗೆ ಕೋವಿಡ್ ಪಾಸಿಟಿವ್ ದೃಢವಾಗಿತ್ತು ಎನ್ನಲಾಗಿದೆ. ಹೀಗಾಗಿ ಅವರ ಕುಟುಂಬದವರನ್ನು ಹೋಂ ಕ್ವಾರಂಟಿನ್ ಮಾಡಲಾಗಿದೆ. ಮುಳುವಾಡಮಠ ಅವರು ದಿಟ್ಟ ಹೋರಾಟಗಾರರು, ಪಾದರಸ ವ್ಯಕ್ತಿತ್ವದ ಸ್ಫೂರ್ತಿಯ ಚೇತನರು,ಬೆಳಗಾವಿ ಜಿಲ್ಲೆಯ ವಕೀಲ ಸಮುದಾಯಕ್ಕೆ ಮುಕುಟ ಪ್ರಾಯರಾಗಿದ್ದರು. […]